ಬ್ರೇಕಿಂಗ್ ನ್ಯೂಸ್
16-06-25 05:29 pm HK News Desk ದೇಶ - ವಿದೇಶ
ಹೈದರಾಬಾದ್, ಜೂನ್ 16 : ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಹೈದ್ರಾಬಾದ್ ಬರುತ್ತಿದ್ದ ಲುಫ್ತಾನ್ಸಾ ಏರ್ಲೈನ್ಸ್ ವಿಮಾನವು ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಭಾರತ ಪ್ರವೇಶ ಮಾಡುವ ಬದಲು ವಾಯು ಮಾರ್ಗದಲ್ಲೇ ಹಿಂತಿರುಗಿ ಜರ್ಮನಿಗೆ ತೆರಳಿದ ವಿದ್ಯಮಾನ ನಡೆದಿದೆ.
ಎಲ್ಎಚ್ 752 ನಂಬರಿನ ಬೋಯಿಂಗ್ 787-09 ಡ್ರೀಮ್ ಲೈನರ್ ವಿಮಾನವು ಜರ್ಮನಿಯ ಕಾಲಮಾನ ಭಾನುವಾರ ಮಧ್ಯಾಹ್ನ 2.30ಕ್ಕೆ ಹೊರಟಿತ್ತು. ಮಧ್ಯರಾತ್ರಿ 1.20ಕ್ಕೆ ಹೈದರಾಬಾದ್ ರಾಜೀವ ಗಾಂಧಿ ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಜರ್ಮನಿಯಿಂದ ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆಯೆಂದು ವಿಮಾನ ನಿಲ್ದಾಣಕ್ಕೆ ಇಮೇಲ್ ಸಂದೇಶ ಬಂದಿದ್ದರಿಂದ, ವಿಮಾನಕ್ಕೆ ಲ್ಯಾಂಡ್ ಆಗಲು ಅನುಮತಿ ನೀಡುವುದಿಲ್ಲ ಎಂದು ಹೈದರಾಬಾದ್ ಏರ್ಪೋರ್ಟ್ ಅಧಿಕಾರಿಗಳು ಸದ್ರಿ ವಿಮಾನ ಸಂಸ್ಥೆಗೆ ಸಂದೇಶ ಕಳುಹಿಸಿದ್ದರು.
ಹಾಗಾಗಿ ಲುಫ್ತಾನ್ಸಾ ಸಂಸ್ಥೆಯವರು ಜರ್ಮನಿ ವಿಮಾನ ಭಾರತೀಯ ವಾಯು ಪ್ರದೇಶ ಪ್ರವೇಶಿಸುವ ಮೊದಲೇ ಡೈವರ್ಟ್ ಮಾಡಿದ್ದರು. ಹೈದ್ರಾಬಾದ್ ಏರ್ಪೋರ್ಟಿಗೆ ಭಾನುವಾರ ಸಂಜೆ 6 ಗಂಟೆ ವೇಳೆಗೆ ಜರ್ಮನಿಯಿಂದ ಬರುತ್ತಿರುವ ವಿಮಾನದಲ್ಲಿ ಬಾಂಬ್ ಇದೆಯೆಂದು ಇಮೇಲ್ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಬಾಂಬ್ ಬೆದರಿಕೆ ನಿರ್ವಹಣಾ ಸಮಿತಿಯನ್ನು ರೂಪಿಸಿ, ಎಲ್ಲ ಮಾದರಿಯ ಸಿದ್ಧತಾ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. ಹೀಗಾಗಿ ಹತ್ತಿರದ ಬೇರಾವುದೇ ಏರ್ಪೋರ್ಟ್ ಅಥವಾ ಹಿಂತಿರುಗಿ ಬಂದಲ್ಲಿಗೇ ತೆರಳುವಂತೆ ಸೂಚಿಸಲಾಗಿತ್ತು.
ಆನಂತರ, ಮರಳಿ ಫ್ರಾಂಕ್ ಫರ್ಟ್ ನಗರಕ್ಕೇ ವಿಮಾನವನ್ನು ಹಿಂತಿರುಗಿಸಲಾಗಿತ್ತು. ನಮಗೆ ಪ್ರಯಾಣಿಕರ ಭದ್ರತೆ ಮೊದಲ ಆದ್ಯತೆಯಾಗಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಫ್ರಾಂಕ್ ಫರ್ಟ್ ನಲ್ಲಿ ಉಳಿಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಎಲ್ಲ ತಪಾಸಣೆ ಮುಗಿಸಿದ ಬಳಿಕ ಇವತ್ತು ಮತ್ತೆ ವಿಮಾನ ಹೈದ್ರಾಬಾದ್ ಗೆ ಮರಳಲಿದೆ ಎಂದು ಲುಫ್ತಾನ್ಸಾ ಕಂಪನಿಯ ವಕ್ತಾರ ತಿಳಿಸಿದ್ದಾರೆ. ಇತ್ತೀಚೆಗೆ ಜರ್ಮನಿಯ ಫುಕೆಟ್ ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೂ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆನಂತರ, ಆ ವಿಮಾನವನ್ನೂ ಮರಳಿ ಫುಕೆಟ್ ಗೆ ಒಯ್ಯಲಾಗಿತ್ತು.
A Lufthansa flight enroute to Hyderabad from Frankfurt was forced to return to its origin on Sunday (June 15) evening following a bomb threat, prompting a full-scale security response.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm