ಬ್ರೇಕಿಂಗ್ ನ್ಯೂಸ್
26-06-25 10:22 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 26 : ಆಪರೇಶನ್ ಸಿಂಧೂರ ಮತ್ತು ಭಾರತೀಯ ಸೇನೆ ಬಗ್ಗೆ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಏಜನ್ಸಿ ಐಎಸ್ಐಗೆ ಹಂಚಿಕೊಂಡಿದ್ದ ನೌಕಾ ಪಡೆಯ ದೆಹಲಿ ಕಚೇರಿಯ ಸಿಬಂದಿಯೊಬ್ಬನನ್ನು ರಾಜಸ್ಥಾನಿ ಪೊಲೀಸರು ಬಂಧಿಸಿದ್ದಾರೆ.
ನೌಕಾ ಪಡೆಯಲ್ಲಿ ಕ್ಲರಿಕಲ್ ಕೆಲಸ ಮಾಡುತ್ತಿದ್ದ ಹರ್ಯಾಣ ಮೂಲದ ವಿಶಾಲ್ ಯಾದವ್ ಬಂಧಿತ ವ್ಯಕ್ತಿ. ನೇವಿ ಮತ್ತು ಇನ್ನಿತರ ಸೇನಾ ಮಾಹಿತಿಗಳನ್ನು ಪಾಕಿಸ್ತಾನದ ಯುವತಿಯೊಬ್ಬಳಿಗೆ ನೀಡುತ್ತಿದ್ದ. ಕಳೆದೊಂದು ವರ್ಷದಿಂದ ಹಣಕ್ಕಾಗಿ ರಹಸ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎನ್ನುವುದು ಆತನ ಮೊಬೈಲ್ ಪರಿಶೀಲನೆ ವೇಳೆ ಗೊತ್ತಾಗಿದೆ. ದೆಹಲಿಯ ನೌಕಾ ಪಡೆಯ ಪ್ರಧಾನ ಕಚೇರಿಯಲ್ಲಿ ಕೆಲಸಕ್ಕಿದ್ದ ಈತನನ್ನು ರಾಜಸ್ಥಾನದ ಗುಪ್ತಚರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಏಜನ್ಸಿಗಳು ಭಾರತೀಯ ಸಿಬಂದಿಯನ್ನು ಗುರಿಯಾಗಿಸಿ ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ರಾಜಸ್ಥಾನದ ಗುಪ್ತಚರ ವಿಭಾಗದ ಸಿಐಡಿ ಯೂನಿಟ್ ನಿಗಾ ಇಟ್ಟಿತ್ತು. ಈ ವೇಳೆ, ವಿಶಾಲ್ ಯಾದವ್ ಪಾಕಿಸ್ತಾನ ಮೂಲದ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರುವುದು ಪತ್ತೆಯಾಗಿದೆ. ಪ್ರಿಯಾ ಶರ್ಮಾ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಯುವತಿ ಹಣಕ್ಕಾಗಿ ವಿಶಾಲ್ ಯಾದವ್ ಬಳಿಯಿಂದ ಮಾಹಿತಿಗಳನ್ನು ಕೇಳುತ್ತಿದ್ದಳು. ಯಾದವ್ ಆನ್ಲೈನ್ ಗೇಮ್ ಆಡುತ್ತಿದ್ದು, ಅದರಲ್ಲಿ ವ್ಯಸ್ತನಾಗಿದ್ದ. ಹೀಗಾಗಿ ಹಣ ಕಳಕೊಂಡು ಹಣಕ್ಕಾಗಿ ಏನು ಮಾಡುವುದಕ್ಕೂ ಸಿದ್ಧನಾಗಿದ್ದ. ಕ್ರಿಪ್ಟೋಕರೆನ್ಸಿ ಮೂಲಕ ಪಾಕ್ ಯುವತಿ ಹಣ ಕಳಿಸುತ್ತಿದ್ದು, ಆತನ ಬ್ಯಾಂಕ್ ಖಾತೆಗೂ ಹಣ ರವಾನೆಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ವಿಶಾಲ್ ಯಾದವ್ ನನ್ನು ಕೇಂದ್ರೀಯ ಗುಪ್ತಚರ ಏಜನ್ಸಿಗಳು ತನಿಖೆ ನಡೆಸಿದ್ದು, ಏನೆಲ್ಲಾ ಮಾಹಿತಿ ಹಂಚಿಕೊಂಡಿದ್ದಾನೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಸೋಶಿಯಲ್ ಮೀಡಿಯಾಗಳೇ ರಹಸ್ಯ ಮಾಹಿತಿ ಸೋರಿಕೆಗೆ ಮತ್ತು ಗೂಢಚಾರಿಕೆಗೆ ಹೆಚ್ಚು ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಸಾರ್ವಜನಿಕರು ಸೋಶಿಯಲ್ ಮೀಡಿಯಾ ಬಳಕೆ ವೇಳೆ ಹೆಚ್ಚು ಜಾಗೃತಿ ವಹಿಸಬೇಕೆಂದು ಭದ್ರತಾ ಏಜನ್ಸಿಗಳು ಮನವಿ ಮಾಡಿಕೊಂಡಿವೆ.
A staff member of the Indian Navy posted in Delhi has been arrested by Rajasthan Police for allegedly leaking sensitive military information, including details related to "Operation Sindhur," to Pakistan’s intelligence agency ISI.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am