ಬ್ರೇಕಿಂಗ್ ನ್ಯೂಸ್
16-07-25 09:58 pm HK News Desk ದೇಶ - ವಿದೇಶ
ಕೊಲ್ಲಂ, ಜುಲೈ 16: ಯೆಮೆನ್ನಲ್ಲಿ ನರ್ಸ್ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಜಾರಿ ಸದ್ಯಕ್ಕೆ ಮುಂದೂಡಿಕೆಯಾದರೂ, ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರು ಬ್ಲಡ್ ಮನಿಗೆ ನಿರಾಕರಿಸಿದ್ದಾರೆ. ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಪ್ರವೇಶದ ನಂತರ ಶಿಕ್ಷೆ ಮುಂದೂಡಲಾಗಿತ್ತು. ಸದ್ಯಕ್ಕೆ ನಿಮಿಷಾ ಗಲ್ಲು ಶಿಕ್ಷೆಯಿಂದ ಬಚಾವ್ ಆಗಿದ್ದರೂ, ಮೃತನ ಕುಟುಂಬದ ನಿಲುವಿನ ಮೇಲೆ ನಿಂತಿದೆ.
ನರ್ಸ್ ನಿಮಿಷಾ ಪರವಾಗಿ ದಾನಿಗಳ ನೆರವಿನಿಂದ ದೊಡ್ಡ ಮೊತ್ತದ ಪರಿಹಾರ ನೀಡಲು ಸಿದ್ಧರಿದ್ದರೂ, ಯೆಮೆನ್ನಲ್ಲಿರುವ ಮೃತ ವ್ಯಕ್ತಿ ತಲಾಲ್ ಅಬ್ದೋ ಮಹ್ದಿ ಅವರ ಸೋದರ ಮಾತ್ರ ಬ್ಲಡ್ ಮನಿ (ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು) ಸ್ವೀಕರಿಸಲು ಒಪ್ಪಿಕೊಂಡಿಲ್ಲ. ಹೀಗಾಗಿ ಪ್ರಕರಣ ಇನ್ನಷ್ಟು ಜಟಿಲವಾಗಿದ್ದು ಕುಟುಂಬದ ಮನವೊಲಿಕೆ ಮುಂದುವರಿದಿದೆ.
ನಿಮಿಷಾ ಪ್ರಿಯಾ ಅವರ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಮೂಲಕ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬ ಸದಸ್ಯರನ್ನು ಮನವೊಲಿಸಲು ಮುಂದಾಗಿದ್ದಾರೆ. ನಿಮಿಷಾ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಹೆಸರಲ್ಲಿ ಕ್ರೌಡ್ ಫಂಡಿಂಗ್ ಮಾಡಲಾಗುತ್ತಿದ್ದು ಕೇರಳ ಮೂಲದ ಗಲ್ಫ್ ಉದ್ಯಮಿಗಳು ನೆರವು ನೀಡಿದ್ದಾರೆ. ಕೇರಳ ಮೂಲದ ಲುಲ್ಲು ಮಾಲ್ ಮಾಲೀಕ ಸೇರಿದಂತೆ ಹಲವು ಉದ್ಯಮಿಗಳ ನೆರವಿನಿಂದ 12 ಕೋಟಿಯಷ್ಟು ಬ್ಲಡ್ ಮನಿ ನೀಡಲು ಕುಟುಂಬಕ್ಕೆ ಆಫರ್ ಮಾಡಲಾಗಿದೆ.
ಆದರೆ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ನಿರಾಕರಿಸಿದ್ದು ಆರೋಪಿಗೆ ಕ್ಷಮೆ ನೀಡುವುದಿಲ್ಲ. ಷರಿಯಾ ಪ್ರಕಾರ ಗಲ್ಲು ಶಿಕ್ಷೆಯನ್ನೇ ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದೆ ಎನ್ನಲಾಗುತ್ತಿದೆ.
ಗಲ್ಲು ಶಿಕ್ಷೆಗೆ ಬದಲಾಗಿ ಕ್ಷಮಾದಾನಕ್ಕೆ ಬ್ಲಡ್ ಮನಿ ಮೂಲಕ, ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕೇಳಿದಷ್ಟು ಹಣವನ್ನು ಪಾವತಿಸುವ ಅಂಶ ಷರಿಯಾ ಕಾನೂನಿನಲ್ಲಿದೆ. ಇದನ್ನು, ಯೆಮೆನ್, ಸೌದಿ ಅರೆಬಿಯಾ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತದೆ.
The life of Kerala-based nurse Nimisha Priya - who was facing execution in Yemen - has been temporarily spared thanks to the timely intervention of prominent religious figures across two countries.The Grand Mufti of India, Sheikh Abubakr Ahmad, had reached out to renowned Yemeni cleric Sheikh Umar bin Hafiz to intercede with the family of Talal Abdol Mehdi - Priya's Yemeni employer whom she killed inadvertently.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am