ಬ್ರೇಕಿಂಗ್ ನ್ಯೂಸ್
04-04-25 08:50 pm HK News Desk ದೇಶ - ವಿದೇಶ
ನವದೆಹಲಿ, ಎ.4 : ಬಹು ನಿರೀಕ್ಷಿತ ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲು ಅನುಮೋದನೆ ಸಿಕ್ಕಿದೆ. ಆದರೆ ಇದೇ ವೇಳೆ, ವಕ್ಫ್ ಆಸ್ತಿ ಕಬಳಿಸಿದ ರಾಜ್ಯದ ಕಾಂಗ್ರೆಸ್ ನಾಯಕರ ಹೆಸರೂ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ. ಆಮೂಲಕ ಮಸೂದೆಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರದ ಸನ್ನಿವೇಶ ಎದುರಾಗಿದೆ.
ಬಿಜೆಪಿ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್ ಅಗರ್ವಾಲ್, ಕರ್ನಾಟಕದಲ್ಲಿ ಯಾರೆಲ್ಲ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ವಿವರವನ್ನು ಸದನದ ಕಲಾಪದಲ್ಲಿ ಬಹಿರಂಗ ಪಡಿಸಿದ್ದಾರೆ. ಅದರಲ್ಲೂ ಕರ್ನಾಟಕದ 13 ನಾಯಕರ ಹೆಸರು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ಸಿಗೆ ಇನ್ನಿಲ್ಲದ ಮುಜುಗರ ಉಂಟು ಮಾಡಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ವಕ್ಫ್ ಮಸೂದೆ ಸಂಬಂಧಿಸಿದ ಚರ್ಚೆಯ ವೇಳೆ, ಸಂಸದ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ವಕ್ಫ್ ಆಸ್ತಿ ಕಬಳಿಸಿದ್ದಾರೆಂದು ಹೇಳಿಕೆ ನೀಡಿದ್ದರು. ಇದರಿಂದ ಕುಪಿತರಾಗಿದ್ದ ಖರ್ಗೆ ಅದನ್ನು ಸಾಬೀತು ಪಡಿಸುವಂತೆ ತಿರುಗೇಟು ನೀಡಿದ್ದರು.
ಆದರೆ ಶುಕ್ರವಾರ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವಕ್ಫ್ ಆಸ್ತಿ ಕಬಳಿಕೆ ವಿಚಾರವನ್ನು ಸಚಿವ ರಾಧಾ ಮೋಹನದಾಸ್ ಅಗರ್ವಾಲ್ ಪ್ರಸ್ತಾಪಿಸಿದ್ದಾರೆ. ಮಾಣಿಪ್ಪಾಡಿ ವರದಿ ಹೆಸರೆತ್ತದೆ ಕರ್ನಾಟಕದಲ್ಲಿ ಯಾರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ವರದಿಯು ಜೆಪಿಸಿ ಕಮಿಟಿಯಲ್ಲಿ ಉಲ್ಲೇಖವಾಗಿದೆ. ಆ ವರದಿಯನ್ನು ಪ್ರಸ್ತಾಪಿಸುತ್ತೇನೆ. ವಕ್ಫ್ ಸಂಪತ್ತನ್ನು ಲೂಟಿ ಮಾಡಿದವರ ಹೆಸರನ್ನು ಹೇಳುವುದು ಕರ್ತವ್ಯ ಎಂದುಕೊಳ್ಳುತ್ತೇನೆ ಎಂದು ಕೆಳಗಿನ ಹೆಸರಿನ ಪಟ್ಟಿಯನ್ನು ಓದಿ ಹೇಳಿದ್ದಾರೆ.
ಖಮರುಲ್ ಇಸ್ಲಾಂ - ಮಾಜಿ ಸಚಿವ, ನರಸಿಂಗರಾವ್ ಸೂರ್ಯವಂಶಿ - ಮಾಜಿ ಸಂಸದ, ಸಿ.ಎಂ.ಇಬ್ರಾಹಿಂ - ಮಾಜಿ ಕೇಂದ್ರ ಸಚಿವ, ಕೆ.ರೆಹಮಾನ್ ಖಾನ್ - ಮಾಜಿ ಕೇಂದ್ರ ಸಚಿವ, ಅಬ್ದುಲ್ಲಾ ಸಲೀಂ - ವಕ್ಫ್ ಬೋರ್ಡ್ ಅಧಿಕಾರಿ, ಎನ್.ಎ.ಹ್ಯಾರೀಸ್ - ಹಾಲೀ ಶಾಸಕ, ಎಂ.ಎ.ಖಲೀದ್ - ಮಾಜಿ ಅಧಿಕಾರಿ, ಮಮ್ತಾಜ್ ಅಹ್ಮದ್ ಖಾನ್ - ಅಧ್ಯಕ್ಷರು, ಮೊಹಮ್ಮದ್ ಸನುಲ್ಲಾ - ಐಎಎಸ್ ಅಧಿಕಾರಿ, ಸಿಂಧೂಸ್ ಗಿರಿ - ಮಾಜಿ ಸಚಿವ, ಎಂ.ಎಸ್. ಬಾಷಾ - ಐಎಂಐಸಿಎಸ್, ಖನೀಜಾ ಫಾತಿಮಾ - ಹಾಲೀ ಶಾಸಕಿ, ಸಿ.ಕೆ.ಜಾಫರ್ ಷರೀಫ್ - ಮಾಜಿ ಕೇಂದ್ರ ಸಚಿವ ಎಂದು 12 ಪ್ರಮುಖ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ. ಆನಂತರ, ಇನ್ನೂ ಒಂದು ಪ್ರಮುಖ ಹೆಸರು ಪಟ್ಟಿಯಲ್ಲಿದೆ, ಆ ಹೆಸರನ್ನು ನಾನು ಹೇಳುವುದಿಲ್ಲ. ಅದು, ಸದನದ ಮರ್ಯಾದೆಯ ಪ್ರಶ್ನೆ, ಹಾಗಾಗಿ ಗೌರವಸೂಚಕವಾಗಿ ಆ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಆದರೆ, ಆ ಹೆಸರು ಯಾರದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ರಾಧಾ ಮೋಹನದಾಸ್ ಅಗರ್ವಾಲ್, ಮಸೂದೆ ವಿರೋಧಿಸಿ ಗುಲ್ಲೆಬ್ಬಿಸಿದ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ.
In a significant political development, twelve leaders from the Karnataka Congress party have been embroiled in controversy following their naming in the Rajya Sabha during discussions on the Waqf property seizure amendment. The allegations surfaced as the BJP intensified its attacks on Congress leader Mallikarjun Kharge and his party, accusing them of opposing crucial amendments aimed at addressing the misuse and mismanagement of Waqf properties.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 07:20 pm
Bengaluru Correspondent
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm