ಬ್ರೇಕಿಂಗ್ ನ್ಯೂಸ್
12-06-25 04:26 pm HK News Staff ದೇಶ - ವಿದೇಶ
ಅಹ್ಮದಾಬಾದ್, ಜೂನ್ 12: ಅಹ್ಮದಾಬಾದ್ ಏರ್ಪೋರ್ಟ್ ನಿಂದ ಟೇಕಾಫ್ ಆದ ಕೇವಲ ಐದೇ ನಿಮಿಷದಲ್ಲಿ ಏರ್ ಇಂಡಿಯಾ ಬೋಯಿಂಗ್ ವಿಮಾನ ಪತನವಾಗಿದ್ದು, ಜನವಸತಿ ಪ್ರದೇಶದ ಮೇಲೆ ಬಿದ್ದಿದೆ. ಇದರಿಂದಾಗಿ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ ಎಲ್ಲ ಪ್ರಯಾಣಿಕರೂ ಸುಟ್ಟು ಹೋಗಿದ್ದಾರೆ. ವಿಮಾನದಲ್ಲಿ ಇಬ್ಬರು ಪೈಲಟ್, ಹತ್ತು ಸಿಬಂದಿ ಸೇರಿ 242 ಇದ್ದರು. ಅಂದಾಜು 133 ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಇದೆ. ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾಣಿ ಕೂಡ ಇದ್ದರು ಎಂದು ಏರ್ ಇಂಡಿಯಾ ಹೇಳಿದೆ.

ಮಧ್ಯಾಹ್ನ 1.20ರ ಸುಮಾರಿಗೆ ವಿಮಾನ ಟೇಕಾಫ್ ಆಗಿದ್ದು, ಕೆಲವು ಕಿಮೀ ದೂರಕ್ಕೆ ಸಂಚರಿಸುತ್ತಿದ್ದಾಗಲೇ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್ ಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಏರ್ಪೋರ್ಟ್ ಬಳಿಯ ಮೇಘನಿ ನಗರ ಎಂಬಲ್ಲಿ ವಿಮಾನ ಪತನಗೊಂಡಿದ್ದು, ಪ್ರದೇಶದ ಅಪಾರ್ಟ್ಮೆಂಟ್ ಕೂಡ ಬೆಂಕಿಗಾಹುತಿಯಾಗಿದೆ. ವಿಮಾನದಲ್ಲಿ 169 ಭಾರತೀಯಪರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಇದ್ದರು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ವಿಮಾನ ಪತನವಾಗುತ್ತಲೇ ದಟ್ಟ ಕಪ್ಪು ಹೊಗೆ ಆವರಿಸಿದ್ದು, ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತಿದೊಡ್ಡ ವಿಮಾನ ಅವಘಡ ಇದಾಗಿದೆ.



ವಿಮಾನದಲ್ಲಿ ಅತ್ಯಂತ ಅನುಭವಿ ಪೈಲಟ್ ಗಳಾದ ಕಮಾಂಡರ್ ಸುಮಿತ್ ಸಭರ್ವಾಲ್ ಮತ್ತು ಕ್ಲೈವ್ ಕುಂದರ್ ಇದ್ದರು. ಯಾವ ಕಾರಣಕ್ಕೆ ಪತನ ಆಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅಪಘಾತಕ್ಕೀಡಾದ ವಿಮಾನ 11 ವರ್ಷ ಹಳೆಯದು ಎನ್ನುವ ಮಾಹಿತಿ ಇದೆ. ವಿಜಯ್ ರೂಪಾಣಿ ಗುಜರಾತಿನ 16ನೇ ಸಿಎಂ ಆಗಿದ್ದು, 2016ರಿಂದ 2021ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ರೂಪಾಣಿ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಖಚಿತ ವರದಿಗಳು ಲಭ್ಯವಾಗಿಲ್ಲ. ಅವಘಡ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ತಿಳಿಯುತ್ತಲೇ ವಿಶ್ವಾದ್ಯಂತ ಕಂಬನಿ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೈಶಂಕರ್ ಶಾಕ್ ವ್ಯಕ್ತಪಡಿಸಿದ್ದಾರೆ.
Tragedy struck as an Air India Boeing aircraft crashed in a densely populated area, resulting in the deaths of over 133 people. The aircraft, which was reportedly carrying 169 Indian nationals—including former Gujarat Chief Minister Vijay Rupani—and 53 British citizens, went down shortly after takeoff/approach (details emerging), causing a massive fire and destroying an apartment complex on impact.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm