Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತರಕ್ಕಾಗಿ ಒಂದು ಸಾವಿರ ಮುಸ್ಲಿಂ ಯುವಕರ ನೇಮಿಸಿದ್ದ ಚಾಂಗೂರ್ ಬಾಬಾ ; ಗುಪ್ತ ಪ್ರಕ್ರಿಯೆಗೆ ಮಿಟ್ಟಿ, ಕಾಜಲ್, ದರ್ಶನ್ ಕೋಡ್ ವರ್ಡ್ ಬಳಸ್ತಿದ್ದ !  

14-07-25 03:24 pm       HK News Desk   ದೇಶ - ವಿದೇಶ

ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಸಾಮೂಹಿಕ ಮತಾಂತರಿ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ, ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. 

ಲಕ್ನೋ, ಜುಲೈ 14 : ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಸಾಮೂಹಿಕ ಮತಾಂತರಿ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ, ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. 

ಬಡವರು, ವಿಧವೆಯರು ಮತ್ತು ದುರ್ಬಲ ಮನಸ್ಥಿತಿಯ ಮಹಿಳೆಯರನ್ನು ಗುರಿಯಾಗಿರಿಸಿ ಇವರ ತಂಡ ಮತಾಂತರ ನಡೆಸುತ್ತಿತ್ತು. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ಸುಮಾರು 500 ಕೋಟಿ ರೂ. ದೇಣಿಗೆ ಪಡೆದಿದ್ದ ಎಂಬ ಮಾಹಿತಿಯೂ ತನಿಖೆಯಲ್ಲಿ ಪತ್ತೆಯಾಗಿದೆ. ಯುವಕರನ್ನು ಬಳಸಿಕೊಂಡು ಬಡ ಕುಟುಂಬದ ಯುವತಿಯರಿಗೆ, ವಿಧವೆಯರಿಗೆ ಪ್ರೇಮ, ವಿವಾಹ, ಮನೆಗಳನ್ನು ನಿರ್ಮಿಸಿಕೊಡುವ ಆಸೆಗಳನ್ನು ಒಡ್ಡಿ ಮುಸ್ಲಿಂ ಆಗಿ ಮತಾಂತರ ಮಾಡುತ್ತಿದ್ದರು.‌ 

ಹಿಂದೂ ಯುವತಿಯರನ್ನು ಮತಾಂತರಿಸಿದ್ದಕ್ಕಾಗಿ ಛಂಗೂರ್ ಬಾಬಾ ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮುಸ್ಲಿಂ ಯುವಕರಿಗೆ ಹಣ ಪಾವತಿ ಮಾಡಿರೋದನ್ನೂ ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಪತ್ತೆ ಮಾಡಿದ್ದಾರೆ. ಛಂಗೂರ್ ಬಾಬಾ ಜೊತೆಗೆ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ನನ್ನು ಸಹ ಬಂಧಿಸಿ ಏಳು ದಿನಗಳ ಎಟಿಎಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. 

ಇದಲ್ಲದೆ, ಮತಾಂತರ ಚಟುವಟಿಕೆ ಉದ್ದೇಶಕ್ಕಾಗಿ ಚಾಂಗೂರ್ ಬಾಬಾ ಕೆಲವು ಕೋಡ್ ವರ್ಡ್ ಗಳನ್ನು ಬಳಸುತ್ತಿದ್ದ. ಹೊಸ ಯುವತಿಯರನ್ನು ಬಲೆಗೆ ಹಾಕುತ್ತಿದ್ದ ಪ್ರಕ್ರಿಯೆಗೆ ಮಿಟ್ಟಿ ಪಲಾಟ್ನಾ ಎಂದು ಹೇಳುತ್ತಿದ್ದರೆ, ಆಮಿಷವೊಡ್ಡಿ ಯುವತಿಯರನ್ನು ಯಾಮಾರಿಸುತ್ತಿದ್ದುದಕ್ಕೆ ಕಾಜಲ್ ಲಗಾನಾ, ಸಂತ್ರಸ್ತ ಯುವತಿಯರಿಗೆ ಹೊಸ ಭವಿಷ್ಯ ರೂಪಿಸುವುದಕ್ಕಾಗಿ ಬಾಬಾನ ಭೇಟಿ ಮಾಡುತ್ತಿದ್ದ ಪ್ರಕ್ರಿಯೆಗೆ ದರ್ಶನ್ ಎಂದು ಕೋಡ್ ವರ್ಡ್ ಬಳಸುತ್ತಿದ್ದರು. ಒಟ್ಟು ಮತಾಂತರ ಪ್ರಕ್ರಿಯೆಯನ್ನು ಸದ್ದಿಲ್ಲದೆ, ಇಡೀ ತಂಡ ಗುಪ್ತವಾಗಿಯೇ ನಡೆಸುತ್ತಿತ್ತು.

ವಿದೇಶಿ ಫಂಡಿಂಗ್ ಪತ್ತೆಹಚ್ಚಲು ಮತ್ತು ಹೆಚ್ಚಿನ ಸಂಪರ್ಕಗಳನ್ನು ಪತ್ತೆಹಚ್ಚುವ ಸಲುವಾಗಿ ಗುಪ್ತಚರ ಬ್ಯೂರೋ (IB) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಪ್ರಕರಣದ ಬಗ್ಗೆ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ. ನವೀನ್ ಅಲಿಯಾಸ್ ಜಲಾಲುದ್ದೀನ್ ಮತ್ತು ಛಂಗೂರ್ ಬಾಬಾ ಮಗ ಮೆಹಬೂಬ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಲಕ್ನೋ ಜಿಲ್ಲಾ ಜೈಲಿನಲ್ಲಿದ್ದಾರೆ.

In a major crackdown on an alleged mass religious conversion racket, Uttar Pradesh Anti-Terrorism Squad (ATS) has arrested Jamaluddin alias Changoora Baba, who is accused of orchestrating a large-scale ‘Love Jihad’ operation with the help of 1,000 Muslim youths. The sensational revelations emerged during an ongoing probe by state security agencies.