ಬ್ರೇಕಿಂಗ್ ನ್ಯೂಸ್
19-02-25 06:41 pm HK News Desk ದೇಶ - ವಿದೇಶ
ಹೈದರಾಬಾದ್, ಫೆ.19 : ಹೈದರಾಬಾದ್ ನಗರದ ಕೊಂಡಾಪುರದ ಕಿಮ್ಸ್ ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದು ಯುವಕನ ಶ್ವಾಸಕೋಶದಲ್ಲಿ ಸಿಲುಕಿದ್ದ 'ಪ್ಲಾಸ್ಟಿಕ್ ಪೆನ್ ಕ್ಯಾಪ್ ' ಒಂದನ್ನು 21 ವರ್ಷಗಳ ಬಳಿಕ ಹೊರಗೆ ತೆಗೆದಿದ್ದಾರೆ.
ಒಂದು ತಿಂಗಳಿನಿಂದ ತೂಕ ಇಳಿಕೆ ಹಾಗೂ ದೀರ್ಘ ಕೆಮ್ಮುವಿನ ಕಾರಣದಿಂದ ಬಳಲುತ್ತಿದ್ದ ಕರೀಂ ನಗರದ 26 ವರ್ಷದ ಯುವಕನ ಆರೋಗ್ಯ ದಿನದಿಂದ ದಿನಕ್ಕೆ ಹದೆಗೆಡುತ್ತ ಬಂದಿತ್ತು. ವೈದ್ಯರು CT ಸ್ಕ್ಯಾನ್ ಮಾಡಿಸಿದಾಗ ಎಡ ಭಾಗದ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿದೆ ಎಂದು ಮಾಧಾಪುರದ KIMS ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ಮತ್ತೆ ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪೆನ್ನಿನ ಕ್ಯಾಪ್ ಸಿಕ್ಕಿಕೊಂಡಿರುವುದು ಕಂಡುಬಂದಿತ್ತು.
ಸ್ಕ್ಯಾನ್ ವೇಳೆ ಶ್ವಾಸಕೋಶದ ಒಂದು ಭಾಗ ಊದಿರುವುದು ಕಂಡುಬಂದಿದ್ದರಿಂದ ಅದರಿಂದಲೇ ಕೆಮ್ಮು ಉಂಟಾಗಿರಬಹುದು ಎಂದು ವೈದ್ಯರು ನಂಬಿದ್ದರು. ಮತ್ತಷ್ಟು ಪರೀಕ್ಷೆ ನಡೆಸಿದಾಗ ಶ್ವಾಸಕೋಶದಲ್ಲಿ ಪೆನ್ನಿನ ಕ್ಯಾಪ್ ಇರುವುದು ಪತ್ತೆಯಾಗಿದೆ. ಆಬಳಿಕ ಯುವಕನ ಕುಟುಂಬಸ್ಥರನ್ನು ಕರೆಸಿ, ಏನಾದರೂ ನುಂಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದರು. ಆಗ ಯುವಕನ ಅಣ್ಣ ಈತ ಐದು ವರ್ಷದವನಿದ್ದಾಗ ಆಕಸ್ಮಿಕವಾಗಿ ಪೆನ್ನಿನ ಕ್ಯಾಪ್ ನುಂಗಿದ್ದ ಎಂಬುದನ್ನು ನೆನಪು ಮಾಡಿಕೊಂಡರು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಶ್ವಾಸಕೋಶ ತಜ್ಞ ಡಾ. ಶುಭಕರ್ ನಾದೆಲ್ಲ ತಿಳಿಸಿದ್ದಾರೆ.
ಮೂರು ಗಂಟೆಗಳ ಶಸ್ತ್ರಚಿಕಿತ್ಸೆ
ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಪೆನ್ ಕ್ಯಾಪ್ ಹೊರಗೆ ತೆಗೆಯಲಾಗಿದೆ. ಬ್ರಾಂಕೋಸ್ಕೋಪಿ ಮೂಲಕ ಪೆನ್ನಿನ ಸುತ್ತ ರಚನೆಯಾಗಿದ್ದ ಅಂಗವನ್ನು ತೆಗೆದು ಹಾಕಲಾಯಿತು. ನಂತರ ಪೆನ್ ಕ್ಯಾಪ್ ಅನ್ನು ಯಶಸ್ವಿಯಾಗಿ ಹೊರ ತೆಗೆದಿದ್ದೇವೆ. ಸುಮಾರು 21 ವರ್ಷಗಳಿಂದ ಪೆನ್ನಿನ ಕ್ಯಾಪ್ ಒಳಗಡೆ ಇದ್ದುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿದೆ. ಚಿಕಿತ್ಸೆ ಬಳಿಕ ರೋಗಿ ಚೇತರಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Doctors at KIMS Hospital, Kondapur in Hyderabad successfully removed a plastic pen cap that had remained lodged in a man’s lungs for 21 years. The 26-year-old patient from Karimnagar had unknowingly carried the 1 cm foreign object since the age of five, after accidentally swallowing it. Doctors got to know this after he sought medical attention for a persistent cough and unexplained weight loss that had worsened over the past month.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am