ಬ್ರೇಕಿಂಗ್ ನ್ಯೂಸ್
12-06-25 05:13 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜೂ 12 : ಅಹಮದಾಬಾದ್‌ನ ಮೇಘನಿನಗರದಲ್ಲಿ ನಡೆದಿರೋ ಈ ವಿಮಾನ ಅಪಘಾತದ ಸುದ್ದಿ ನಿಜಕ್ಕೂ ಆಘಾತಕಾರಿ. ಏರ್ ಇಂಡಿಯಾಕ್ಕೆ ಸೇರಿದ ವಿಮಾನವೊಂದು ಲಂಡನ್‌ಗೆ ಹೊರಟಿತ್ತು. ಆದರೆ, ಟೇಕ್ ಆಫ್ ಆದ ಕೇವಲ ಹತ್ತು ನಿಮಿಷಗಳಲ್ಲೇ ಭೀಕರ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 242 ಜನ ಪ್ರಯಾಣಿಕರಿದ್ದರು ಅಂತಾ ವರದಿಯಾಗಿದೆ.
ಅಪಘಾತ ಎಷ್ಟು ಭೀಕರವಾಗಿತ್ತು ಅಂದ್ರೆ ವಿಮಾನ ಅಕ್ಷರಶಃ ಛಿದ್ರ ಛಿದ್ರವಾಗಿತ್ತು. ವಿಮಾನದ ಭಾಗಗಳು ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಬಿದ್ದಿದ್ದವು. ಅಪಘಾತ ಆದ ತಕ್ಷಣ ಅಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪಿದ್ದು, ಸುಮಾರು 22 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪೈಲಟ್‌ನಿಂದ "ಮೇಡೇ" ಕರೆ !
ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಬಿಡುಗಡೆ ಮಾಡಿರೋ ಹೇಳಿಕೆ ಪ್ರಕಾರ, ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ "ಮೇಡೇ" ಕರೆ ಮಾಡಿದ್ದಾರಂತೆ. "ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಇತ್ತು. ಅಷ್ಟೇ ಅಲ್ಲ, ಸಹ-ಪೈಲಟ್‌ಗೆ 1100 ಗಂಟೆಗಳ ಅನುಭವವಿತ್ತು" ಅಂತಾ ಡಿಜಿಸಿಎ ತಿಳಿಸಿದೆ.
ಎಟಿಸಿ ಮಾಹಿತಿ ಪ್ರಕಾರ, ವಿಮಾನ ಅಹಮದಾಬಾದ್‌ನ ರನ್‌ವೇ 23 ರಿಂದ ಮಧ್ಯಾಹ್ನ 1:39ಕ್ಕೆ (ಭಾರತೀಯ ಕಾಲಮಾನ) ಟೇಕ್ ಆಫ್ ಆಗಿತ್ತು. "ಮೇಡೇ" ಕರೆ ಮಾಡಿದ ಮೇಲೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರನ್‌ವೇ 23 ರಿಂದ ಹೊರಟ ತಕ್ಷಣವೇ ವಿಮಾನ ನಿಲ್ದಾಣದ ಹೊರಗಡೆ ನೆಲಕ್ಕೆ ಬಿದ್ದಿದೆ. ಅಪಘಾತ ಸ್ಥಳದಿಂದ ಕಪ್ಪು ಹೊಗೆ ಬರ್ತಿದ್ದ ದೃಶ್ಯ ನಿಜಕ್ಕೂ ಆತಂಕಕಾರಿ ಅಂತಾ ಡಿಜಿಸಿಎ ಹೇಳಿದೆ.
ಇನ್ನೂ ವಿಮಾನ ಪತನಗೊಳ್ಳುವ ಒಂದು ನಿಮಿಷದ ಮುನ್ನ ಪೈಲೆಟ್ ಮೇಡೇ ಅಂತ ಹೇಳಿದ್ದಾರೆ. ಅದಾದ ನಂತರ ಒಂದು ಮಾತು ಕೂಡ ಪೈಲೆಟ್ ಕಡೆಯಿಂದ ಬರಲಿಲ್ಲ.
ಈ ದುರ್ಘಟನೆಯಲ್ಲಿ ಗಾಯಗೊಂಡಿರೋ ಹಲವಾರು ಪ್ರಯಾಣಿಕರನ್ನು ನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದ್ರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಅನ್ನೋ ಬಗ್ಗೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ ಎರಡೂ ನಡೀತಾ ಇವೆ.
ಏನಿದು "ಮೇಡೇ" ಕರೆ ?
"ಮೇಡೇ" ಅನ್ನೋದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರೋ ಒಂದು ತುರ್ತು ಸಂಕೇತ. ಪೈಲಟ್‌ಗಳು, ನಾವಿಕರು ಅಥವಾ ಇನ್ನಿತರ ವೃತ್ತಿಪರರು ತಕ್ಷಣದ ಸಹಾಯ ಬೇಕಾದಾಗ ಈ ಪದವನ್ನು ಬಳಸುತ್ತಾರೆ. ಇದು ವಿಮಾನದಲ್ಲಿ ಗಂಭೀರ ತಾಂತ್ರಿಕ ಸಮಸ್ಯೆ, ಅಪಘಾತ ಅಥವಾ ಪ್ರಯಾಣಿಕರಿಗೆ ಯಾವುದೇ ಅಪಾಯ ಎದುರಾದಾಗ ಜೀವಕ್ಕೆ ಅಪಾಯ ಎದುರಾಗಿದೆ ಅನ್ನೋದನ್ನ ಸೂಚಿಸುತ್ತೆ.
A tragic aviation disaster struck Ahmedabad’s Meghaninagar area today as an Air India flight bound for London crashed just minutes after takeoff, leaving the entire nation in shock. According to initial reports, the flight took off from Runway 23 of the Sardar Vallabhbhai Patel International Airport at 1:39 PM IST. Within just ten minutes of takeoff, the aircraft encountered a critical emergency.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm