ಬ್ರೇಕಿಂಗ್ ನ್ಯೂಸ್
13-01-25 10:49 pm HK News Desk ದೇಶ - ವಿದೇಶ
ನವದೆಹಲಿ, ಜ.13: ನೈಜ ಭಾರತ ದರ್ಶನವಾಗಬೇಕಂದ್ರೆ, ಕುಂಭ ಮೇಳಕ್ಕೆ ಹೋಗಬೇಕಂತೆ. ಇದು ಪ್ರವಾಸಿಗರ ಮಾತು. ಯಾಕಂದ್ರೆ, ಅದು ಇಡೀ ಭಾರತ ದೇಶದ ಉದ್ದಗಲದ ಜನರು ಪಾಲ್ಗೊಳ್ಳುವ ಅಪರೂಪದ ಉತ್ಸವ. ಇಡೀ ಜಗತ್ತಿನ ಅತಿ ದೊಡ್ಡ ಉತ್ಸವ ಎಂದೇ ಬಣ್ಣಿತವಾಗಿರುವ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನ ಭೂತೋ ಎನ್ನುವಂತೆ ಮಹಾ ಕುಂಭ ಮೇಳ ಆಯೋಜನೆಗೊಂಡಿದೆ. ಭರತ ದೇಶದ ವೇದಾಂತ, ಆಧ್ಯಾತ್ಮಿಕ, ಪೌರಾಣಿಕ ಪರಂಪರೆಗೆ ಪ್ರತೀಕ ಎನ್ನುವಂತೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ 144 ವರ್ಷಗಳ ಬಳಿಕ ಭಕ್ತಿಭಾವದ ಮಹಾಕುಂಭ ಮೇಳ ಮಕರ ಸಂಕ್ರಮಣದ ಮುನ್ನಾ ದಿನದ ಪೌಷ ಪೂರ್ಣಮಿಯಂದು ಶುರುವಾಗಿದೆ.
ಮೊದಲ ದಿನವೇ ಒಂದೂವರೆ ಕೋಟಿ ಜನರು ಪವಿತ್ರ ಗಂಗಾ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಇತಿಹಾಸದಲ್ಲಿ ಹುದುಗಿ ಹೋಗಿರುವ ಸರಸ್ವತಿ ನದಿಗಳು ಸಂಗಮಗೊಳ್ಳುವ ತಾಣವೇ ಪ್ರಯಾಗರಾಜ್. ಇಲ್ಲಿನ ಕುಂಭಮೇಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸನಾತನ ಧರ್ಮೀಯರು ಅನಾದಿ ಕಾಲದಿಂದಲೂ ಪವಿತ್ರ ಗಂಗಾ ನದಿಯ ತಟದಲ್ಲಿ ಕುಂಭ ಮೇಳ ನಡೆಸಿಕೊಂಡು ಬಂದಿದ್ದಾರೆ. ಅರ್ಧ ಕುಂಭ ಮೇಳ, ಪೂರ್ಣ ಕುಂಭ ಮೇಳ ಹಾಗೂ ಮಹಾ ಕುಂಭ ಮೇಳವೆಂದು ನಿರ್ದಿಷ್ಟವಾಗಿ ಇವುಗಳನ್ನು ವರ್ಗೀಕರಿಸಲಾಗಿದೆ. ಪ್ರತಿ ಆರು ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ, 12 ವರ್ಷಕ್ಕೊಮ್ಮೆ ಪೂರ್ಣ ಕುಂಭ ಮೇಳ ಹಾಗೂ 12 ಪೂರ್ಣ ಕುಂಭ ಮೇಳಗಳು ನಡೆದ ಬಳಿಕ ಬರುವುದೇ ಮಹಾ ಕುಂಭ ಮೇಳ. ಈ ಬಾರಿ 144 ವರ್ಷಗಳ ಬಳಿಕ ಮಹಾ ಕುಂಭ ಮೇಳದ ಸುಯೋಗ ಪ್ರಾಪ್ತವಾಗಿದೆ.
ಸನಾತನ ಗರ್ವ, ಮಹಾಕುಂಭ ಪರ್ವ ಎನ್ನುವುದು ಈ ಬಾರಿಯ ಕುಂಭ ಮೇಳದ ಘೋಷವಾಕ್ಯ. ಪವಿತ್ರ ಗಂಗಾ ಸ್ನಾನವೇ ಸಕಲ ಪಾಪಗಳಿಗೆ ಪರಿಹಾರ, ಮೋಕ್ಷಕ್ಕೆ ಸಾಧನ ಎಂದು ನಂಬಿ ಪ್ರಯಾಗರಾಜ್ ನಲ್ಲಿ ಸೋಮವಾರದಿಂದ ಫೆಬ್ರವರಿ 26ರ ವರೆಗೆ 45 ದಿನಗಳ ಮಹಾಕುಂಭ ಮೇಳ ಮೇಳೈಸಲಿದೆ. ಅಚ್ಚರಿಯಂದ್ರೆ, 45 ದಿನಗಳ ಉತ್ಸವದಲ್ಲಿ ಭಾರತ ದೇಶದ ಉದ್ದಗಲ ಮತ್ತು ವಿದೇಶಗಳಿಂದ ಸುಮಾರು 40 ಕೋಟಿ ಜನರು ಪಾಲ್ಗೊಳ್ಳಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಮೊದಲ ದಿನವೇ ಒಂದೂವರೆ ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ನಾಗಾಸಾಧುಗಳು, ಅಘೋರಿಗಳ ದರ್ಶನ
ಮೊದಲ ದಿನವೇ ಲಕ್ಷಾಂತರ ಸಂಖ್ಯೆಯಲ್ಲಿ ನಾಗಾ ಸಾಧುಗಳು, ಅಘೋರಿಗಳು ಗಂಗಾ ಸ್ನಾನಕ್ಕೆ ಮುಗಿಬಿದ್ದಿದ್ದಾರೆ. ಪ್ರಯಾಗರಾಜ್ ವರೆಗೂ ನಡೆದುಕೊಂಡೇ ಬರುವ ಈ ಸಾಧುಗಳು ಇಷ್ಟು ದಿನ ಎಲ್ಲಿದ್ದರೋ ಎನ್ನುವಂತೆ ದಿಢೀರ್ ಆಗಿ ಪ್ರತ್ಯಕ್ಷಗೊಂಡಿದ್ದಾರೆ. ಗಂಗಾ ನದಿಯ ದಂಡೆಯಲ್ಲಿ, ಪ್ರಯಾಗರಾಜ್ ಪಟ್ಟಣದ ಗಲ್ಲಿಗಳಲ್ಲಿ ಎಲ್ಲಿ ನೋಡಿದರೂ, ಅಘೋರಿಗಳದ್ದೇ ದರ್ಶನವಾಗುತ್ತಿದೆ. ಭಾರತದ ಒಟ್ಟು ಜನಸಂಖ್ಯೆ 146 ಕೋಟಿಯಾದರೆ, ಕುಂಭ ಮೇಳದಲ್ಲಿ 40 ಕೋಟಿ ಜನರು ಸೇರುತ್ತಾರಂತೆ. ಅಂದರೆ, ಅಮೆರಿಕ(35 ಕೋಟಿ) ಹಾಗೂ ಪಾಕಿಸ್ತಾನ(35 ಕೋಟಿ) ಜನಸಂಖ್ಯೆ ಗಿಂತಲೂ ಹೆಚ್ಚು. ಇದೇ ಕಾರಣಕ್ಕೆ, ಕುಂಭ ಮೇಳ ಎಂದರೆ ಮಿನಿ ಭಾರತದ ದರ್ಶನ ಎನ್ನುವ ಅರ್ಥ ಬಂದಿದೆ.
ಮಹಾ ಕುಂಭ ಮೇಳವನ್ನು ಸಾಂಪ್ರದಾಯಿಕವಾಗಿ 13 ಅಖಾಡಾಗಳ ಮುಖ್ಯಸ್ಥರು ಆಯೋಜಿಸುತ್ತಾರೆ. ಅಖಾಡಾ ಶಬ್ದ ಸಂಸ್ಕೃತ ಪದ ಅಖಂಡದಿಂದ ಬಂದಿದ್ದು, ಬೇರ್ಪಡಿಸಲಾಗದ ಎನ್ನುವ ಅರ್ಥ ಕೊಡುತ್ತದೆ. ಬೇರ್ಪಡಿಸಲಾಗದ ಭಕ್ತಿ ಭಾವದ ಸೊಬಗಿನೊಂದಿಗೆ ಪ್ರತಿ ಅಖಾಡಾದ ಅನುಯಾಯಿಗಳು ಇಲ್ಲಿ ಆಧ್ಯಾತ್ಮಿಕ ನೆಲೆ ಎನ್ನುವಂತೆ ಒಂದೆಡೆ ಸೇರುತ್ತಾರೆ. ಸಂಸ್ಕೃತಿ ಪರಿಪಾಲಕರಂತೆ ಧಾರ್ಮಿಕ ಕ್ರಿಯೆಗಳನ್ನೂ ಪಾಲಿಸುತ್ತಾರೆ. ಈ ಬಾರಿಯ ಕುಂಭ ಮೇಳವನ್ನು ಪ್ರತಿಷ್ಠೆ ಎನ್ನುವ ರೀತಿ ಉತ್ತರ ಪ್ರದೇಶ ಸರಕಾರ ತಮ್ಮದೇ ಉತ್ಸವ ಎನ್ನುವಂತೆ ಆಯೋಜಿಸಿದೆ. ಮಾಜಿ ಮುಖ್ಯಮಂತ್ರಿ, ಸಾಧ್ವಿ ಉಮಾ ಭಾರತಿ, ನಾನು 1977ರಿಂದ ಪ್ರತಿ ಬಾರಿಯೂ ಕುಂಭ ಮೇಳಕ್ಕೆ ಬರುತ್ತಿದ್ದೇನೆ, ಈ ಬಾರಿಯಷ್ಟು ಅದ್ಭುತ ವ್ಯವಸ್ಥೆಯನ್ನು ಕಂಡಿದ್ದಿಲ್ಲ. ಸೆಕ್ಯುರಿಟಿ, ಸೌಲಭ್ಯಗಳು ಎಲ್ಲವೂ ಅಚ್ಚುಕಟ್ಟಾಗಿದೆ. ಇದಕ್ಕಾಗಿ ಯೋಗಿ ಜೀ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಕುಂಭ ಮೇಳ ನಡೆಯುವ ಗಂಗಾ ನದಿಯ ತಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಪ್ರವಾಸಿಗರು ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ನೆರೆದಿದ್ದು, ಭಾರತ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಬರುವ ಸಾಧು ಸಂತರ ಆಧ್ಯಾತ್ಮಿಕ ಶಕ್ತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ನಡುವೆ, ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ತಾನು ಕುಂಭ ಮೇಳಕ್ಕೆ ಹೋಗಿ ಮೂರು ದಿನಗಳನ್ನು ಕಳೆಯುತ್ತೇನೆ ಎಂದಿದ್ದಾರೆ.
ಕೆಎಂಎಫ್ ನಿಂದ ಒಂದು ಕೋಟಿ ಟೀ ವಿತರಣೆ
ಕರ್ನಾಟಕದ ಕೆಎಂಎಫ್ ವತಿಯಿಂದ ಪ್ರಯಾಗರಾಜ್ ನಲ್ಲಿ ಒಂದು ಕೋಟಿ ಚಹಾ ವಿತರಣೆಗೆ ಸಿದ್ಧತೆ ನಡೆದಿದೆ. ಇದಕ್ಕಾಗಿ 10 ಸ್ಟಾಲ್ ಗಳನ್ನು ತೆರೆಯಲಾಗಿದ್ದು, ಟೀ ಕೆಫೆ ಜೊತೆಗೆ ಪಾಲುದಾರಿಕೆ ಪಡೆದುಕೊಂಡಿದೆ. ಒಂದೇ ಕಡೆ ಒಂದು ಕೋಟಿಗೂ ಹೆಚ್ಚು ಟೀ ಕಪ್ ವಿತರಣೆ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡುವ ಗುರಿಯನ್ನೂ ಕೆಎಂಎಫ್ ಹೊಂದಿದೆ. ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕುಂಭ ಮೇಳ, ಮಕರ ಸಂಕ್ರಾಂತಿ, ಪೊಂಗಲ್, ಉತ್ತರಾಯಣ ಹೀಗೆ ದೇಶದ ಉದ್ದಗಲಕ್ಕೂ ಹಬ್ಬದ ವಾತಾವರಣ ಮೇಳೈಸಿದೆ. ಪ್ರಯಾಗರಾಜ್ ನಲ್ಲಿ ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡಲಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ಲೋಹ್ರಿ ಹಬ್ಬದ ಸಡಗರ ಇದ್ದರೆ, ಉತ್ತರ, ದಕ್ಷಿಣದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ ಎಂದಿದ್ದಾರೆ.
ವಿದೇಶಿ ಭಕ್ತರಿಂದಲೂ ಪುಣ್ಯ ಸ್ನಾನ
ಕುಂಭ ಮೇಳದಲ್ಲಿ ಪಾಲ್ಗೊಳ್ಳುವುದಕ್ಕೆಂದೇ ವಿದೇಶಿ ಪ್ರವಾಸಿಗರು ಬರುತ್ತಾರೆ. ಸ್ಪೇನ್ ದೇಶದ ಜೇವಿಯರ್ ಡಿ ಅಸ್ಕಲೇರಿಯಾ ಅವರು ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದು, ಆರನೇ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. 1984ರಲ್ಲಿ ಮೊದಲ ಬಾರಿಗೆ ಭೇಟಿ ಕೊಟ್ಟಿದೆ. ಎರಡು ಬಾರಿ ಕುಂಭ ಮೇಳಕ್ಕೆ ಬಂದಿದ್ದೇನೆ. 12 ವರ್ಷಗಳ ಹಿಂದೆ ಮತ್ತು ಈಗ ಮತ್ತೆ ಬಂದಿದ್ದೇನೆ. ಅದ್ಭುತ ಸನ್ನಿವೇಶ ಎಂದು ಹೇಳಿದ್ದಾರೆ. ಮತ್ತೊಬ್ಬ ಪ್ರವಾಸಿಗ ಫೆರ್ಮಿನ್ ಎಸುರ್ಡಿಯಾ, ಭಾರತ ಅದ್ಭುತವಾಗಿರುವ ದೇಶ. 12 ವರ್ಷಗಳ ಹಿಂದೆಯೂ ಕುಂಭ ಮೇಳಕ್ಕೆ ಬಂದು ನಾಲ್ಕು ದಿನ ಇದ್ದೆ. ಈ ಬಾರಿ 30 ದಿನಗಳ ಕಾಲ ಇಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದಿದ್ದಾರೆ. ಮೊದಲ ದಿನವೇ ಮಹಾ ಕುಂಭ ಮೇಳದ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡಿವೆ. ನೆಟ್ಟಿಗರು ಏಕ್ ಕುಂಭ್ ಹೆಸರಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಚಿತ್ರಗಳನ್ನು ಟ್ವೀಟ್ ಮಾಡುತ್ತಿದ್ದಾರೆ.
More than 60 lakh devotees took a holy dip at Sangamon Monday, as one of the world's largest spiritual events began in Prayagraj, Uttar Pradesh. The first Shahi Snan of Mhakumbh was held on Paush Purnima today.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm