ಬ್ರೇಕಿಂಗ್ ನ್ಯೂಸ್
01-06-25 12:35 pm HK News Desk ದೇಶ - ವಿದೇಶ
ಕೊಲ್ಲಂ, ಮೇ 31 : ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಕೆಳಗಡೆ ನಿಂತುಕೊಂಡಿದ್ದ ಕಂಟ್ರಾಕ್ಟರ್ ಅದನ್ನು ನೋಡಿ ಕ್ಯಾಚ್ ಹಿಡಿದು ರಕ್ಷಣೆ ಮಾಡಿದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಎರಡನೇ ಮಹಡಿಯಲ್ಲಿ ಕಾಂಕ್ರೀಟ್ ಕಿಟಕಿಯನ್ನು ಹೊಂದಿಸುತ್ತಿದ್ದಾಗ ಹೊರಭಾಗದಲ್ಲಿ ನಿಂತುಕೊಂಡಿದ್ದ ಶಂಕರ್ ಎಂಬ ಕೆಲಸದಾಳು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಕೆಲಸದ ಕಂಟ್ರಾಕ್ಟರ್ ಆಗಿದ್ದ ಗಣೇಶ್ ಕೆಳಭಾಗದಲ್ಲಿದ್ದುಕೊಂಡು ಕಾರ್ಮಿಕರ ಕೆಲಸವನ್ನು ಗಮನಿಸುತ್ತ ಜಾಗ್ರತೆ ಎನ್ನುತ್ತಿದ್ದ. ಅಷ್ಟರಲ್ಲೇ ಶಂಕರ್ ಮೇಲ್ಭಾಗದಿಂದ ಕೆಳಕ್ಕೆ ಬಿದ್ದಿದ್ದು, ಅರೆಕ್ಷಣದಲ್ಲಿ ಮೇಲಿನಿಂದ ಬಿದ್ದ ಕಾರ್ಮಿಕನನ್ನು ಕ್ಯಾಚ್ ಹಿಡಿದು ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಇಬ್ಬರೂ ಧೊಪ್ಪನೆ ನೆಲಕ್ಕೆ ಬೀಳುವ ದೃಶ್ಯ ಪಕ್ಕದ ಕಟ್ಟಡದ ವಿಡಿಯೋದಲ್ಲಿ ಸೆರೆಯಾಗಿದೆ.
ಗಣೇಶ್ ತನ್ನ ಸೊಂಟ ನೋವಿಗೆಂದು ಬೆಲ್ಟ್ ಹಾಕ್ಕೊಂಡಿದ್ದರು. ಮೇಲಿನಿಂದ ಬಿದ್ದ ಕಾರ್ಮಿಕನನ್ನು ಕ್ಯಾಚ್ ಹಿಡಿದಿದ್ದರಿಂದ ಅವರ ಬಲದ ಕಾಲಿಗೆ ತುಸು ಪೆಟ್ಟಾಗಿದೆ. ಶಂಕರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಆನಂತರ, ಅಲ್ಲಿಯೇ ಕೆಲಸ ಆರಂಭಿಸಿದ್ದಾನೆ. ಗಣೇಶ್ ಮತ್ತು ಶಂಕರ್ ಕಳೆದ 25 ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಗಣೇಶ್ ಪ್ರತಿಕ್ರಿಯಿಸಿದ್ದು, ದೇವರ ದಯೆಯಲ್ಲಿ ಏನೂ ಆಗದೆ ಉಳಿದುಕೊಂಡಿದ್ದೇವೆ, ಅಕಸ್ಮಾತ್ ಕೆಳಕ್ಕೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದುದರಿಂದ ಏನೋ ಕ್ಯಾಚ್ ಹಿಡಿಯಲು ಟ್ರೈ ಮಾಡಿದ್ದೇನೆ, ಇಬ್ಬರೂ ಬಚಾವಾಗಿದ್ದೇವೆ ಎಂದಿದ್ದಾರೆ.
കൊല്ലം പുനലൂരിൽ വീട് പണിക്കിടെ രണ്ടാം നിലയിൽ നിന്ന് വീണ തൊഴിലാളി അത്ഭുതകരമായി രക്ഷപ്പെട്ടു. കാൽ വഴുതി താഴേക്ക് വീണ ശങ്കറിനെ കരാറുകാരനായ ഗണേശൻ രക്ഷപ്പെടുത്തുകയായിരുന്നു#Accident #Kollam pic.twitter.com/V0Km9VPXK0
— Asianet News (@AsianetNewsML) May 28, 2025
A contractor in Kerala’s Kollam district caught a worker in his arms when he fell from the second floor of an under-construction house. The fall-and-rescue incident was captured on CCTV.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm