ಅಮೆರಿಕದ ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹ ; 28 ಮಕ್ಕಳು ಸೇರಿ 82 ಜನ ಸಾವು, 40ಕ್ಕು ಹೆಚ್ಚು ಮಂದಿ ನಾಪತ್ತೆ, ಪ್ರವಾಹದಲ್ಲಿ ಎದ್ದು ಬಂದ ವಿಷದ ಹಾವುಗಳು ! 

07-07-25 04:11 pm       HK News Desk   ದೇಶ - ವಿದೇಶ

ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದು 41 ಮಂದಿ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಅಮೆರಿಕದ ಟೆಕ್ಸಾಸ್ ನಗರ ಎದುರಿಸಿದ ಅತ್ಯಂತ ಭೀಕರ ಪ್ರವಾಹ ಎಂದು ಹೇಳಲಾಗಿದೆ.

ವಾಷಿಂಗ್ಟನ್, ಜುಲೈ 7 : ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದು 41 ಮಂದಿ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಅಮೆರಿಕದ ಟೆಕ್ಸಾಸ್ ನಗರ ಎದುರಿಸಿದ ಅತ್ಯಂತ ಭೀಕರ ಪ್ರವಾಹ ಎಂದು ಹೇಳಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹಲವಾರು ಕಡೆಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ವಿಷಪೂರಿತ ಹಾವುಗಳು ಕೂಡ ಪ್ರವಾಹದ ನೀರಿ‌ನಲ್ಲಿ ಕಂಡುಬರುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 

Death toll in central Texas flash floods rises to 82 as sheriff says 10  campers remain missing – Twin Cities

Risk of further floods in Texas during desperate search for missing as death  toll tops 80 | WSYR

Trump declares major disaster after floods – as it happened | Texas floods  2025 | The Guardian

Death toll in central Texas flash floods rises to 82 as sheriff says 10  campers remain missing

ಪ್ರವಾಹ ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಸಾಧ್ಯತೆಯಿದೆ. ಘಟನೆ ಬಗ್ಗೆ ಸಂತಾಪ ಸೂಚಿಸಿರುವ ಡೊನಾಲ್ಡ್‌ ಟ್ರಂಪ್‌, ಇದು ನಿಜಕ್ಕೂ ಭಯಾನಕ, ದೇವರು ಜನರಿಗೆ ದುಃಖ ಭರಿಸುವ ಶಕ್ತಿ ಕೊಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಹವಾಮಾನ ಮಾಹಿತಿ ಪ್ರಕಾರ, ಟೆಕ್ಸಾಸ್‌ ಆಸುಪಾಸಿನಲ್ಲಿ ಭಾನುವಾರ 15 ಇಂಚು (38 ಸೆಂ.ಮೀ) ಮಳೆಯಾಗಿದ್ದು ಹಠಾತ್‌ ಪ್ರವಾಹ ಸಂಭವಿಸಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವರೆಗೆ 850ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಟೆಕ್ಸಾಸ್ ಬಳಿಯಲ್ಲೇ ಹರಿಯುವ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ನೀರು ನಗರದೊಳಕ್ಕೆ ನುಗ್ಗಿದ್ದು ವ್ಯಾಪಕ ನಾಶ ನಷ್ಟವಾಗಿದೆ.

The number of people who have died from flash flooding in Texas has risen to 82, while the risk of further life-threatening floods continues with more rain forecast. Searches continue for the dozens still missing in what officials are labelling the state's deadliest flood disaster in decades.