ಬ್ರೇಕಿಂಗ್ ನ್ಯೂಸ್
28-03-25 01:38 pm HK News Desk ದೇಶ - ವಿದೇಶ
ಹರಿಯಾಣ, ಮಾ 28: ಡಿಜಿಟಲ್ ವಂಚನೆ, ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅವರನ್ನ ಮರಳು ಮಾಡುವದರಲ್ಲಿ ವಂಚಕರು ಯಶಸ್ವಿಯಾಗುತ್ತಲೇ ಇದ್ದಾರೆ. ಇಷ್ಟು ದಿನ ನಾವು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳಿ, ಇಡಿ ಅಧಿಕಾರಿಗಳು ಎಂದು ಹೇಳಿ ವ್ಯಕ್ತಿಗಳನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ವಂಚಿಸುತ್ತಿದ್ದರು. ಆದರೆ, ಹರಿಯಾಣದ ಫರೀದಾಬಾದ್ನಲ್ಲಿ ನಿವೃತ್ತ ಪೈಲಟ್ರೊಬ್ಬರನ್ನ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಹೆಸರು ಹೇಳಿ ವಂಚಿಸಿದ್ದಾರೆ.
ನಿವೃತ್ತ ಪೈಲೆಟ್ ಶಕ್ತಿ ಸಿಂಗ್ ಲಂಬಾ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡಿದ ವ್ಯಕ್ತಿಯೊಬ್ಬ ನಾನು ಎಲಾನ್ ಮಸ್ಕ್ ಕಂಪನಿಯ ಮ್ಯಾನೇಜರ್ ಎಂದು ಚಾಟಿಂಗ್ ಮಾಡಿದ್ದಾನೆ. ಅವರು ಭಾರತಕ್ಕೆ ಬಂದಾಗ ನಿಮಗೆ ಅವರನ್ನು ಭೇಟಿ ಮಾಡಿಸುತ್ತೇನೆ, ನೀವು ಅವರ ಕಂಪನಿಯಲ್ಲಿ ಹೂಡಿಕೆ ಮಾಡಿ ಎಂದು ದುಂಬಾಲು ಬಿದ್ದಿದ್ದಾನೆ. ಇದನ್ನು ನಂಬಿದ ಶಕ್ತಿಸಿಂಗ್ ಲಂಬಾ ಅವರು ಪ್ರಾರಂಭದಲ್ಲಿ ಎರಡು ಲಕ್ಷ ರೂಪಾಯಿ ನೀಡಿದ್ದಾರೆ.
ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲಾನ್ ಮಸ್ಕ್ ತಾಯಿ ಹೆಸರನಲ್ಲಿ ಶಕ್ತಿಸಿಂಗ್ ಜೊತೆ ಚಾಟಿಂಗ್ ನಡೆದಿದೆ. ನಿಮಗೆ ಉಡುಗೊರೆಯಾಗಿ ರೋಲೆಕ್ಸ್ ವಾಚ್ ಕಳುಹಿಸುತ್ತಿದ್ದೇವೆ ಎಂದು ವಾಚ್ ಫೋಟೋ ತೋರಿಸಿ ಚಾಟಿಂಗ್ ಮಾಡಿದ್ದಾರೆ. ಶಕ್ತಿಸಿಂಗ್ ಲಂಬಾ ತಾನು ಮಸ್ಕ್ ತಾಯಿಯ ಜೊತೆಯೇ ಚಾಟ್ ಮಾಡುತ್ತಿದ್ದೇನೆ ಎಂದು ನಂಬಿದ್ದಾರೆ.
ಹೀಗೆ ಹಲವು ಜಾಲಗಳನ್ನು ಬೀಸಿ ಶಕ್ತಸಿಂಗ್ರಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ಹೂಡಿಕೆ ನೆಪದಲ್ಲಿ ದೋಚಲಾಗಿದೆ. ಶಕ್ತಿಸಿಂಗ್ ಅವರ ವಿವಿಧ ಖಾತೆಗಳಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು ಟೋಪಿ ಹಾಕಲಾಗಿದೆ. ಕೊನೆಗೆ ನಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎಂದು ಅರಿತ ನಿವೃತ್ತ ಪೈಲೆಟ್ ಶಕ್ತಿಸಿಂಗ್ ಲಂಬಾ, ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
A retired pilot in Faridabad was duped of Rs 72 lakh by fraudsters who lured him with the promise of an opportunity to meet the world's richest man, Elon Musk. Shakti Singh Lumba said he was contacted via his social media account by a person claiming to be a manager at Elon Musk's company.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am