ಬ್ರೇಕಿಂಗ್ ನ್ಯೂಸ್
14-06-25 12:00 pm HK News Desk ದೇಶ - ವಿದೇಶ
ಜೆರುಸೆಲಂ, ಜೂ 14: ಟೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವಾರು ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳು "ಹುತಾತ್ಮರಾಗಿದ್ದಾರೆ" ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಶುಕ್ರವಾರ ದೃಢಪಡಿಸಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜನರಲ್ ಅಮೀರ್ ಅಲಿ ಹಾಜಿಜಾದೆ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿದೆ.
ಇವರ ಜೊತೆಗೆ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಅಥವಾ ಐಆರ್‌ಜಿಸಿಯ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದೆ.
ದಾಳಿಯ ಸಮಯದಲ್ಲಿ, ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಹಾಜಿಜಾದೆ ಹತ್ಯೆಯಾಗಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇರಾನ್ ಈ ಹಿಂದೆ ಈ ಹೇಳಿಕೆಯನ್ನು ನಿರಾಕರಿಸಿತ್ತು. ಆದರೆ ಈಗ ಅದನ್ನು ದೃಢಪಡಿಸಿದೆ. ಈ ದಾಳಿಯ ಸಮಯದಲ್ಲಿ 6 ಪ್ರಮುಖ ಪರಮಾಣು ವಿಜ್ಞಾನಿಗಳು ಮತ್ತು ಹಲವಾರು ಹಿರಿಯ ಮಿಲಿಟರಿ ನಾಯಕರು ಸಹ ಸಾವನ್ನಪ್ಪಿದ್ದರು. ಇಸ್ರೇಲ್ ವಾಯುದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಸಾವನ್ನಪ್ಪಿದರು.
ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದ ಆರು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ದೃಢಪಡಿಸಿವೆ, ಅವರಲ್ಲಿ ನಾಲ್ವರು ಫೆರೆಡೌನ್ ಅಬ್ಬಾಸಿ-ದವಾನಿ, ಮೊಹಮ್ಮದ್ ಮೆಹದಿ ಟೆಹ್ರಾನ್ಚ್, ಅಹ್ಮದ್ ರೆಜಾ ಜೊಲ್ಫಾಘರಿ ಮತ್ತು ಅಮಿರ್‌ಹೊಸೇನ್ ಫೆಖಿ ಸೇರಿದ್ದಾರೆ.
ಇಸ್ರೇಲ್ ಇಂದು ಇರಾನ್‌ನಾದ್ಯಂತ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ನಾಯಕತ್ವವನ್ನು ಕೇಂದ್ರೀಕರಿಸಿತ್ತು. ತನ್ನ ದಾಳಿಯ ಸಮಯದಲ್ಲಿ ಇಸ್ರೇಲ್ ಕೆಲವು ಪರಮಾಣು ವಿಜ್ಞಾನಿಗಳು ಮತ್ತು ಮಿಲಿಟರಿ ನಾಯಕರನ್ನು ಕೊಂದಿದೆ.
ಇರಾನ್ ಹಾಗೂ ಇಸ್ರೇಲ್‌ನ ಈ ನಡೆಯಿಂದ ಮದ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದರಿಂದ ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್, 'ಇಸ್ಲಾಮಿಕ್ ರಾಷ್ಟ್ರದಿಂದ ಉಡಾವಣೆಗೊಂಡ ಕ್ಷಿಪಣಿಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಇವುಗಳನ್ನು ತಡೆಯುವ ವೇಳೆ ಸ್ಫೋಟಗಳು ಸಂಭವಿಸಿವೆ. ಟೆಲ್ ಅವೀವ್‌ನಲ್ಲಿ ಸಂಭವಿಸಿದ ದೊಡ್ಡ ಸ್ಫೋಟಗಳಲ್ಲಿ ಹಲವಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜೆರುಸಲೆಮ್‌ನಲ್ಲಿಯೂ ಸ್ಫೋಟಗಳು ಸಂಭವಿಸಿವೆ. ಇದಕ್ಕೆ ನಾವು ಪ್ರತಿಕಾರ ಹೇಳುತ್ತೇವೆ' ಎಂದು ತಿಳಿಸಿದೆ.
Iran’s highest-ranking military officer, the head of its elite Revolutionary Guards Corps and its air force and a former national security chief have all been killed in Israel’s unprecedented Operation Rising Lion.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm