ಬ್ರೇಕಿಂಗ್ ನ್ಯೂಸ್
24-06-25 12:03 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 24 : ಪಶ್ಚಿಮ ಏಶ್ಯಾದಲ್ಲಿರುವ ಅಮೆರಿಕದ ಅತಿ ದೊಡ್ಡ ಸೇನಾ ನೆಲೆ ಕತಾರಿನ ಅಲ್ ಉದೀದ್ ವಾಯು ನೆಲೆಗೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆತ್ತಗಾಗಿದ್ದಾರೆ. ಇರಾನ್- ಇಸ್ರೇಲ್ ಕದನ ವಿರಾಮ ಘೋಷಿಸಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇಸ್ರೇಲ್ ಆಗಲೀ, ಇರಾನ್ ಆಗಲೀ ಯಾವುದೇ ಹೇಳಿಕೆ ನೀಡಿಲ್ಲ.
ಇದು ಶಾಂತಿಯ ಕಾಲ, ಜಗತ್ತಿಗೆ ಅಭಿನಂದನೆ ಹೇಳುತ್ತಿದ್ದೇನೆ. ಇನ್ನು 12 ಗಂಟೆಗಳಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಬರಲಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇರಾನ್ ಮಂಗಳವಾರ ನಸುಕಿನಲ್ಲಿ ಮತ್ತೆ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದ್ದು, ಈಗ ನಾವು ಕದನ ವಿರಾಮಕ್ಕೆ ಒಪ್ಪುತ್ತೇವೆ, ಆ ಕಡೆಯಿಂದ ಇಸ್ರೇಲ್ ಕೂಡ ಈ ಬಗ್ಗೆ ಅಧಿಕೃತವಾಗಿ ಹೇಳಲಿ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ಯಾವುದೇ ಅಧಿಕೃತ ಅಗ್ರಿಮೆಂಟ್ ಆಗಿಲ್ಲ. ಇಸ್ರೇಲ್ ಕಡೆಯಿಂದ ಹೇಳಿಕೆ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಇರಾನ್ ರೆವಲ್ಯೂಶನರಿ ಗಾರ್ಡ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೂರ್ಖ ಎಂದು ಟೀಕಿಸಿದ್ದು, ಪವಿತ್ರ ಇಸ್ಲಾಮಿಕ್ ರಿಪಬ್ಲಿಕ್ ಮೇಲೆ ಈ ರೀತಿಯ ದಾಳಿ ಮರುಕಳಿಸಿದರೆ ನಾವು ಅವರಿಗೆ ಮರೆಯಲಾರದ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದೆ. ಮಂಗಳವಾರ ಮುಂಜಾನೆ ನಾಲ್ಕು ಗಂಟೆಗೆ ಇಸ್ರೇಲಿನ ಟೆಲ್ ಅವೀವ್ ಮೇಲೆ ಹಲವಾರು ಮಿಸೈಲ್ ದಾಳಿ ನಡೆಸಿದ ಬಳಿಕ ಈಗ ನಾವು ಕದನ ವಿರಾಮ ಮಾಡಿಕೊಳ್ಳುತ್ತೇವೆ ಎನ್ನುವ ಮೂಲಕ ಇರಾನ್ ಮುಯ್ಯಿಗೆ ಮುಯ್ಯಿ ತೀರಿಸಿದ್ದೇವೆ ಎನ್ನುವ ರೀತಿ ವರ್ತಿಸಿದೆ.
ಇರಾನ್ ನಲ್ಲಿನ ಮೂರು ಅಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಎರಡು ದಿನಗಳ ನಂತರ ಇರಾನ್, ಕತಾರಿನಲ್ಲಿರುವ ಅಮೆರಿಕ ಏರ್ ಬೇಸ್ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿತ್ತು. ಆದರೆ ಈ ದಾಳಿಯಿಂದ ಹೆಚ್ಚಿನ ನಾಶ- ನಷ್ಟ ಆಗಿಲ್ಲ ಎಂದು ಕತಾರ್ ಸೇನಾಪಡೆ ಹೇಳಿಕೊಂಡಿದೆ. ಆದರೆ ಪಕ್ಕದ ರಾಷ್ಟ್ರದ ಮೇಲಿನ ದಾಳಿಯನ್ನು ಗಲ್ಫ್ ರಾಷ್ಟ್ರಗಳು ಖಂಡಿಸಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ ಕೂಡ ಇರಾನ್ ನಡೆಗೆ ಆಕ್ಷೇಪ ಸೂಚಿಸಿದೆ.
Amid escalating tensions in West Asia, former U.S. President Donald Trump has announced a ceasefire between Iran and Israel through a post on his social media platform. This statement comes just hours after Iran launched a fresh missile attack on Tel Aviv early Tuesday morning, contradicting the idea of a truce.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm