ಬ್ರೇಕಿಂಗ್ ನ್ಯೂಸ್
17-05-25 03:42 pm HK News Desk ದೇಶ - ವಿದೇಶ
ನವದೆಹಲಿ, ಮೇ.17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬದ ಹಿಡಿತ ಹೊಂದಿರುವ ಕ್ರಿಪ್ಟೋ ಕರೆನ್ಸಿ ಕಂಪನಿಯ ಜೊತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಹತ್ತಿರದ ನಂಟು ಇಟ್ಟುಕೊಂಡಿರುವ ಅಂಶ ಬಯಲಾಗಿದ್ದು ಕದನ ವಿರಾಮದ ಉತ್ಸುಕತೆ ಮತ್ತು ಪಾಕ್ ಮೇಲಿನ ಟ್ರಂಪ್ ಪ್ರೀತಿ ವಿಷಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಭಾರತ- ಪಾಕಿಸ್ತಾನ ನಡುವಿನ ಕದನ ವಿರಾಮದ ಶ್ರೇಯಸ್ಸನ್ನು ಪಡೆಯಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್, ತನ್ನಿಂದಲೇ ಕದನ ವಿರಾಮ ಆಗಿತ್ತು ಎನ್ನುವುದನ್ನು ಬಿಂಬಿಸಲು ಯತ್ನಿಸಿದ್ದರು. ಆದರೆ ಭಾರತದ ಕಡೆಯಿಂದ ತೀವ್ರ ವಿರೋಧ ಬಂದಾಗ, ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದೂ ಆಗಿತ್ತು. ಆದರೆ ಇದರ ಬೆನ್ನಲ್ಲೇ ಟ್ರಂಪ್ ಕುಟುಂಬದ ಹಿಡಿತ ಹೊಂದಿರುವ ಕ್ರಿಪ್ಟೋ ಕಂಪನಿಯು ಪಾಕಿಸ್ತಾನದ ಸೇನಾ ಮುಖ್ಯಸ್ಥ ಮತ್ತು ಆತನ ಕುಟುಂಬದ ಪಾಲುದಾರಿಕೆಯ ನಂಟು ಹೊರಬಂದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಡೊನಾಲ್ಡ್ ಟ್ರಂಪ್ ಕುಟುಂಬ ಶೇ.60ರಷ್ಟು ಪಾಲು ಹೊಂದಿರುವ ಅಮೆರಿಕದ ಖಾಸಗಿ ಕ್ರಿಪ್ಟೋ ಕರೆನ್ಸಿ ಕಂಪನಿ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಮತ್ತು ಪಾಕಿಸ್ತಾನದ ಹೊಸ ಕ್ರಿಪ್ಟೋ ಕೌನ್ಸಿಲ್ ನಡುವೆ ಒಪ್ಪಂದ ಏರ್ಪಟ್ಟಿದೆ ಎಂಬ ಸಂಗತಿಯನ್ನು ಪಾಕಿಸ್ತಾನದ ಡಾನ್ ಪತ್ರಿಕೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ಕಂಪನಿ ಪ್ರತಿನಿಧಿಗಳು ಎಪ್ರಿಲ್ 22ರಂದು ಪಾಕಿಸ್ತಾನಕ್ಕೆ ಬಂದಿದ್ದು ಆಗ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಆತನ ಕುಟುಂಬಸ್ಥರೇ ಅದ್ದೂರಿ ಸ್ವಾಗತ ನೀಡಿದ್ದರು. ಭಾರತದಲ್ಲಿ ಪಹಲ್ಗಾಮ್ ದಾಳಿಯಾಗುವುದಕ್ಕೂ ಎರಡು ದಿನ ಮುನ್ನ ಈ ಒಪ್ಪಂದ ಅಂತಿಮವಾಗಿತ್ತು ಎಂದು ವರದಿಗಳು ತಿಳಿಸಿವೆ.
ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ ಕಂಪನಿಯು ಕ್ರಿಪ್ಟೋ ಕರೆನ್ಸಿ ಮತ್ತು ಬ್ಲಾಕ್ ಚೈನ್ ನಲ್ಲಿ ಹೂಡಿಕೆ ಮಾಡುತ್ತದೆ. ಈ ಕಂಪನಿಯಲ್ಲಿ ಡೊನಾಲ್ಡ್ ಟ್ರಂಪ್ ಪುತ್ರರಾದ ಎರಿಕ್ ಮತ್ತು ಡೊನಾಲ್ಡ್ ಜೂನಿಯರ್ ಹಾಗೂ ಅವರ ಅಳಿಯ ಜೇರಡ್ ಕುಶ್ನೇರ್ ಅವರ ಪಾಲು ಇದೆ. ಈ ಮೂವರೂ ಕಂಪನಿಯಲ್ಲಿ ಶೇ.60ರಷ್ಟು ಪಾಲನ್ನು ಹೊಂದಿದ್ದಾರೆಂದು ವರದಿಗಳು ತಿಳಿಸಿವೆ. ಪಾಕಿಸ್ತಾನವು ತನ್ನ ಕ್ರಿಪ್ಟೋ ಕೌನ್ಸಿಲ್ ಕಂಪನಿಗೆ ಅಮೆರಿಕದ ಬೈನಾನ್ಸ್ ಕಂಪನಿ ಸ್ಥಾಪಕ ಚಾಂಗ್ ಪೆಂಗ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಿದೆ.
ಈ ಒಪ್ಪಂದ ಅಂತಿಮಗೊಳಿಸಲು ಟ್ರಂಪ್ ಅವರ ಬಹುಕಾಲದ ವ್ಯಾಪಾರ ಸಹವರ್ತಿ ಹಾಗೂ ಈಗ ಮಧ್ಯಪ್ರಾಚ್ಯಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿರುವ ಸ್ವೀಟ್ ವಿಟ್ ಕಾಫ್ ಅವರ ಪುತ್ರ ಝಾಚರಿ ವಿಟ್ ಕಾಫ್ ನೇತೃತ್ವದಲ್ಲಿ ಅಮೆರಿಕದ ನಿಯೋಗವು ಪಾಕಿಸ್ತಾನಕ್ಕೆ ಆಗಮಿಸಿತ್ತು. ಅಮೆರಿಕದ ನಿಯೋಗವನ್ನು ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಸ್ವಾಗತಿಸಿದ್ದರು. ಈ ವೇಳೆ, ಪ್ರಧಾನಿ ಶರೀಫ್, ಮುನೀರ್ ಮತ್ತು ಅಮೆರಿಕದ ನಿಯೋಗ ಸದಸ್ಯರು ರಹಸ್ಯ ಸಭೆಯನ್ನೂ ನಡೆಸಿದ್ದರು. ಪಹಲ್ಗಾಮ್ ಉಗ್ರ ದಾಳಿಯ ನಂತರ ಈ ಒಪ್ಪಂದವು ಭಾರೀ ಚರ್ಚೆಗೆ ಕಾರಣವಾಗಿದ್ದು, ಕದನ ವಿರಾಮಕ್ಕೆ ಟ್ರಂಪ್ ಉತ್ಸುಕತೆ ತೋರಿದ್ದ ವಿಚಾರವೂ ಒಂದಕ್ಕೊಂದು ತಳಕು ಹಾಕ್ಕೊಂಡಿದೆ. ಈ ವಿಚಾರದಲ್ಲಿ ಟ್ರಂಪ್ ಆಗಲೀ, ಅಮೆರಿಕ ಸರ್ಕಾರದ ಪ್ರತಿನಿಧಿಗಳಾಗಲೀ ಯಾವುದೇ ಹೇಳಿಕೆ ನೀಡಿಲ್ಲ.
On April 26, Pakistan’s Ministry of Finance in Islamabad hosted an unusual meeting. Executives from World Liberty Financial (WLF), a U.S.-based crypto company with direct ties to the Donald Trump family, signed a landmark agreement with the Pakistan Crypto Council (PCC).
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm