ಬ್ರೇಕಿಂಗ್ ನ್ಯೂಸ್
18-12-20 01:54 pm Headline Karnataka News Network ದೇಶ - ವಿದೇಶ
ನವದೆಹಲಿ, ಡಿ.18 : ಬೆಂಗಳೂರಿನಿಂದ ಪಲಾಯನ ಮಾಡಿ ನಿಗೂಢ ದ್ವೀಪ ಒಂದರಲ್ಲಿ ಕೈಲಾಸ ದೇಶ ರಚನೆಯ ಘೋಷಣೆ ಮಾಡಿದ್ದ ನಿತ್ಯಾನಂದ, ಇದೀಗ ಕೈಲಾಸಕ್ಕೆ ಭೇಟಿ ನೀಡಲು ಭಕ್ತರಿಗೆ ಆಫರ್ ಮುಂದಿಟ್ಟಿದ್ದಾನೆ.
ಕೋವಿಡ್ ಹಿನ್ನೆಲೆಯಲ್ಲಿ ಕೆಲವು ತಿಂಗಳಿನಿಂದ ಆನ್‌ಲೈನ್‌ನಲ್ಲೇ ಸತ್ಸಂಗ ಮಾಡುತ್ತಿದ್ದ ನಿತ್ಯಾನಂದ ಇದೀಗ ಭಕ್ತರಿಗೆ ದೈಹಿಕವಾಗಿ ದರ್ಶನ ನೀಡುವ ಘೋಷಣೆ ಮಾಡಿದ್ದಾನೆ. ಆದರೆ, ದರ್ಶನಕ್ಕಾಗಿ ಭಕ್ತರು ಕೈಲಾಸ ದೇಶಕ್ಕೇ ಹೋಗಬೇಕು. ಅದಕ್ಕಾಗಿ ಉಚಿತ ವ್ಯವಸ್ಥೆಯನ್ನು ಮಾಡಿದ್ದು ಹೇಗೆ ಬರಬಹುದು ಎಂಬುದರ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಹಾಗೆಂದು, ಭಕ್ತರು ಕೈಲಾಸ ದೇಶಕ್ಕೆ ಹೋಗಿ ಇರುವಂತಿಲ್ಲ. ಯಾರೇ ಆದ್ರೂ 3 ದಿನಗಳಿಗೆ ಸೀಮಿತವಾಗಿ ಕೈಲಾಸ ದೇಶಕ್ಕೆ ಭೇಟಿ ನೀಡಬಹುದು. ಇದಕ್ಕಾಗಿ ಅವರು ಕೈಲಾಸ ವೆಬ್‌ಸೈಟ್ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು.
ಉಚಿತ ಪ್ರಯಾಣದ ವ್ಯವಸ್ಥೆ
ವೀಸಾ ನೀಡಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಭೇಟಿ ಬಯಸುವವರು ಸ್ವಂತ ವೆಚ್ಚದಲ್ಲಿ ಆಸ್ಪ್ರೇಲಿಯಾಕ್ಕೆ ಬರಬೇಕು. ಅಲ್ಲಿಂದ ಕೈಲಾಸ ದೇಶಕ್ಕೆ ಖಾಸಗಿ ವಿಮಾನದ ವ್ಯವಸ್ಥೆ ಇದ್ದು ಭಕ್ತರನ್ನು ಸುಮಾರು 15,000 ಕಿಮೀ ದೂರದ ಈಕ್ವೆಡಾರ್ ದೇಶಕ್ಕೆ ಸೇರಿದ ದ್ವೀಪದಲ್ಲಿನ ಕೈಲಾಸ ದೇಶಕ್ಕೆ ಕರೆದುಕೊಂಡು ಹೋಗಲಾಗುವುದು. 3 ದಿನಗಳ ಬಳಿಕ ಅದೇ ವಿಮಾನದಲ್ಲಿ ಆಸ್ಪ್ರೇಲಿಯಾಕ್ಕೆ ಮರಳಿ ಬಿಡಲಾಗುವುದು. ಈ ವಿಮಾನಯಾನ ಸಂಪೂರ್ಣ ಉಚಿತ. ಕೈಲಾಸ ದೇಶದಲ್ಲಿ ಭಕ್ತರು ಗರಿಷ್ಠ 3 ದಿನ ಇರಬಹುದು. ಈ ವೇಳೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಊಟ ಎಲ್ಲವನ್ನೂ ಕೈಲಾಸ ದೇಶವೇ ಉಚಿತವಾಗಿ ಒದಗಿಸುತ್ತದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ನೇರ ದರ್ಶನಕ್ಕೆ ಸೀಮಿತ ಅವಕಾಶ !
ತನ್ನ ದೇಶಕ್ಕೆ ಬಂದ ಭಕ್ತರಿಗೆ ಮೂರು ದಿನಗಳಲ್ಲಿ ಒಮ್ಮೆ ಮಾತ್ರ ಖಾಸಗಿ ದರ್ಶನ ನೀಡುವುದಾಗಿ ನಿತ್ಯಾನಂದ ಹೇಳಿದ್ದಾನೆ. ದರ್ಶನದ ಅವಧಿ 10 ನಿಮಿಷದಿಂದ ಗರಿಷ್ಠ ಒಂದು ಗಂಟೆಗೆ ಸೀಮಿತ. ದಿನದಲ್ಲಿ 10ರಿಂದ 20 ಭಕ್ತರಿಗೆ ಮಾತ್ರವೇ ದರ್ಶನ ಭಾಗ್ಯ ಸಿಗಲಿದೆಯಂತೆ. ಈಗಾಗಲೇ ನಿತ್ಯಾನಂದ ತನ್ನದೇ ಪ್ರತ್ಯೇಕ ಬ್ಯಾಂಕ್ ಮತ್ತು ಕರೆನ್ಸಿಯನ್ನು ಘೋಷಿಸಿದ್ದಾನೆ.
ಈಕ್ವೆಡಾರ್, ದಕ್ಷಿಣ ಅಮೆರಿಕದ ಪುಟ್ಟ ದೇಶವಾಗಿದ್ದು ಅಲ್ಲಿಯೇ ಹತ್ತಿರ ದ್ವೀಪದಲ್ಲಿ ನಿತ್ಯಾನಂದ ಕೈಲಾಸ ದೇಶ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆ ಈ ಬಗ್ಗೆ ನಿತ್ಯಾನಂದ ಘೋಷಣೆ ಮಾಡಿದ್ದು ಇದೀಗ ಪ್ರವಾಸದ ಆಫರ್ ನೀಡಿದ್ದಾನೆ.
More than a year after absconding rape accused Nithyananda founded a 'Hindu sovereign nation', the self-claimed godman has now started issuing visas to visitors for his "stateless nation".The island nation has also created an e-mail ID through which visitors can apply for the visa.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am