ಬ್ರೇಕಿಂಗ್ ನ್ಯೂಸ್
01-09-25 01:06 pm HK News Desk ದೇಶ - ವಿದೇಶ
ನವದೆಹಲಿ, ಸೆ.1 : ಸುಂಕ ಸಮರದ ಮೂಲಕ ಭಾರತವನ್ನು ತನ್ನ ನಿಯಂತ್ರಣಕ್ಕೆ ತರಲು ಹವಣಿಸುತ್ತಿರುವ ಅಮೆರಿಕದ ವಿರುದ್ಧ ಅಭಿಯಾನ ಆರಂಭಗೊಂಡಿದೆ. ಭಾರತದಲ್ಲಿ ಅಮೆರಿಕನ್ ಕಂಪನಿಗಳಿಗೆ ಪರಿಣಾಮ ತಟ್ಟಲಾರಂಭಿಸಿದ್ದು, ಪೆಪ್ಸಿಯಿಂದ ಮೆಕ್ ಡೊನಾಲ್ಡ್ ವರೆಗಿನ ದೈತ್ಯ ಸಂಸ್ಥೆಗಳು ಬಾಯ್ಕಾಟ್ ಬಿಸಿ ಎದುರಿಸುತ್ತಿವೆ. ಇದೇ ವೇಳೆ, ಅಮೆರಿಕದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಬಾ ರಾಮ್ದೇವ್ ಕರೆ ನೀಡಿದ್ದಾರೆ.
ಪೆಪ್ಸಿ, ಕೋಕಾ-ಕೋಲಾ, ಸಬ್ವೇ, ಕೆಎಫ್ಸಿ, ಮೆಕ್ ಡೊನಾಲ್ಡ್ಸ್ ಮಾದರಿಯ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಬಹುದೊಡ್ಡ ಮಾರುಕಟ್ಟೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50 ಶೇಕಡಾ ಸುಂಕ ವಿಧಿಸಿದ ಬೆನ್ನಲ್ಲೇ ದೇಶದಾದ್ಯಂತ ಅಮೆರಿಕ ವಿರೋಧಿ ಭಾವನೆ ಆವರಿಸಿದ್ದು ದೊಡ್ಡ ಕಂಪನಿಗಳ ಉತ್ಪನ್ನಗಳಿಗೆ ಬಿಸಿ ತಟ್ಟತೊಡಗಿದೆ.

ಟ್ರಂಪ್ ಸುಂಕಗಳಿಗೆ ಪ್ರತಿಯಾಗಿ ಯೋಗ ಗುರು ಬಾಬಾ ರಾಮದೇವ್, ಎಲ್ಲಾ ಅಮೇರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತೀಯರಿಗೆ ಸಲಹೆ ನೀಡಿದ್ದಾರೆ. "ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್ಸಿ ಅಥವಾ ಮೆಕ್ಡೊನಾಲ್ಡ್ಸ್ ಕೌಂಟರ್ಗಳಲ್ಲಿ ಒಬ್ಬ ಭಾರತೀಯನೂ ಕಾಣಿಸಬಾರದು. ಅಂತಹ ಬೃಹತ್ ಬಹಿಷ್ಕಾರ ಇರಬೇಕು. ಇದು ಸಂಭವಿಸಿದಲ್ಲಿ ಅಮೆರಿಕದಲ್ಲಿ ಆರ್ಥಿಕ ಅವ್ಯವಸ್ಥೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಕೆನಡಾ ದೇಶಗಳಲ್ಲಿ ಅಮೆರಿಕ ವಿರೋಧಿ ಬಹಿಷ್ಕಾರಗಳು ಮೊಳಗಿದ್ದು ಅಮೆರಿಕದ ಒಳಗಡೆಯೂ ಟ್ರಂಪ್ ನೀತಿಗೆ ವಿರುದ್ಧವಾಗಿ ಧ್ವನಿ ಕೇಳಿಬಂದಿದೆ. 1.5 ಬಿಲಿಯನ್ ಜನಸಂಖ್ಯೆ ಇರುವ ಭಾರತವು ಅಮೆರಿಕದ ಕಂಪನಿಗಳನ್ನು ಬಹಿಷ್ಕರಿಸಿದರೆ ಆ ದೇಶಕ್ಕೆ ಭಾರೀ ನಷ್ಟ ಮತ್ತು ಗಂಭೀರ ಸವಾಲು ಎದುರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬಯಸುವ ಯಾರಾದರೂ, ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕರು, ದೇಶದ ಹಿತಾಸಕ್ತಿಯ ಬಗ್ಗೆ ಮಾತನಾಡಬೇಕು ಮತ್ತು 'ಸ್ವದೇಶಿ' ಅಭಿಯಾನಕ್ಕೆ ಸಂಕಲ್ಪ ಮಾಡಬೇಕೆಂದು ರಾಮದೇವ್ ಸಲಹೆ ಮಾಡಿದ್ದಾರೆ.
ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥದ ರಾಜಕೀಯವಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಟ್ರಂಪ್ ವಿರುದ್ಧ ರಾಮದೇವ್ ಗುಡುಗಿದ್ದಾರೆ.
As the U.S. intensifies its trade war strategy, allegedly attempting to exert economic control over India through steep tariffs, a wave of anti-American sentiment is sweeping across the country. Leading the charge is yoga guru Baba Ramdev, who has called for a nationwide boycott of American multinational companies operating in India.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am