ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾಶಿ, ಧಾರಾಲಿಯಲ್ಲಿ ಪ್ರವಾಹ, ಭೂಕುಸಿತಕ್ಕೆ ಕೊಚ್ಚಿ ಹೋದ ಮನೆ, ಕಟ್ಟಡಗಳು, 50ಕ್ಕು ಹೆಚ್ಚು ಮಂದಿ ನಾಪತ್ತೆ 

05-08-25 09:33 pm       HK News Desk   ದೇಶ - ವಿದೇಶ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಫೋಟ ಉಂಟಾಗಿದ್ದು ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿ ಅಬ್ಬರಕ್ಕೆ ಇಡೀ ಗ್ರಾಮಕ್ಕೆ ಗ್ರಾಮವೇ ನಾಶಕ್ಕೀಡಾಗಿದೆ. ಅತಿ ಎತ್ತರದ ಪ್ರದೇಶದಲ್ಲಿ ಉಂಟಾದ ಭಾರೀ ಪ್ರವಾಹಕ್ಕೆ ಅಂಗಡಿಗಳು, ವಾಹನಗಳು ಮತ್ತು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.‌

ನವದೆಹಲಿ, ಆ.5 : ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಫೋಟ ಉಂಟಾಗಿದ್ದು ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿ ಅಬ್ಬರಕ್ಕೆ ಇಡೀ ಗ್ರಾಮಕ್ಕೆ ಗ್ರಾಮವೇ ನಾಶಕ್ಕೀಡಾಗಿದೆ. ಅತಿ ಎತ್ತರದ ಪ್ರದೇಶದಲ್ಲಿ ಉಂಟಾದ ಭಾರೀ ಪ್ರವಾಹಕ್ಕೆ ಅಂಗಡಿಗಳು, ವಾಹನಗಳು ಮತ್ತು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.‌

ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಎಸ್‌ಡಿಆರ್‌ಎಫ್ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಸ್ಥಳೀಯ ಆಡಳಿತ, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.‌

Uttarakhand cloudburst leaves many feared washed away in Uttarkashi - The  Hindu

Uttarakhand: Major cloud burst floods Uttarkashi's Dharali village, kills  4; chilling visuals of Kheer Ganga go viral | Today News

Uttarkashi Cloudburst: People run for life, homes destroyed: Chilling  visuals of Uttarakhand flash flood - India Today

Uttarkashi news LIVE updates: 4 dead after twin cloudbursts; 20 rescued so  far | Hindustan Times

Uttarakhand Cloudburst LIVE Updates: 4 Dead, Over 50 Missing; Red Alert In  Several Districts - News18

Cloudburst triggers flash-floods in Uttarkashi, swallowing entire homes; 4  dead

Uttarakhand Cloudburst Live Updates: IAF on standby to join rescue  operations in Harshil, 4 dead; helpline numbers 01374-222126, 222722 and  9456556431 - The Times of India

ಉತ್ತರ ಕಾಶಿಯಲ್ಲಿ 40-50 ಮನೆಗಳು ಕೊಚ್ಚಿಕೊಂಡು ಹೋಗಿವೆ. 50ಕ್ಕು ಹೆಚ್ಚು ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಹರ್ಸಿಲ್ ನಗರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರವಾಹ, ಭೂಕುಸಿತ ಸಂಭವಿಸಿದೆ. ಸ್ಥಳಕ್ಕೆ ಮೂರು ಎನ್ ಡಿಆರ್ ಎಫ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಎನ್ ಡಿಆರ್ ಎಫ್ ಡಿಐಜಿ ಮೊಹ್ಸೀನ್ ಶಾಹಿದ್ ತಿಳಿಸಿದ್ದಾರೆ. ಉತ್ತರಕಾಶಿ, ಧಾರಾಲಿ ಮತ್ತು ಸುಖಿ ಏರಿಯಾದಲ್ಲಿ ಒಂದೇ ದಿನ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು ಆಸುಪಾಸಿನ ರಸ್ತೆಗಳು, ವಾಹನಗಳು ಕೊಚ್ಚಿ ಹೋಗಿವೆ. ಅಲ್ಲದೆ, ಬೆಟ್ಟದ ಮೇಲ್ಬಾಗದಲ್ಲಿ ಹಲವಾರು ಮನೆಗಳು ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿವೆ. ಖೀರ್ ನದಿಯಲ್ಲಿ ಪ್ರವಾಹ ಉಂಟಾಗಿ ಎತ್ತರದ ನಗರ ಪ್ರದೇಶದಲ್ಲಿ ಧುಮ್ಮಿಕ್ಕಿ ಹರಿಯುವುದು, ಜನರು ಕೊಚ್ಚಿಕೊಂಡು ಹೋಗುವ ಭಯಾನಕ ವಿಡಿಯೋ ವೈರಲ್‌ ಆಗಿದೆ. 2013ರಲ್ಲಿ ಉತ್ತರಾಖಂಡದಲ್ಲಿ ಎದುರಾಗಿದ್ದ ಪ್ರವಾಹ ದುರಂತವನ್ನೂ ಮೀರಿಸುವಷ್ಟು ನಾಶ ನಷ್ಟ ಆಗಿದೆ ಎಂದು ತೇಹ್ರಿ ಘರ್ ವಾಲ್ ಸಂಸದೆ ಮಾಲಾ ರಾಜ್ಯ ಲಕ್ಷ್ಮಿ ಹೇಳಿದ್ದಾರೆ.

A powerful cloudburst struck Dharali village in Uttarkashi district on Tuesday afternoon, unleashing a massive landslide and flooding that have caused extensive destruction and killing at least four people. The village, located about 4 kilometers from the Indian Army camp at Harsil, was hit around 1:45 pm, with a torrent of water and debris cutting off all road connectivity to the Gangotri Dham.