ಬ್ರೇಕಿಂಗ್ ನ್ಯೂಸ್
08-02-25 12:14 pm HK News Desk ದೇಶ - ವಿದೇಶ
ನವದೆಹಲಿ, ಫೆ.8: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು 70 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವ ಲಕ್ಷಣ ಕಂಡುಬಂದಿದೆ. ಬಿಜೆಪಿ 45 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದರೆ, ಆಪ್ ಪಕ್ಷವು 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಮೂಲಕ ಬಿಜೆಪಿ 27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಹಿಡಿಯುವತ್ತ ಹೊರಟಿದೆ.
ಸತತ ಎರಡು ಬಾರಿ ದೆಹಲಿ ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷ ಈ ಬಾರಿ ಸೋಲುತ್ತದೆ ಎಂದೇ ಬಹುತೇಕ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಜನ ಮತ ನೀಡಲಿದ್ದಾರೆ, 40-45 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಎಂಟಕ್ಕೂ ಅಧಿಕ ಸಮೀಕ್ಷೆಗಳು ಹೇಳಿದ್ದವು. 11 ಎಕ್ಸಿಟ್ ಪೋಲ್‌ಗಳಲ್ಲಿ 8 ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಕಾಂಗ್ರೆಸ್ ಒಂದು ಸ್ಥಾನವನ್ನೂ ಗಳಿಸಲ್ಲ ಎಂದೂ ಹೇಳಿವೆ.
ಸದ್ಯಕ್ಕೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಹಾಲಿ ಸಿಎಂ ಅತಿಷಿ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ನಿಕಟ ಸ್ಪರ್ಧೆ ಒಡ್ಡಿದ್ದಾರೆ. ಆರಂಭಿಕ ಸುತ್ತಿನಲ್ಲಿ ಕೇಜ್ರಿವಾಲ್ ಮತ್ತು ಅತಿಷಿ ಹಿನ್ನಡೆ ಅನುಭವಿಸಿದ್ದಾರೆ. ಡಿಸಿಎಂ ಮನೀಶ್ ಸಿಸೋಡಿಯಾ, ಪ್ರಮುಖ ನಾಯಕರಾದ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್ ಮುನ್ನಡೆ ಗಳಿಸಿದ್ದಾರೆ. ಎರಡು ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದರೂ, ರಾಜಧಾನಿ ಜನರು ಬಿಜೆಪಿಗೆ ದೆಹಲಿಯಲ್ಲಿ ಮತ ನೀಡಿರಲಿಲ್ಲ. ಈ ಬಾರಿ ಪೊರಕೆ ಹಿಡಿದ ಆಮ್ ಆದ್ಮಿಯನ್ನು ಲಿಕ್ಕರ್ ಹಗರಣದ ಧೂಳು ಧೂಳೀಪಟ ಮಾಡಿದೆ. ಕಾಂಗ್ರೆಸ್ ಛಾರ್ಮ್ ನೇಪಥ್ಯಕ್ಕೆ ಸರಿದಿದ್ದರಿಂದ ಬಿಜೆಪಿ ಮತ್ತೆ ಮೇಲೆದ್ದು ಕುಳಿತಿದೆ.

ಫಲಿತಾಂಶದ ಬಗ್ಗೆ ಹಲವರು ನಾನಾ ರೀತಿಯ ಟೀಕೆ ಮಾಡಿದ್ದಾರೆ. ಎಐಎಂಐಎಂ ಪಕ್ಷದ ಒವೈಸಿ, ಇಂಡಿಯಾ ಒಕ್ಕೂಟ ಜೊತೆಗೂಡಿ ಸ್ಪರ್ಧೆ ಮಾಡದಿರುವುದಕ್ಕೇ ಸೋಲಾಗಿದೆ ಎಂದು ಹೇಳಿದ್ದಾರೆ. ಅರವಿಂದ ಕೇಜ್ರಿವಾಲ್ ಜೊತೆಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿದ್ದ ಅಣ್ಣಾ ಹಜಾರೆ, ದೆಹಲಿ ಲಿಕ್ಕರ್ ಹಗರಣದಿಂದಾಗಿ ಕೇಜ್ರಿವಾಲ್ ಇಮೇಜ್ ಗೆ ಧಕ್ಕೆಯಾಗಿದೆ. ರಾಜಕೀಯ ಕ್ಷೇತ್ರಕ್ಕೆ ಹೋಗುವುದಾದರೆ, ಸ್ವಚ್ಛ ವ್ಯಕ್ತಿತ್ವ ಇರಬೇಕು ಎಂದು ಹೇಳಿದ್ದೆ. ಅದನ್ನು ಅರವಿಂದ ಕೇಜ್ರಿವಾಲ್ ಉಳಿಸಿಕೊಂಡಿಲ್ಲ ಎಂದಿದ್ದಾರೆ.
The BJP is on its way to make a grand Delhi-waapsi, show the current official trends by the Election Commission of India. As per the latest trends, the BJP is leading on 45 seats. On the other hand, the Aam Aadmi Party is leading on 25 seats, way off mark than the magic figure of 36.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm