ಬ್ರೇಕಿಂಗ್ ನ್ಯೂಸ್
20-06-25 09:15 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 20 : ಇರಾನ್ ಪರಮೋಚ್ಛ ನಾಯಕ, ಶಿಯಾ ಮುಸ್ಲಿಮರ ಧಾರ್ಮಿಕ ಗುರು ಅಯತೊಲ್ಲಾ ಆಲಿ ಖಮೇನಿ ಅವರನ್ನು ಕೊಂದೇ ತೀರುತ್ತೇವೆ ಎಂದು ಇಸ್ರೇಲ್ ಶಪಥ ಹಾಕಿದೆ. ಇದಕ್ಕಾಗಿ ಇರಾನ್ ಒಳನುಗ್ಗಿರುವ ಇಸ್ರೇಲ್ ಸೇನೆ ಸಿಕ್ಕ ಸಿಕ್ಕಲ್ಲಿ ದಾಳಿ ನಡೆಸುತ್ತಿದ್ದು, ಖಮೇನಿ ಎಲ್ಲೇ ಅಡಗಿದ್ದರೂ ಬದುಕಲು ಬಿಡಲ್ಲ ಎಂದು ಭುಸುಗುಡುತ್ತಿದೆ. ಇರಾನ್, ಇರಾಕ್, ಸಿರಿಯಾ ಹೀಗೆ ಮಧ್ಯಪ್ರಾಚ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಶಿಯಾ ಮುಸ್ಲಿಮರ ಪಾಲಿಗೆ ಅತ್ಯುನ್ನತ ಗುರುವೂ ಆಗಿರುವ ಇರಾನ್ ಮುಖ್ಯಸ್ಥ ಅಯತೊಲ್ಲಾ ಖಮೇನಿ ಪೂರ್ವಜರು ಒಂದೊಮ್ಮೆ ಭಾರತಲ್ಲಿ ವಾಸವಿದ್ದರು, ಅಷ್ಟೇ ಅಲ್ಲ, ಖಮೇನಿ ಅಜ್ಜ ಭಾರತದಿಂದಲೇ ಇರಾನ್ ತೆರಳಿ ಇವರ ಕುಟುಂಬವನ್ನು ಪ್ರಾಬಲ್ಯಕ್ಕೆ ತಂದಿದ್ದರು ಎನ್ನುವುದು ಇರಾನ್ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಅಯತೊಲ್ಲಾ ಖಮೇನಿ ಅವರ ಗುರುವಾಗಿದ್ದ ಅಯತೊಲ್ಲಾ ರುಹೊಲ್ಲಾ ಖೊಮೇನಿ ಇರಾನ್ ದೇಶದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎನ್ನುವ ಚಿಂತನೆಯನ್ನು ಮೊದಲ ಬಾರಿಗೆ ಹರಿಯಬಿಟ್ಟಿದ್ದ ವ್ಯಕ್ತಿ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪಕ ಎಂದು ನಂಬಲಾಗುತ್ತದೆ. ಇರಾನ್ ಕ್ರಾಂತಿಕಾರಿಯಾಗಿ ಬೆಳೆಯಲು ರುಹೊಲ್ಲಾ ಖೊಮೇನಿ ಅವರ ಚಿಂತನೆಗಳೇ ಕಾರಣ ಎಂದು ಹೇಳಲಾಗುತ್ತದೆ. ಶಿಯಾ ಮುಸ್ಲಿಮರ ಪಾಲಿಗೆ ಶ್ರೇಷ್ಠ ವ್ಯಕ್ತಿಗಳಾಗಿರುವ ಇವರಿಬ್ಬರಿಗೂ ಭಾರತ ಮೂಲದ ಪೂರ್ವಜರಿದ್ದರು ಮತ್ತು ಭಾರತಕ್ಕೂ ಇವರಿಗೂ ಹತ್ತಿರದ ನಂಟು ಇದೆಯೆಂಬ ಸಂಗತಿ ಬಯಲಾಗಿದೆ.


ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರು ಎನ್ನುವ ಗ್ರಾಮದಲ್ಲಿ ಜನಿಸಿದ್ದ ಸೈಯದ್ ಅಹ್ಮದ್ ಮೌಸವಿ ಹಿಂದಿ ಎನ್ನುವ ಧಾರ್ಮಿಕ ಗುರು ಇಲ್ಲಿಂದಲೇ ಇರಾನ್ ತೆರಳಿ ಖಮೇನಿ ಎನ್ನುವ ಕುಟುಂಬ ಶಿಯಾ ಪರಂಪರೆಯಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಇದೇ ವ್ಯಕ್ತಿ ಇರಾನ್ ರಿಪಬ್ಲಿಕ್ ಸ್ಥಾಪಕ ರುಹೊಲ್ಲಾ ಖೊಮೇನಿಯವರ ಅಜ್ಜ ಮತ್ತು ಈಗಿನ ಖಮೇನಿಯವರ ಕುಟುಂಬದ ಮೂಲಪುರುಷ ಎಂದು ಇತಿಹಾಸ ಹೇಳುತ್ತದೆ. 1830ರ ವೇಳೆಗೆ ಸೈಯದ್ ಮೌಸವಿ ಹಿಂದಿ ಅವರು ಇರಾಕ್ ನಲ್ಲಿರುವ ಶಿಯಾ ಮುಸ್ಲಿಮರ ಪವಿತ್ರ ಸ್ಥಳ ನಜಾಫ್ ಎನ್ನುವ ಪ್ರದೇಶಕ್ಕೆ ವಲಸೆ ಹೋಗಿದ್ದು, ಆನಂತರ ಇರಾನಿನಲ್ಲಿ ಇಮಾಮ್ ಅಲಿಯವರ ಸ್ತೂಪವನ್ನು ನೋಡುವುದಕ್ಕಾಗಿ ತೆರಳಿ ಅಲ್ಲಿನ ಮಶಾದ್ ಎಂಬಲ್ಲಿ ನೆಲೆಸಿದ್ದರು. ಕುಟುಂಬ ಸಮೇತ ಇರಾನ್ ಹೋಗಿ ನೆಲೆಸಿದ್ದರೂ, ತನ್ನ ಜನ್ಮಸ್ಥಾನ ಹಿಂದುಸ್ಥಾನ ಎನ್ನುವುದನ್ನು ಪರಿಚಯಿಸುವ ಹೆಸರಿನ ಜೊತೆಗಿದ್ದ ಹಿಂದಿ ಎನ್ನುವ ಉಲ್ಲೇಖ ಅಲ್ಲಿಯೂ ಮುಂದುವರಿದಿತ್ತು. ಇರಾನ್ ದಾಖಲೆಗಳಲ್ಲಿಯೂ ಸೈಯದ್ ಅಹ್ಮದ್ ಮೌಸವಿ ಹಿಂದಿ ಎಂದೇ ಉಲ್ಲೇಖಗೊಂಡಿತ್ತು.

ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪಕ ಖೊಮೇನಿ
ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರಿಗೆ ಇರಾನ್ ಚರಿತ್ರೆಯಲ್ಲಿ ಮಹತ್ತರ ಸ್ಥಾನವಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆಯ ಹರಿಕಾರ ಎಂದೇ ಅವರನ್ನು ಇರಾನ್ ಚರಿತ್ರೆ ಉಲ್ಲೇಖಿಸುತ್ತದೆ. ಇರಾನ್ ಕರೆನ್ಸಿಯಲ್ಲೂ ಟೆಹ್ರಾನಲ್ಲಿರುವ ಗೋಲ್ಡನ್ ಡೋಮ್ ಮತ್ತು ರುಹೊಲ್ಲಾ ಖೊಮೇನಿ ಅವರ ಕಪ್ಪು ಬಿಳುಪಿನ ಫೋಟೋ ಇದೆ. ಇವರ ತಾತನೇ ಸೈಯದ್ ಅಹ್ಮದ್ ಮೌಸವಿ ಹಿಂದಿ. ಶಿಯಾ ಧರ್ಮ ಗುರುವಾಗಿದ್ದ ಮೌಸವಿ 1800ರಲ್ಲಿ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರಿನಲ್ಲಿ ಜನಿಸಿದ್ದರು ಎನ್ನಲಾಗುತ್ತದೆ. ಇವರ ಕುಟುಂಬ ಮೂಲತಃ ಇರಾನ್ ಮೂಲದ್ದೇ ಆಗಿದ್ದು, 18ನೇ ಶತಮಾನದಲ್ಲಿ ಯಾವುದೋ ಕಾರಣಕ್ಕೆ ಭಾರತಕ್ಕೆ ವಲಸೆ ಬಂದಿದ್ದರು. ಆನಂತರ, ಅದೇ ಮೂಲವನ್ನು ಹುಡುಕುತ್ತ ಮೌಸವಿ ಮರಳಿ ಇರಾನ್ ಸೇರಿದ್ದರು.
ಸೈಯದ್ ಮೌಸವಿಯವರ ಧಾರ್ಮಿಕ ಚಿಂತನೆಗಳು, ಶಿಯಾ ಇಸ್ಲಾಮಿಗಳೆಲ್ಲ ಒಂದಾಗಬೇಕೆಂಬ ಕರೆ ಮೊಮ್ಮಗ ರುಹೊಲ್ಲಾ ಖೊಮೇನಿಯಲ್ಲಿ ಪರಿಣಾಮ ಬೀರಿತ್ತು. 1979ರ ವೇಳೆಗೆ ರುಹೊಲ್ಲೊ ಖೊಮೇನಿ ಅವರು ಇರಾನ್ ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪಿಸುವತ್ತ ಹೆಜ್ಜೆ ಇಟ್ಟು ಜನರನ್ನು ಒಟ್ಟುಗೂಡಿಸಿದ್ದರು. ಶಿಯಾ ತತ್ವ- ಸಿದ್ಧಾಂತಗಳನ್ನು ಜನರಲ್ಲಿ ಬಿತ್ತುವ ಮೂಲಕ ಇರಾನ್ ದೇಶದಲ್ಲಿ ಶಿಯಾ ಪ್ರಭುತ್ವ ನೆಲೆಯೂರುವಂತೆ ಮಾಡಿದ್ದರು. ಅಲ್ಲದೆ, ದೇಶದ ಮೇಲಿದ್ದ ಪಾಶ್ಚಾತ್ಯರ ಹಿಡಿತವನ್ನು ದೂರ ಮಾಡುವಂತೆ ಮಾಡಿದ್ದರು.


ಖಮೇನಿ ಕುಟುಂಬ ಪ್ರಾಬಲ್ಯಕ್ಕೆ ಬಂದಿತ್ತು
ಮೌಸವಿ ಹಿಂದಿಯವರ ಕುಟುಂಬ ಶಿಯಾ ಮುಸ್ಲಿಮರ ಇಮಾಮ್ ಪರಂಪರೆಗೆ ಸೇರಿದ್ದಾಗಿತ್ತು. ಮೌಸವಿ ಶಿಯಾ ಪರಂಪರೆಯಲ್ಲಿ ಏಳನೇ ಇಮಾಮ್ ಆಗಿದ್ದ ಮೂಸಾ ಅಲ್ ಖಾಜಿಂ ಅವರ ಕುಟುಂಬಕ್ಕೆ ಮೌಸವಿ ಹಿಂದಿ ಸೇರಿದವರಾಗಿದ್ದರು. ಇಂತಹ ಹಿನ್ನೆಲೆಯ ವ್ಯಕ್ತಿ ಇರಾನ್ ದೇಶದ ಮಶಾದ್ ನಗರಕ್ಕೆ ತೆರಳಿ ನೆಲೆಸಿದ್ದು ಖಮೇನಿ ಕುಟುಂಬಸ್ಥರು ಶಿಯಾಗಳಲ್ಲಿ ಮುಂಚೂಣಿಗೆ ಬರುವಂತಾಗಿತ್ತು. ಈಗ ಇರಾನ್ ಮುಖ್ಯಸ್ಥರಾಗಿರುವ ಅಯತೊಲ್ಲಾ ಅಲಿ ಖಮೇನಿ 1939ರಲ್ಲಿ ಮಶಾದ್ ನಗರದಲ್ಲಿ ಜನಿಸಿದ್ದರು. ಅವರ ತಂದೆ ಸಯ್ಯದ್ ಜವಾದ್ ಖಮೇನಿ, ಭಾರತದಿಂದ ವಲಸೆ ಹೋಗಿ ಮೌಲವಿಯಾಗಿದ್ದ ಮೌಸವಿ ಹಿಂದಿಯವರ ಪರಂಪರೆಯವರು. ಹೀಗಾಗಿ ಭಾರತಕ್ಕೂ ಇರಾನ್ ಮುಖ್ಯಸ್ಥ ಖಮೇನಿಗೂ ಹತ್ತಿರದ ನಂಟು ಇದೆಯೆಂಬ ಸುದ್ದಿ ಇರಾನ್ ಮಾಧ್ಯಮಗಳಲ್ಲೀಗ ಸುದ್ದಿಯಾಗಿದೆ. ಆದರೆ ಅಯತೊಲ್ಲಾ ಖಮೇನಿ ಯಾವತ್ತೂ ಈ ಹಳೆಯ ನಂಟಿನ ಕುರಿತಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.
In a remarkable revelation that ties the highest spiritual authority of Iran to India, Iranian media reports have highlighted that Ayatollah Ali Khamenei, the Supreme Leader of Iran and the foremost figure among Shia Muslims globally, has ancestral roots in Uttar Pradesh, India.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm