ಬ್ರೇಕಿಂಗ್ ನ್ಯೂಸ್
12-07-25 09:25 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 12 : ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ಅಧಿಕಾರಿಗಳು ತನಿಖಾ ವರದಿ ಬಿಡುಗಡೆ ಮಾಡಿದ್ದು ಹಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದೆ. ಹಾರಾಟದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್ಗಳ ಇಂಧನ ಪೂರೈಕೆ ಕಡಿತವಾಗಿತ್ತು. ಇದರ ಬಗ್ಗೆ ಪೈಲಟ್ ಗಳೇ ಮಾತನಾಡಿದ್ದರು ಎಂಬುದು ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಪೈಲಟ್ ಗಳು ಕೊನೆಕ್ಷಣದಲ್ಲಿ ಮಾತನಾಡಿದ ಆಡಿಯೋ ದಾಖಲಾಗಿದ್ದು ಒಬ್ಬ ಪೈಲಟ್ ಇನ್ನೊಬ್ಬನನ್ನು ಇಂಧನ ಸ್ವಿಚ್ ಆಫ್ ಮಾಡಿದ್ದೀರಾ ಎಂದು ಕೇಳಿದ್ದಾರೆ. ಇನ್ನೊಬ್ಬ ಪೈಲಟ್ 'ನಾನು ಮಾಡಲಿಲ್ಲ' ಎಂದು ಉತ್ತರಿಸಿದ್ದಾರೆ. ಪೈಲಟ್ ಈ ರೀತಿಯ ಸಂಭಾಷಣೆ ಮಾಡಿದ್ದಾರೆಂಬ ವಿಚಾರ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಪೈಲಟ್ ವಿಮಾನ ಹಾರಾಡುತ್ತಿರುವಾಗ ಇಂಧನ ಸ್ವಿಚ್ ಆಫ್ ಏಕೆ ಮಾಡುತ್ತಾನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅಹಮದಾಬಾದ್ನಿಂದ ಲಂಡನ್ಗೆ ಹೋಗುವ ಏರ್ ಇಂಡಿಯಾ ವಿಮಾನ ಜೂನ್ 11ರಂದು ಮಧ್ಯಾಹ್ನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ದುರಂತ ಸಂಭವಿಸಿತ್ತು. ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಘಟನೆಯ ಬಗ್ಗೆ ಹಲವು ಏಜನ್ಸಿಗಳು ತನಿಖೆ ನಡೆಸುತ್ತಿದ್ದರೂ ವಿಮಾನ ಸಚಿವಾಲಯದ ಅಧಿಕಾರಿಗಳ ವರದಿ ಸಂಚಲನ ಸೃಷ್ಟಿಸಿದೆ. ಆದರೆ ಪೈಲಟ್ ಗಳ ಸಂಭಾಷಣೆಯಿಂದ ಯಾವುದೇ ತೀರ್ಮಾನಕ್ಕೂ ಬರಲು ಸಾಧ್ಯವಿಲ್ಲ ಎಂದು ಸಚಿವಾಲಯದ ತಜ್ಞರು ಹೇಳಿದ್ದಾರೆ. ಇಂಧನ ಸ್ವಿಚ್ ಅನ್ನು ಹೇಗೆ ಮತ್ತು ಯಾರು ಆಫ್ ಮಾಡಿದ್ದಾರೆ ಎಂಬುದನ್ನು ತನಿಖೆಯಲ್ಲಿ ವ್ಯಕ್ತವಾಗಿಲ್ಲ.
ವಿಮಾನದಲ್ಲಿನ ಇಂಧನ ಸ್ವಿಚ್ ಪೈಲಟ್ ಕೈಯಲ್ಲೇ ಇರುತ್ತದೆ. ಪೈಲಟ್ ಆನ್ ಮತ್ತು ಆಫ್ ಮಾಡಬಹುದಾಗಿದೆ. ತಜ್ಞರು ಹೇಳುವಂತೆ ಇದು ಗೇರ್ನಂತಿದೆ. ಆದರೆ, ಪೈಲಟ್ ವಿಮಾನವನ್ನು ನಿಲ್ಲಿಸಿದ ನಂತರವೇ ಅದನ್ನು ಆಫ್ ಮಾಡುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಒಂದು ಎಂಜಿನ್ನ ಇಂಧನವನ್ನು ಗಾಳಿಯಲ್ಲಿಯೂ ಆಫ್ ಮಾಡಬಹುದು. ಗಾಳಿಯಲ್ಲಿ ಎಂಜಿನ್ ವಿಫಲವಾದರೆ, ಅದರ ಸ್ವಿಚ್ ಆಫ್ ಆಗುತ್ತದೆ. ಆದಾಗ್ಯೂ, ವಿಫಲವಾದ ಎಂಜಿನ್ನ ಇಂಧನ ಸ್ವಿಚ್ ಅನ್ನೂ ಆಫ್ ಮಾಡಬೇಕಾಗುತ್ತದೆ. ಆದರೆ ಇನ್ನೊಂದು ಎಂಜಿನ್ನ ಇಂಧನ ಸ್ವಿಚ್ ತಪ್ಪಾಗಿ ಆಫ್ ಆಗಿದ್ದರೆ, ಅಪಘಾತ ಖಚಿತ.
ಇಂಧನ ಸ್ವಿಚ್ ಅನ್ನು ಎಳೆಯುವ ಮೊದಲು, ಒಬ್ಬ ಪೈಲಟ್ ಇನ್ನೊಬ್ಬರೊಂದಿಗೆ ದೃಢೀಕರಿಸುತ್ತಾರೆ. ಇದರ ನಂತರವೇ ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಎರಡೂ ಇಂಧನ ಸ್ವಿಚ್ಗಳು ಏಕಕಾಲದಲ್ಲಿ ಆಫ್ ಆಗಿರುವುದು ಬಹಳ ಆಶ್ಚರ್ಯಕರವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಧನ ಸ್ವಿಚ್ ಸ್ವತಃ ಆಫ್ ಆಗಬಹುದೇ?
2021ರಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ವಿಮಾನ ಎಂಜಿನ್ ಉತ್ಪಾದನಾ ಕಂಪನಿಯು ವಿಮಾನದ 'MN4 ಮೈಕ್ರೋ ಪ್ರೊಸೆಸರ್ ಅನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು' ಎಂದು ಹೇಳಿತ್ತು. ಇದು ಎಂಜಿನ್ನ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕದಲ್ಲಿರುತ್ತದೆ. ಇದನ್ನು ವಿಶೇಷ ಸರ್ಕ್ಯೂಟ್ ಬೋರ್ಡ್ಗೆ ಸಂಪರ್ಕಿಸಲಾಗಿದೆ. ಹಾರಾಟದ ಸಮಯದಲ್ಲಿ ಅದರ ತಾಪಮಾನ ಬದಲಾಗುತ್ತದೆ. ಈ ಮೈಕ್ರೋ ಪ್ರೊಸೆಸರ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ, ಎಂಜಿನ್ ಸರಿಯಾದ ಮಾಹಿತಿಯನ್ನು ಪಡೆಯುವುದಿಲ್ಲ ಎಂದು ವರದಿ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಬದಲಾಯಿಸಬೇಕಾಗುತ್ತದೆ. ಅದೇ ಕಾರಣದಿಂದ ಇಲ್ಲಿ ಸ್ವಿಚ್ ತನ್ನಿಂತಾನೇ ಆಫ್ ಆಗಿತ್ತೇ ಎಂಬ ಅನುಮಾನವೂ ಇದೆ.
ಆದಾಗ್ಯೂ ಎಂಜಿನ್ ಗೆ ಇಂಧನ ಪೂರೈಕೆ ಆಗುತ್ತಿಲ್ಲ ಎಂದು ಪೈಲಟ್ಗಳು ತಿಳಿದೊಡನೆ, ಅಪಘಾತ ತಪ್ಪಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ ಎಂದು AAIB ವರದಿಯಲ್ಲಿ ಹೇಳಿದೆ.
Seconds before Air India flight 171 crashed while ascending from Ahmedabad, the fuel control switches of both its engines were cut off, a preliminary investigation report said on Saturday, suggesting a catastrophic pilot error in the cockpit of the Boeing 787 Dreamliner.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm