ಬ್ರೇಕಿಂಗ್ ನ್ಯೂಸ್
24-07-25 03:29 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 24 : ಬೃಹತ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಸೇರಿದ ದಿಲ್ಲಿ ಮತ್ತು ಮುಂಬೈನ ಕಚೇರಿಗಳ ಮೇಲೆ ಬೃಹತ್ ದಾಳಿ ನಡೆಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎರಡು ಎಫ್‌ಐಆರ್‌ಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.
ಇ.ಡಿ ಅಧಿಕಾರಿಗಳು ಸುಮಾರು 35 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್‌ಗಳು, ಹೂಡಿಕೆದಾರರು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ವಂಚಿಸಲು ರೂಪಿಸಲಾದ 'ಮೆಗಾ ಪ್ಲ್ಯಾನ್' ಇದಾಗಿದೆ ಎಂದು ಇ.ಡಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ.
ಈ ದಾಳಿಯ ಕೇಂದ್ರಬಿಂದು ಯೆಸ್ ಬ್ಯಾಂಕ್ ಹಗರಣವಾಗಿದೆ. ಆರೋಪಗಳ ಪ್ರಕಾರ, 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್, ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿಗೆ ಸುಮಾರು 3,000 ಕೋಟಿ ರೂ. ಸಾಲ ವಿತರಿಸಿತ್ತು. ಈ ಬೃಹತ್ ಅಸುರಕ್ಷಿತ ಸಾಲಗಳನ್ನು ಮಂಜೂರು ಮಾಡಲು ಯೆಸ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮತ್ತು ಮಾಜಿ ಪ್ರವರ್ತಕರು ಲಂಚ ಪಡೆದಿದ್ದಾರೆ ಎಂದು ದೂರಲಾಗಿದೆ.
ಸಾಲ ಮಂಜೂರಾತಿ ಕಡತಗಳಲ್ಲಿ ಅಗತ್ಯ ದಾಖಲೆಗಳೂ ಇರಲಿಲ್ಲ. ಅಲ್ಲದೆ ಹಳೆಯ ಸಾಲವನ್ನು ತೀರಿಸಲು ಹೊಸ ಸಾಲಗಳನ್ನು ನೀಡುವ ಮೂಲಕ ವಂಚನೆ ಎಸಗಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದ ತನಿಖೆಗೆ ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್‌ಎಚ್‌ಬಿ), ಸೆಬಿ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಸಂಸ್ಥೆಗಳು ತಮ್ಮ ತನಿಖಾ ವರದಿಗಳನ್ನು ಇ.ಡಿ ಯೊಂದಿಗೆ ಹಂಚಿಕೊಂಡಿವೆ. ಈ ಎಲ್ಲಾ ದಾಖಲೆಗಳನ್ನು ವಿಶ್ಲೇಷಣೆ ಮಾಡಿ, ಇ.ಡಿ ಇದೀಗ ಅನಿಲ್ ಅಂಬಾನಿ ಮೇಲೆ ಮುಗಿಬಿದ್ದಿದೆ.
ಸೆಬಿ ನೀಡಿದ ವರದಿಯಲ್ಲಿ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಕಂಪನಿಯಲ್ಲಿ ಗಂಭೀರ ಅಕ್ರಮಗಳು ನಡೆದಿರುವುದಾಗಿ ಹೇಳಲಾಗೊದೆ. ಕೇವಲ ಒಂದೇ ವರ್ಷದಲ್ಲಿ, ಅಂದರೆ 2017-18 ರಿಂದ 2018-19ರ ಅವಧಿಯಲ್ಲಿ, ಕಂಪನಿಯ ಕಾರ್ಪೊರೇಟ್ ಸಾಲದ ಮೊತ್ತವು 3,742 ಕೋಟಿ ರೂ.ನಿಂದ 8,670 ಕೋಟಿ ರೂ.ಗೆ ಏರಿಕೆ ಕಾಣುವ ಮೂಲಕ ದ್ವಿಗುಣಗೊಂಡಿದ್ದು, ಇದು ದೊಡ್ಡ ಮಟ್ಟದ ಅಕ್ರಮವನ್ನು ಸೂಚಿಸುತ್ತದೆ.
The Enforcement Directorate (ED) on Thursday launched raids at 35 locations in connection with a loan fraud probe against Anil Ambani-led Reliance Anil Dhirubhai Group companies, people familiar with the development said. Yes Bank officials, including former chairman Rana Kapoor, are also under the scanner, they added.
27-06-26 04:21 pm
HK News Staffer
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 04:23 pm
HK News Staffer
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm