ಬ್ರೇಕಿಂಗ್ ನ್ಯೂಸ್
03-01-25 11:57 am HK News Desk ದೇಶ - ವಿದೇಶ
ನವದೆಹಲಿ, ಜ.3: ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನರ ಮೇಲೆ ಟ್ರಕ್ ನುಗ್ಗಿಸಿ ವಿಧ್ವಂಸಕ ಕೃತ್ಯ ಎಸಗಿದ ಪ್ರಕರಣದಲ್ಲಿ ಶಂಕಿತ ಉಗ್ರನನ್ನು ಪತ್ತೆ ಮಾಡಲಾಗಿದ್ದು, ಐಸಿಸ್ ಪ್ರೇರಿತ 42 ವರ್ಷದ ಶಂಸುದ್ದೀನ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಅಮೆರಿಕಾದ ಮಿಲಿಟರಿಯಲ್ಲಿ ಕೆಲಸ ಮಾಡಿದ್ದ ಎನ್ನುವುದನ್ನೂ ಪತ್ತೆ ಮಾಡಲಾಗಿದೆ.
ಸೇನೆಯಲ್ಲಿ ಕೆಲಸ ಬಿಟ್ಟ ಬಳಿಕ ಟೆಕ್ಸಾಸ್ ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ. ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊದಲ್ಲಿ ಜಬ್ಬಾರ್ ತನ್ನನ್ನು "ತೀವ್ರಗಾಮಿ" ಎನ್ನುವ ನೆಲೆಯಲ್ಲಿ ಸಂಬೋಧಿಸಿದ್ದ. 2007 ರಿಂದ 2015 ರ ವರೆಗೆ ಅಮೆರಿಕ ಸೇನೆಯ ಮಾನವ ಸಂಪನ್ಮೂಲ ಮತ್ತು ಐಟಿ ವಿಭಾಗದಲ್ಲಿ ಕೆಲಸ ಮಾಡಿದ್ದ. 2009- 2010ರ ನಡುವೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಯೋಧನಾಗಿ ನಿಯೋಜಿಸಲ್ಪಟ್ಟಿದ್ದ ಎಂದು ಸೇನಾ ವಕ್ತಾರರು ಹೇಳಿದ್ದಾರೆ. ಜಬ್ಬಾರ್ ಈ ವೇಳೆ ಸ್ಟಾಫ್ ಸಾರ್ಜೆಂಟ್ ಹುದ್ದೆಯನ್ನು ಹೊಂದಿದ್ದ. 2020ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.


ಹೊಸ ವರ್ಷದ ದಾಳಿಯ ಕೆಲವೇ ಗಂಟೆಗಳ ಮೊದಲು, ಜಬ್ಬಾರ್ ಐಸಿಸ್‌ನಿಂದ ಸ್ಫೂರ್ತಿ ಪಡೆದಿರುವುದನ್ನು ಸೂಚಿಸುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ತಿಳಿಸಿದ್ದಾರೆ. ಅಲ್ಲದೆ, ದಾಳಿಗೆ ಬಳಸಿದ ವಾಹನದಲ್ಲಿ ಐಸಿಸ್ ಉಗ್ರರ ಪರವಾದ ಕಪ್ಪು ಬಾವುಟ ಪತ್ತೆಯಾಗಿದೆ ಎಂದು ಎಫ್‌ಬಿಐ ತಿಳಿಸಿದೆ.
ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಜನಸಂದಣಿ ಮೇಲೆ ಜಬ್ಬಾರ್ ಅತಿ ವೇಗದಲ್ಲಿ ಟ್ರಕ್ ನುಗ್ಗಿಸಿದ್ದು ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದರು. ಹಲವಾರು ಜನರು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಭದ್ರತಾ ಪಡೆಗಳು ಜಬ್ಬಾರ್ ನನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದವು. ಆದರೆ, ತಕ್ಷಣಕ್ಕೆ ಯಾರೀತ, ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾನೆಂದು ತಿಳಿದಿರಲಿಲ್ಲ. ಐಸಿಸ್ ಪ್ರೇರಿತ ಆಗಿರುವುದು ಆತನ ಚಟುವಟಿಕೆಯಿಂದ ತಿಳಿದುಬಂದಿದ್ದರೂ, ಈ ಕೃತ್ಯವನ್ನು ತಾನೇ ಮಾಡಿದ್ದಾಗಿ ಐಸಿಸ್ ಉಗ್ರರು ಹೇಳಿಕೊಂಡಿಲ್ಲ.
ಈ ಘಟನೆಯ ಮರುದಿನವೇ ದೈತ್ಯ ಉದ್ಯಮಿ ಅಲಾನ್ ಮಸ್ಕ್ ಒಡೆತನದ ಹೊಟೇಲ್ ಮುಂದೆ ನಿಲ್ಲಿಸಿದ್ದ ವಾಹನವನ್ನು ಸ್ಫೋಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತಕ್ಕೆ ಉಗ್ರರು ಕರಿನೆರಳು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
Bourbon Street reopened today to a light crowd as tourists and locals veered away from the world-famous destination after an attacker plowed through crowds of revealers, killing more than a dozen people on New Year’s Day.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm