ಬ್ರೇಕಿಂಗ್ ನ್ಯೂಸ್
18-06-25 01:29 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜೂನ್ 18 : ಅಮೆರಿಕಾದ ಸೇನಾ ದಿನಾಚರಣೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರನ್ನು ವಿಶೇಷ ಅತಿಥಿಯಾಗಿ ಕರೆಯಲಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದು ಭಾರತದ ಪಾಲಿಗೆ ರಾಜತಾಂತ್ರಿಕ ಹಿನ್ನಡೆಯೆಂದೂ ಚರ್ಚೆ ನಡೆದಿತ್ತು. ಆದರೆ ಅಮೆರಿಕ ಪ್ರವಾಸದಲ್ಲಿರುವ ಆಸಿಮ್ ಮುನೀರ್, ಪಾಕಿಸ್ತಾನದ ನಿವಾಸಿಗಳಿಂದಲೇ ತೀವ್ರ ಮುಖಭಂಗ ಎದುರಿಸಿದ್ದಾರೆ. ಪಾಕ್ ನಾಯಕ ಇಮ್ರಾನ್ ಖಾನ್ ಬೆಂಬಲಿಗರು ಅಸೀಮ್ ಮುನೀರ್ ವಿರುದ್ಧ ಬ್ಲಡಿ ಬಾಸ್ಟರ್ಡ್ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಅಸೀಮ್ ತಂಗಿದ್ದ ಹೋಟೆಲ್ ಹೊರಗಡೆ ಪ್ರತಿಭಟನೆ ನಡೆದಿದ್ದು, ಅಸೀಮ್ ಮುನೀರ್ ಸಾಮೂಹಿಕ ಕೊಲೆಗಾರ, ಡೆಮಾಕ್ರಸಿ ಡೈಸ್ ವೆನ್ ಗನ್ ಸ್ಪೀಕ್ಸ್, ನರಹಂತಕನಿಗೆ ಸ್ವಾಗತ, ಯು ಬ್ಲಡಿ ಬಾಸ್ಟರ್ಡ್ ಇತ್ಯಾದಿ ಬರಹಗಳುಳ್ಳ ಭಿತ್ತಿ ಪತ್ರಗಳನ್ನು ಹಿಡಿದು, ಧಿಕ್ಕಾರ ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರತಕ್ಕೆದುರಾಗಿ ಅಮೆರಿಕದ ಮಿತ್ರನೆಂದು ಬಿಂಬಿಸಲು ಹೋದ ಪಾಕ್ ಸೇನಾ ಮುಖ್ಯಸ್ಥ ಮುಖಭಂಗಕ್ಕೀಡಾಗಿದ್ದಾನೆ.











ಪ್ರತಿಭಟನಾಕಾರರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಚದುರಿಸಲು ಹೊರಟಾಗ, ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಇಮ್ರಾನ್ ಬೆಂಬಲಿಗರು ವಾದಿಸಿದ್ದು ಕೊಲೆಗಡುಕ ಅಸೀಮ್ ಮುನೀರ್ ಎಂದು ಘೋಷಣೆ ಕೂಗಿದ್ದಾರೆ. ಆಸಿಮ್ ಮುನೀರ್ ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವನ್ನು ವಜಾಗೊಳಿಸಿ, ಸೇನಾಡಳಿತ ತರಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದು ಇದರ ನಡುವೆಯೇ ಪಾಕ್ ಜೈಲಿನಲ್ಲಿರುವ ಇಮ್ರಾನ್ ಖಾನ್ ಬೆಂಬಲಿಗರು ಧಿಕ್ಕಾರ ಕೂಗಿ ಅಸೀಮ್ ನಡೆಯನ್ನು ವಿರೋಧಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ, ಭಾರತದ ಮಿಲಿಟರಿ ಪಡೆಗಳು ಉಗ್ರರ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಅದರಲ್ಲಿ ನೂರಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಆನಂತರ, ಚೀನಾ ಮತ್ತು ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಭಾರತದತ್ತ ಕಳಿಸಿದ್ದರೂ, ಭಾರತದ ಸೇನೆ ಅದನ್ನೆಲ್ಲ ಹೊಡೆದು ಹಾಕಿತ್ತು. ಆಬಳಿಕ ಯುದ್ಧ ನಿಲ್ಲಿಸಲು ಪಾಕ್ ಪ್ರಧಾನಿ ಅಮೆರಿಕದ ದುಂಬಾಲು ಬಿದ್ದಿದ್ದರೂ, ಆಸಿಮ್ ಮುನೀರ್ ಗೆ ಫೀಲ್ಡ್ ಮಾರ್ಷಲ್ ಪ್ರಶಸ್ತಿ ಕೊಟ್ಟು ಪಾಕ್ ಪ್ರಜೆಗಳ ಮುಂದೆ ಭಾರತಕ್ಕೆ ದಿಟ್ಟ ಪ್ರತಿಕ್ರಿಯೆ ಕೊಟ್ಟಿದ್ದೇವೆಂದು ಬಿಂಬಿಸುವ ಯತ್ನ ನಡೆದಿತ್ತು. ಇದರಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವೂ ಆಗಿತ್ತು. ಇದರ ಬೆನ್ನಲ್ಲೇ, ಅಸೀಮ್ ಮುನೀರ್ ತನ್ನನ್ನು ಅಮೆರಿಕ ಸೇನಾ ದಿನಾಚರಣೆಗೆ ಆಹ್ವಾನಿಸಿದೆ ಎಂದು ಬಿಂಬಿಸಲು ಹೊರಟಿದ್ದರು.
ಅಮೆರಿಕಾದ ಸೆಂಟ್ ಕಾಮ್ ಕಮಾಂಡರ್ ಜನರಲ್ ಮೈಕಲ್ ಕುರಿಲ್ಲಾ ಅವರ ಆಹ್ವಾನದ ಮೇರೆಗೆ ಆಸಿಮ್ ಮುನೀರ್, ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಭೇಟಿಗೂ, ಶ್ವೇತ ಭವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈಟ್ ಹೌಸ್ ಸ್ಪಷ್ಟ ಪಡಿಸಿದೆ. ಆದರೆ ಇಮ್ರಾನ್ ಖಾನ್ ಬೆಂಬಲಿಗರು, ತಮ್ಮ ದೇಶದ ಸೇನಾ ಮುಖ್ಯಸ್ಥನನ್ನು ಅವಮಾನಿಸಿ ಆತನ ಸ್ಥಿತಿಯೇನೆಂದು ತೋರಿಸಿದ್ದಾರೆ.
Bloody Bastard, Pakistan Army Chief Humiliated by Own Citizens During U.S. Visit, Protesters Slam Asim Munir Over Military Rule Push.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm