ಬ್ರೇಕಿಂಗ್ ನ್ಯೂಸ್
28-02-25 07:46 pm HK News Desk ದೇಶ - ವಿದೇಶ
ಇಸ್ಲಾಮಾಬಾದ್, ಫೆ 28 : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಮದರಸಾ ಒಂದರಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ವೇಳೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಧರ್ಮಗುರು ಸೇರಿ ಐವರು ದಾರುಣ ಸಾವನ್ನಪ್ಪಿದ್ದಾರೆ. ಅಕ್ಕೋರಾ ಖಟ್ಟಕ್ ಜಿಲ್ಲೆಯ ದಾರುಲ್ ಉಲೂಮ್ ಹಕ್ಕಾನಿಯಾ ಮದರಸಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ.
ಶುಕ್ರವಾರದ ಪ್ರಾರ್ಥನೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದ ಸಮಯದಲ್ಲೇ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.
ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಈ ದಾಳಿಯ ಗುರಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಬ್ದುಲ್ ರಶೀದ್, "ಪ್ರಕರಣದ ತನಿಖೆ ನಡೆಯುತ್ತಿದ್ದು, ನೌಶೇರಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಆತ್ಮಾಹುತಿ ಬಾಂಬ್ ಸ್ಫೋಟ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.." ಎಂದು ಇನ್ಸ್‌ಪೆಕ್ಟರ್ ಜನರಲ್ ಜುಲ್ಫಿಕಾರ್ ಹಮೀದ್ ಸಮಾ ಟಿವಿಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ . "ಇಂತಹ ಹೇಡಿತನದ ಮತ್ತು ಉಗ್ರ ಕೃತ್ಯಗಳು ಭಯೋತ್ಪಾದನೆಯ ವಿರುದ್ಧದ ನಮ್ಮ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಿಲ್ಲ. ದೇಶದಿಂದ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವು ದೃಢಸಂಕಲ್ಪ ಹೊಂದಿದ್ದೇವೆ.." ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸದ್ಯ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ನಡೆಯುತ್ತಿದ್ದು, ಈ ಸರಣಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಪಾಕಿಸ್ತಾನ ಸರಕಾರ ಭರವಸೆ ನೀಡಿದೆ.
Terrorist attacks in Pakistan are a normal, now, a massive explosion has taken place at Darul Uloom Haqqania in Akora Khattak town in Khyber Pakhtunkhwa. As per reports, the blast rocked the Darul Uloom Haqqania after Friday prayers.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm