ಬ್ರೇಕಿಂಗ್ ನ್ಯೂಸ್
14-01-25 07:18 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.14: ಮಹಾಕುಂಭ ಮೇಳಕ್ಕೆ ಗೂಗಲ್ ಸಂಸ್ಥೆಯು ಗುಲಾಬಿ ದಳಗಳಿಂದ ಪುಷ್ಪ ವೃಷ್ಟಿ ಮಾಡಿದೆ. ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ತಕ್ಷಣ ಮೊಬೈಲ್ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತವೆ.
ಕುಂಭಮೇಳ ಭಾರತದ ಆಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ. 45 ದಿನಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಸಂಸ್ಥೆಯು ಮಹಾ ಕುಂಭಮೇಳಕ್ಕೆ ಆದ್ಯತೆ ನೀಡಿದ್ದು ಹೂ ಮಳೆ ಸುರಿಸಲು ತೊಡಗಿದೆ. ನ.14ರ ಮಕರ ಸಂಕ್ರಾಂತಿಯ ದಿನದಂದು ಗೂಗಲ್ ಕುಂಭಮೇಳದ ಬಗ್ಗೆ ಸರ್ಚ್ ಮಾಡುವ ಗ್ರಾಹಕರಿಗೆ ಹೂಮಳೆ ಸುರಿಸಿದೆ.
ಹೂವು ಸುರಿಯುವಾಗ ಸ್ಕ್ರೀನ್ ಕೆಳಗೆ ಕಾಣುವ ಮೂರು ಬಟನ್ ಪೈಕಿ ಮಧ್ಯದಲ್ಲಿರುವ ಹೂವಿನ ಬಟನ್ ಕ್ಲಿಕ್ ಮಾಡಿದರೆ, ಹೆಚ್ಚು ಹೆಚ್ಚು ಹೂವುಗಳು ಉದುರುತ್ತವೆ. ಹೀಗೆ ನೀವು ಹೆಚ್ಚು ಕ್ಲಿಕ್ ಮಾಡಿದರೆ ಹೆಚ್ಚು ಹೂವುಗಳು ಬೀಳುತ್ತವೆ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಕೆಳಗಿನ ಬಲಭಾಗದ ಮೂರನೇ ಬಟನ್ ಕ್ಲಿಕ್ ಮಾಡಿ ಹಂಚಿಕೊಳ್ಳಬಹುದು. ಗೂಗಲ್ ತಂದಿರುವ ಈ ವಿಶೇಷ ಗ್ರಾಫಿಕ್ಸ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಹರ ಹರ ಮಹಾದೇವ, ಜೈ ಶ್ರೀರಾಮ್ ಘೋಷಣೆಗಳನ್ನು ಹಾಕುತ್ತಿದ್ದಾರೆ. 12 ಕಿಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟಗಳಲ್ಲಿ ಸಂತರು, ಯಾತ್ರಿಕರು, ಅಘೋರಿಗಳು ಮತ್ತು ಭಕ್ತರು ತುಂಬಿ ತುಳುಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಮಂಗಳವಾರ ಬೆಳಗ್ಗೆ 8.30ಕ್ಕೆ ಶಾಹಿ ಸ್ನಾನ ಆರಂಭವಾಗಿದೆ. ಸೋಮವಾರ ಪುಷ್ಯ ಹುಣ್ಣಿಮೆಯಂದು ನಿರ್ವಾಣಿ ಅಖಾಡದ ನಾಗಾ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳ ಆರಂಭಿಸಿದ್ದಾರೆ. ಲೋಕದ ಪರಿವೇ ಇಲ್ಲದಂತೆ ದೇವರ ಧ್ಯಾನದಲ್ಲೇ ತಲ್ಲೀನವಾಗಿರುವ ನಾಗಾ ಸಾಧುಗಳು, ಅಘೋರಿಗಳ ಪಾಲಿಗೆ ಕುಂಭ ಮೇಳ ಮಹೋನ್ನತ ಉತ್ಸವ ಎನ್ನುವಂತಾಗಿದೆ.
Google pays homage to Maha Kumbh Mela 2025—the largest religious gathering in the world—through a unique, interactive feature available on its search platform for Indian users. This captivating digital tribute highlights the cultural and spiritual significance of the event that attracts millions of devotees from across the globe.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm