ಬ್ರೇಕಿಂಗ್ ನ್ಯೂಸ್
20-08-25 10:56 pm HK News Desk ದೇಶ - ವಿದೇಶ
ತಿರುವನಂತಪುರಂ, ಆ.20 : ಹೆದ್ದಾರಿ ಕಾಮಗಾರಿ ಪೂರ್ತಿಯಾಗಿರದಿದ್ದರೆ, ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದ್ದರೆ, ಟ್ರಾಫಿಕ್ ಸಮಸ್ಯೆಗಳಿದ್ದಲ್ಲಿ ಅಂತಹ ಹೆದ್ದಾರಿಯಲ್ಲಿ ಟೋಲ್ ಕಲೆಕ್ಷನ್ ಮಾಡುವುದು ಸರಿಯಲ್ಲ. ಜನರು ಅಂತಹ ಹೆದ್ದಾರಿಗಳಲ್ಲಿ ಟೋಲ್ ಕಟ್ಟಬೇಕೆಂದು ಕಡ್ಡಾಯ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ತೃಶ್ಶೂರು ಜಿಲ್ಲೆಯ ಪಳ್ಳಿಯೆಕ್ಕರ ಟೋಲ್ ಪ್ಲಾಜಾ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ಈ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕಂಪನಿಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಟೋಲ್ ಪ್ಲಾಜಾ ನಿಲ್ಲಿಸುವುದರಿಂದ ಆರ್ಥಿಕ ನಷ್ಟವಾಗುತ್ತದೆ ಎಂಬ ಅಹವಾಲನ್ನು ಕೋರ್ಟ್ ತಳ್ಳಿಹಾಕಿದೆ.
ಜನರು ರಸ್ತೆ ಸಂಚಾರಕ್ಕೆ ತೆರಿಗೆ ಕಟ್ಟಿಯೇ ವಾಹನ ಇಳಿಸುತ್ತಾರೆ. ಹಾಗಿರುವಾಗ ಹೆದ್ದಾರಿಯೇ ಸುಸ್ಥಿತಿಯಲ್ಲಿಲ್ಲ ಎಂಬ ಸಂದರ್ಭದಲ್ಲಿ ಮತ್ತೆ ಶುಲ್ಕ ಕಟ್ಟುವಂತೆ ಅವರಿಗೆ ಹೊರೆ ಹೊರಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್ ಗವಾಯಿ, ಕೆ.ವಿನೋದ್ ಚಂದ್ರನ್ ಮತ್ತು ಎನ್.ವಿ ಅಂಜಾರಿಯಾ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ. ಈ ಕುರಿತು ಕೇರಳ ಹೈಕೋರ್ಟ್ ಆ.6ರಂದು ತೀರ್ಪು ನೀಡಿತ್ತು. ಹೈಕೋರ್ಟ್ ನೀಡಿರುವ ಕಾರಣಗಳನ್ನು ನಾವು ನಿರಾಕರಿಸಲು ಬರುವುದಿಲ್ಲ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೀತಿಯ ತೀರ್ಪು ನೀಡಿದ್ದನ್ನು ನಾವು ಎತ್ತಿ ಹಿಡಿಯುತ್ತೇವೆ. ಹೆದ್ದಾರಿ ಸುಸ್ಥಿತಿಯಲ್ಲಿದ್ದರೆ ಮಾತ್ರ ಜನರು ಶುಲ್ಕ ಕಟ್ಟಿ ಹೋದರೆ ಸಾಕು ಎಂದು ಅಭಿಪ್ರಾಯಿಸಿದೆ.
65 ಕಿಮೀ ಉದ್ದದ ಹೆದ್ದಾರಿಯಲ್ಲಿ 5 ಕಿಮೀ ರಸ್ತೆ ಆಗಿಲ್ಲ ಎಂದರೂ ಜನರಿಗೆ ಟ್ರಾಫಿಕ್ ಸಮಸ್ಯೆ ತಂದೊಡ್ಡುತ್ತದೆ. ಅಂಡರ್ ಪಾಸ್ ಆಗಿಲ್ಲ, ಕಾಮಗಾರಿ ನಡೆಸುತ್ತಿದ್ದೇವೆ ಎನ್ನುವುದು ನಿರ್ವಹಣೆ ವಿಚಾರದಲ್ಲಿ ಕಪ್ಪು ಚುಕ್ಕೆ ಆಗುತ್ತದೆ. ಇಂತಹ ಹೆದ್ದಾರಿಯನ್ನು ದಾಟುವುದು ಗಂಟೆಗಳಷ್ಟು ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಹೇಳಿರುವ ಕೋರ್ಟ್, ಅರ್ಜಿದಾರರ ವಾದವನ್ನು ನಿರಾಕರಿಸಿದೆ. ಇಡಪ್ಪಳ್ಳಿ-ಮನ್ನುತ್ತಿ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಇತ್ತೀಚೆಗೆ ವೀಕೆಂಡ್ ನಲ್ಲಿ ವಾಹನ ಸಂಚಾರ 12 ಗಂಟೆ ವಿಳಂಬಕ್ಕೆ ಕಾರಣವಾಗಿತ್ತು. ಇಂತಹ ಹೆದ್ದಾರಿಗೆ ಜನರು ಯಾಕೆ 150 ರೂ. ಶುಲ್ಕ ಕಟ್ಟಬೇಕು ಎಂದು ಕೋರ್ಟ್ ಪ್ರಶ್ನಿಸಿದೆ.
ಹಿರಿಯ ವಕೀಲ ಶ್ಯಾಮ್ ದಿವಾನ್ ಮತ್ತು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೆದ್ದಾರಿ ಪ್ರಾಧಿಕಾರ ಪರವಾಗಿ ಟೋಲ್ ಪ್ಲಾಜಾ ನಿಲ್ಲಿಸುವುದರಿಂದ ದಿನಕ್ಕೆ 49 ಲಕ್ಷದಷ್ಟು ನಷ್ಟವಾಗುತ್ತದೆ. ಹೆದ್ದಾರಿ ನಿರ್ವಹಣೆಗೆ ಹಣಕಾಸು ಅತ್ಯಗತ್ಯ ಎಂದು ಹೇಳಿದರೂ ಕೋರ್ಟ್ ಕೇಳಲಿಲ್ಲ. ಮೂರನೇ ವ್ಯಕ್ತಿಗೆ ಗುತ್ತಿಗೆ ಕೊಟ್ಟು ಬ್ಲಾಕ್ ಸ್ಪಾಟ್ ಆಗುವುದಕ್ಕೆ ಯಾಕೆ ಹೆದ್ದಾರಿ ಪ್ರಾಧಿಕಾರ ಅವಕಾಶ ಕೊಡುತ್ತದೆ. ರಸ್ತೆ ನಿರ್ವಹಣೆ ಮಾಡುವುದು ನಿಮ್ಮ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದೆ.
In a significant judgment, the Supreme Court has upheld the Kerala High Court's ruling that toll collection on incomplete or poorly maintained highways is unjustified. If roads have potholes, incomplete construction, or cause severe traffic congestion, the public cannot be compelled to pay tolls, the apex court observed.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm