ಬ್ರೇಕಿಂಗ್ ನ್ಯೂಸ್
29-08-25 10:56 am HK News Desk ದೇಶ - ವಿದೇಶ
ನವದೆಹಲಿ, ಆ.29 : ದೇಶದಲ್ಲಿ ಹಿಂದು - ಮುಸ್ಲಿಮರ ಡಿಎನ್ಎ ಒಂದೇ ಆಗಿದೆ. ದೇಶದ ಹಿತದೃಷ್ಟಿಯಿಂದ ಪ್ರತೀ ಭಾರತೀಯ ಕುಟುಂಬಗಳು ಸರಾಸರಿ ಮೂರು ಮಕ್ಕಳನ್ನು ಹೊಂದಲೇಬೇಕು. ಇದು ದೇಶಕ್ಕೂ ಒಳ್ಳೆಯದು, ಕುಟುಂಬಕ್ಕೂ ಒಳ್ಳೆಯದು. ಅದಕ್ಕಿಂತ ಕಡಿಮೆ ಜನಸಂಖ್ಯೆ ಪ್ರಮಾಣ ಇದ್ದರೆ ಅಂತಹ ಕುಟುಂಬಗಳು ನಶಿಸುತ್ತವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರಕ್ಕಿಂತ ಕಡಿಮೆ ಜನನ ಪ್ರಮಾಣ ದರ ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಕಂಡುಬರುತ್ತಿದೆ. ಆದ್ದರಿಂದ ಎಲ್ಲ ಕುಟುಂಬಗಳು ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗೋದ್ರಿಂದ ಮೂವರು ಮಕ್ಕಳನ್ನು ಹೊಂದಬಹುದು. ಇದರಿಂದ ಪೋಷಕರು ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿರ್ತಾರೆ ಅಂತ ವೈದ್ಯರೇ ಹೇಳಿದ್ದಾರೆ. ಮೂವರು ಒಡಹುಟ್ಟಿದ ಮಕ್ಕಳು ಇರುವ ಮನೆಗಳಲ್ಲಿ ಅಹಂಕಾರ ನಿಯಂತ್ರಿಸೋದನ್ನ ಕಲಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆ ಇರೋದಿಲ್ಲ. ಇದಕ್ಕೂ ಕೂಡ ವೈದ್ಯರೇ ಹೇಳಿರುವುದಾಗಿ ತಿಳಿಸಿದರು.
ಪ್ರಸ್ತುತ ದೇಶದ ಜನಸಂಖ್ಯೆ 2.1 ಜನನ ದರವನ್ನ ಶಿಫಾರಸು ಮಾಡುತ್ತದೆ. ಇದು ಉತ್ತಮ ನೀತಿಯಾಗಿದೆ. ಈ ನೀತಿ ಪ್ರಕಾರ ಯಾರೊಬ್ಬರೂ ಒಂದು ಮಗು ಹೊಂದಲು ಸಾಧ್ಯವಿಲ್ಲ. ಗಣಿತದಲ್ಲಿ 2.1 ಅಂದರೆ 2 ಆಗುತ್ತದೆ. ಆದ್ದರಿಂದ ಮೂರು ಮಕ್ಕಳ ನೀತಿ ಉತ್ತಮ ಎಂದು ಮೋಹನ್ ಭಾಗವತ್ ಹೇಳಿದರು.
ಜನಸಂಖ್ಯಾ ಮಾದರಿಗಳ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳನ್ನು ಮೋಹನ್ ಭಾಗವತ್ ಗುರುತಿಸಿದ್ದು, ಮತಾಂತರವೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮತಾಂತರ ದೇಶದ ಜನಂಖ್ಯೆ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಕ್ಯಾಥೊಲಿಕರು, ಉಲೇಮಾಗಳು ನಾವು ಮತಾಂತರದಲ್ಲಿ ತೊಡಗುವುದಿಲ್ಲ ಎನ್ನುತ್ತಾರೆ ಎಂದು ವಿವರಿಸಿದರು.
ಭಾರತ ಉಪಖಂಡದಲ್ಲಿ ಹಿಂದೂ – ಮುಸ್ಲಿಂ ಇಬ್ಬರ ಡಿಎನ್ಎ ಒಂದೇ ಆಗಿದೆ. ಇದೇ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಮುಸ್ಲಿಮರು ಮೂಲಭೂತವಾಗಿ ಪ್ರತ್ಯೇಕ ಅಲ್ಲ. ನಮ್ಮ ನಡುವೆ ಏಕತೆಯಿದೆ. ಆದ್ರೆ ಒಂದು ಭಯವನ್ನು ಸೃಷ್ಟಿಸಲಾಗಿದೆ. ಹಿಂದೂಗಳು ಎಲ್ಲವನ್ನೂ ತೆಗೆದುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ನಮ್ಮ ಗುರುತು ಏಕೀಕೃತವಾಗಿದೆ. ಸಾಂಸ್ಕೃತಿಕವಾಗಿ, ನಾವೆಲ್ಲ ಹಿಂದೂಗಳು ಎಂದು ಬಣ್ಣಿಸಿದರು.
Rashtriya Swayamsevak Sangh (RSS) chief Mohan Bhagwat has said that every Indian family must have at least three children, warning that families with fewer children may gradually disappear.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm