ಬ್ರೇಕಿಂಗ್ ನ್ಯೂಸ್
06-06-25 11:08 pm HK News Desk ದೇಶ - ವಿದೇಶ
ಶ್ರೀನಗರ, ಜೂನ್ 6 : ಕಾಶ್ಮೀರ ಕಣಿವೆಯನ್ನು ಜಮ್ಮುವಿಗೆ ಸಂಪರ್ಕಿಸುವ ಜಗತ್ತಿನ ಅತಿ ಎತ್ತರದ ಚೆನಾಬ್ ನದಿಯ ಮೇಲಿನ ರೈಲ್ವೇ ಸೇತುವೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಇದೇ ವೇಳೆ, ಮೋದಿಯವರು ತ್ರಿವರ್ಣ ಧ್ವಜ ಹಿಡಿದು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಗಮನ ಸೆಳೆದರು. ಉದ್ಘಾಟನೆಗು ಮುನ್ನ ರೈಲು ಇಂಜಿನ್ನಲ್ಲಿ ಪ್ರಯಾಣಿಸಿ ಮೋದಿ ಅಲ್ಲಿಗೆ ತಲುಪಿದರು.
ಚೆನಾಬ್ ನದಿಗೆ ನಿರ್ಮಿಸಿರುವ ಈ ಸೇತುವೆಯು 272 ಕಿಮೀ ಉದ್ದದ ಉಧಂಪುರ- ಶ್ರೀನಗರ - ಬಾರಾಮುಲ್ಲಾ ರೈಲ್ವೇ ಲಿಂಕ್ ಭಾಗವಾಗಿದೆ. ಈ ಯೋಜನೆಯನ್ನು 43,780 ಕೋಟಿ ವೆಚ್ಚದಲ್ಲಿ ಕಾರ್ಯಗತ ಮಾಡಲಾಗುತ್ತಿದೆ.






ಕತ್ರಾದಿಂದ ಶ್ರೀನಗರಕ್ಕೆ ಮೊದಲ ವಂದೇ ಭಾರತ್ ರೈಲು ಇದಾಗಿದ್ದು ಈ ಸೇತುವೆ ಉದ್ಘಾಟಿಸಿದ್ದಕ್ಕೆ ಪ್ರಧಾನಿ ಮೋದಿ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.
ಕತ್ರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಒಮರ್ ಅಬ್ದುಲ್ಲಾ ಮಾತನಾಡಿ, "ಈ ರೈಲು ಸೇವೆಯ ಬಗ್ಗೆ ಅನೇಕ ಜನರು ಕನಸು ಕಂಡಿದ್ದರು. ಬ್ರಿಟಿಷರು ಮಾಡಲು ಸಾಧ್ಯವಾಗದ್ದನ್ನು ನೀವು ಪೂರ್ಣಗೊಳಿಸಿದ್ದೀರಿ, ಮತ್ತು ಕಾಶ್ಮೀರ ಕಣಿವೆ ಈಗ ದೇಶದ ಉಳಿದ ಭಾಗಗಳೊಂದಿಗೆ ನೇರ ಸಂಪರ್ಕ ಪಡೆಯುವಂತಾಗಿದೆ. ಈ ಸಂದರ್ಭದಲ್ಲಿ, ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉಲ್ಲೇಖಿಸಿ ಧನ್ಯವಾದ ಹೇಳದಿದ್ದರೆ ಅದು ತಪ್ಪಾಗುತ್ತದೆ.. ಈ ಯೋಜನೆಗೆ ಅಡಿಪಾಯ ಹಾಕಿದಾಗ ನಾನು 8 ನೇ ತರಗತಿಯಲ್ಲಿ ಓದುತ್ತಿದ್ದೆ. ಈಗ ನನಗೆ 55 ವರ್ಷ, ಮತ್ತು ಇದನ್ನು ಅಂತಿಮವಾಗಿ ಉದ್ಘಾಟಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಇದಕ್ಕೆ 'ರಾಷ್ಟ್ರೀಯ ಮಹತ್ವದ ಯೋಜನೆ' ಸ್ಥಾನಮಾನವನ್ನು ನೀಡಿದ್ದು ಮತ್ತು ಅದರ ಬಜೆಟ್ ಹೆಚ್ಚಿಸಿದ್ದಕ್ಕಾಗಿ ಇದು ಸಾಧ್ಯವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಎಲ್ಲ ರೀತಿಯಲ್ಲೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Prime Minister Narendra Modi on Friday said Jammu and Kashmir Chief Minister Omar Abdullah's childhood dream has been fulfilled with the completion of the Udhampur-Srinagar-Baramulla Rail Link (USBRL) project.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm