ಬ್ರೇಕಿಂಗ್ ನ್ಯೂಸ್
13-03-25 03:49 pm HK News Desk ದೇಶ - ವಿದೇಶ
ಕೊಟ್ಟಾಯಂ, ಮಾ.13 : ಕೇರಳದ ಕೊಟ್ಟಾಯಂ ಜಿಲ್ಲೆಯ ಮೀನಚ್ಚಿಲ್ ತಾಲೂಕು ಒಂದರಲ್ಲೇ 400ಕ್ಕೂ ಹೆಚ್ಚು ಕ್ರಿಸ್ತಿಯನ್ ಯುವತಿಯರು ಲವ್ ಜಿಹಾದ್ ಬಲೆಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿ ಅತಿ ಹೆಚ್ಚು ಲವ್ ಜಿಹಾದ್ ಪ್ರಕರಣ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆದಿರುವಾಗಲೇ ಕ್ರಿಸ್ತಿಯನ್ ಸಮುದಾಯದ ನಾಯಕರೂ ಆಗಿರುವ ಪಿ.ಸಿ ಜಾರ್ಜ್ ಇಂತಹ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕೇರಳ ಕೆಥೋಲಿಕ್ ಬಿಷಪ್ಸ್ ಕೌನ್ಸಿಲ್ ಮತ್ತು ಬಿಷಪ್ ಜೋಸೆಫ್ ಕಲ್ಲಾರಂಗಟ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ವಿರುದ್ಧ ಜನಜಾಗೃತಿ ಕುರಿತ ಕಾರ್ಯಾಗಾರದಲ್ಲಿ ಪಿಸಿ ಜಾರ್ಜ್ ಈ ಮಾತನ್ನಾಡಿದ್ದು ಕ್ರಿಸ್ತಿಯನ್ ಸಮುದಾಯ ಈ ಬಗ್ಗೆ ಎಚ್ಚತ್ತುಕೊಳ್ಳುವಂತೆ ಕರೆ ನೀಡಿದ್ದಾರೆ. ಲವ್ ಜಿಹಾದ್ ಬಲೆಗೆ ಬೀಳುವುದನ್ನು ತಪ್ಪಿಸಲು ಯುವತಿಯರನ್ನು 24 ವರ್ಷದ ಒಳಗಡೆಯೇ ಮದುವೆಯಾಗಿಸುವಂತೆ ಜಾರ್ಜ್ ಸಲಹೆ ನೀಡಿದ್ದಾರೆ.
ಮೀನಚ್ಚಿಲ್ ತಾಲೂಕು ಒಂದರಲ್ಲೇ 400ಕ್ಕೂ ಹೆಚ್ಚು ಕ್ರಿಸ್ತಿಯನ್ ಯುವತಿಯರು ನಾಪತ್ತೆಯಾಗಿದ್ದು, ಈ ಪೈಕಿ 41 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಉಳಿದ ಪ್ರಕರಣ ಪತ್ತೆಯಾಗದೇ ಉಳಿದಿವೆ. ಇತ್ತೀಚೆಗೆ ಮಾರ್ಚ್ 8ರಂದು 25 ವರ್ಷದ ಯುವತಿ ನಾಪತ್ತೆಯಾಗಿದ್ದು, ರಾತ್ರಿ 9.30ಕ್ಕೆ ಮನೆಯಿಂದ ತೆರಳಿದವಳು ಎಲ್ಲಿ ಹೋಗಿದ್ದಾಳೆಂದು ಗೊತ್ತಾಗಿಲ್ಲ. ಹೀಗಾಗಿ 22-23 ವರ್ಷದಲ್ಲೇ ಮದುವೆ ಮಾಡಿದರೆ ಈ ರೀತಿಯ ಸ್ಥಿತಿ ಬರಲಾರದು ಎಂದು ಜಾರ್ಜ್ ಹೇಳಿದ್ದಾರೆ. ಯುವತಿಯರು ಕಲಿತು ಉದ್ಯೋಗ ಪಡೆಯುವಾಗ 28-29 ವರ್ಷಕ್ಕೆ ತಲುಪುತ್ತಾರೆ. ಆದರೆ ಅಷ್ಚರಲ್ಲಿ ಅವರನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಪ್ರಯತ್ನಗಳು ನಡೆಯುತ್ತವೆ ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಕ್ರಿಸ್ತಿಯನ್ ಸಮುದಾಯವನ್ನು ಗುರಿಯಾಗಿಸಿ ಲವ್ ಜಿಹಾದ್ ಕೃತ್ಯ ಹಲವು ವರ್ಷಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಚರ್ಚ್ ಆಡಳಿತ ಕೂಡ ಧ್ವನಿ ಎತ್ತಿದೆ. ಆದರೆ ಇದಕ್ಕೆ ನಿಯಂತ್ರಣ ವಿಧಿಸಲು ಸರಕಾರದಿಂದ ಪ್ರಯತ್ನಗಳಾಗಿಲ್ಲ. ಮೀನಚ್ಚಿಲ್ ತಾಲೂಕಿನಲ್ಲಿ ಅತಿ ಹೆಚ್ಚು ಕ್ರಿಸ್ತಿಯನ್ನರಿದ್ದು, ಅಲ್ಲಿಯೇ ಅತಿ ಹೆಚ್ಚು ಯುವತಿಯರ ನಾಪತ್ತೆ ಆಗುತ್ತಿರುವುದು ಕಳವಳ ಮೂಡಿಸಿದೆ.
ಕೇಂದ್ರಕ್ಕೂ ಪತ್ರ ಬರೆದಿದ್ದ ಕ್ರಿಸ್ತಿಯನ್ನರು
2019ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಲವ್ ಜಿಹಾದ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಪತ್ರದಲ್ಲಿ 2005 – 2012ರ ನಡುವೆ ಕೇರಳದಲ್ಲಿ ನಾಲ್ಕು ಸಾವಿರ ಕ್ರಿಸ್ತಿಯನ್ ಯುವತಿಯರು ಪ್ರೀತಿಯ ಬಲೆಗೆ ಬಿದ್ದು ಮತಾಂತರಗೊಂಡಿದ್ದು ಈ ಬಗ್ಗೆ ಎನ್ಐಎ ತನಿಖೆಯಾಗಬೇಕೆಂದು ಆಗ್ರಹ ಮಾಡಿದ್ದರು. ಕೋಜಿಕ್ಕೋಡ್ ನಲ್ಲಿ ಕ್ರಿಸ್ತಿಯನ್ ಯುವತಿಯರನ್ನು ಬ್ಲಾಕ್ಮೇಲ್ ಮಾಡಿ, ರೇಪ್ ಮಾಡಿದ್ದು, ಆಮೂಲಕ ಮತಾಂತರಿಸಿದ ಪ್ರಕರಣವನ್ನು ಉಲ್ಲೇಖ ಮಾಡಿದ್ದರು. ತೀವ್ರವಾದಿ ಗುಂಪುಗಳಿಗೆ ಕ್ರಿಸ್ತಿಯನ್ ಯುವತಿಯರು ಸುಲಭ ತುತ್ತಾಗುತ್ತಿದ್ದಾರೆ ಎಂದು ಪತ್ರ ಬರೆದಿದ್ದರೂ ಕೇಂದ್ರ ಸರಕಾರದಿಂದ ಗಂಭೀರ ಕ್ರಮಗಳಾಗಿಲ್ಲ.
2020ರಲ್ಲಿ ಸೀರೋ ಮಲಬಾರ್ ಚರ್ಚ್ ಕಡೆಯಿಂದ ಪ್ರಕಟಣೆ ಹೊರಡಿಸಿ ಲವ್ ಜಿಹಾದ್ ಬಗ್ಗೆ ಕೇರಳದ ಎಡರಂಗ ಸರಕಾರ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಆತಂಕ ಹೇಳಿಕೊಂಡಿತ್ತು. ಫಾದರ್ ವರ್ಗೀಸ್ ವಲ್ಲಿಕಾಟ್ ಪ್ರತಿಕ್ರಿಯೆ ನೀಡಿ, ಲವ್ ಜಿಹಾದ್ ನಿಜವಾಗಿದ್ದು, ಯುವತಿಯರನ್ನು ಮತಾಂತರಿಸಿ ಸಿರಿಯಾ, ಅಫ್ಘಾನಿಸ್ತಾನಕ್ಕೆ ಕಳುಹಿಸಿ ಲೈಂಗಿಕ ಗುಲಾಮಗಿರಿಗೆ ತಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
BJP leader P.C. George made a controversial statement at a conference in Pala, Kottayam district, Kerala. Addressing the Christian community, he urged them to marry off their daughters before the age of 24 to prevent them from becoming victims of “love jihad.” He claimed that over 400 Christian girls in the Meenachil taluk alone had fallen prey to this menace.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm