ಬ್ರೇಕಿಂಗ್ ನ್ಯೂಸ್
01-01-25 08:21 pm HK News Desk ದೇಶ - ವಿದೇಶ
ತಿರುವನಂತಪುರ, ಜ.1: ಯೆಮೆನ್ ದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎದ್ದಿದೆ. ಅನಿವಾಸಿ ಭಾರತೀಯರು ಸೇರಿ ನಿಮಿಷಾ ಪರವಾಗಿ ಅಭಿಯಾನ ನಡೆಸುತ್ತಿದ್ದಾರೆ. ಇದರ ನಡುವಲ್ಲೇ ಕೇಂದ್ರ ಸರಕಾರವು ನಿಮಿಷಾ ರಕ್ಷಣೆಗಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸುವುದಾಗಿ ಹೇಳಿದೆ.
ಯೆಮನ್ ದೇಶದ ಪ್ರಜೆಯನ್ನು ಕೊಂದಿರುವ ಆರೋಪದಲ್ಲಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು 2017ರಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದರು. ಆನಂತರ, ಸ್ಥಳೀಯ ಕೋರ್ಟ್ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಇದನ್ನು ಯೆಮನ್ ಸುಪ್ರೀಂ ಕೋರ್ಟ್ 2023ರಲ್ಲಿ ಎತ್ತಿಹಿಡಿದಿತ್ತು. ಇತ್ತೀಚೆಗೆ ಯೆಮನ್ ಅಧ್ಯಕ್ಷ ರಶದ್ ಅಲ್ – ಅಶ್ಮಿ ಅವರು ಕೂಡ ಗಲ್ಲು ಶಿಕ್ಷೆಯನ್ನು ಅನುಮೋದಿಸಿದ್ದು, ಇನ್ನೊಂದು ತಿಂಗಳಲ್ಲಿ ನಿಮಿಷಾಗೆ ಮರಣದಂಡನೆ ಶಿಕ್ಷೆ ಜಾರಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಮತ್ತು ಗಂಡ ಟೋಮಿ ಥಾಮಸ್ ಕೇಂದ್ರ ಮತ್ತು ಕೇರಳ ಸರಕಾರದ ಸಹಾಯ ಯಾಚಿಸಿದ್ದು, ನಿಮಿಷಾಳನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸಿದ್ದಾರೆ.

![]()
ಇಷ್ಟಕ್ಕೂ ನಿಮಿಷಾಗೆ ಆಗಿದ್ದೇನು ?
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ನಿವಾಸಿ ನಿಮಿಷಾ ಪ್ರಿಯಾ 2012ರಲ್ಲಿ ಯೆಮೆನ್ ದೇಶಕ್ಕೆ ಹೋಗಿ ನರ್ಸ್ ಕೆಲಸಕ್ಕೆ ಸೇರಿದ್ದರು. ಆಗ ಈಕೆಯ ಗಂಡ ಟೋಮಿ ಥಾಮಸ್ ಕೂಡ ಜೊತೆಗಿದ್ದರು. ದಂಪತಿಗೆ ಮೊದಲ ಮಗುವಾಗುತ್ತಿದ್ದಂತೆ 2014ರಲ್ಲಿ ಊರಿಗೆ ಹಿಂತಿರುಗಿದ್ದರು. 2015ರ ಫೆಬ್ರವರಿ 9ರಂದು ನಿಮಿಷಾ ಮತ್ತೆ ಒಬ್ಬಂಟಿಯಾಗಿಯೇ ಹಣದ ಅಗತ್ಯಕ್ಕಾಗಿ ನರ್ಸ್ ಕರ್ತವ್ಯಕ್ಕೆ ತೆರಳಿದ್ದರು. ಕೆಲವು ಸಮಯದ ಬಳಿಕ ಗಂಡ ಮತ್ತು ಮಗು ಹೋಗುವುದೆಂದು ನಿಶ್ಚಯಿಸಿದ್ದರು. ಇದರ ಬೆನ್ನಲ್ಲೇ ಯೆಮನ್ ದೇಶದಲ್ಲಿ ಯುದ್ಧ ತಲೆದೋರಿದ್ದರಿಂದ ಭಾರತೀಯ ಹೈಕಮಿಷನ್ ಅಲ್ಲಿಗೆ ತೆರಳುವುದಕ್ಕೆ ಭಾರತದ ಪ್ರಜೆಗಳಿಗೆ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಒಂದು ವರ್ಷದ ಮಗಳು ಮತ್ತು ಟೋಮಿ ಥಾಮಸ್ ಊರಿನಲ್ಲಿಯೇ ಉಳಿದುಕೊಂಡಿದ್ದರು.
ನಿಮಿಷಾ ಹಲವು ಆಸ್ಪತ್ರೆಗಳಲ್ಲಿ ದುಡಿದಿದ್ದರಿಂದ ತನ್ನದೇ ಆದ ಕ್ಲಿನಿಕ್ ಒಂದನ್ನು ತೆರೆಯಲು ಮುಂದಾಗಿದ್ದರು. ಯೆಮನ್ ರಾಜಧಾನಿಯಲ್ಲಿ ಸ್ವಂತ ಕ್ಲಿನಿಕ್ ಮಾಡಬೇಕಿದ್ದರೆ, ಅಲ್ಲಿನ ಪ್ರಜೆಗಳ ಪಾಲುದಾರಿಕೆ ಹೊಂದಬೇಕಿತ್ತು. ಇದಕ್ಕಾಗಿ ಯಬ್ಡೋ ಮಹದಿ ಎನ್ನುವ ವ್ಯಕ್ತಿಯ ಪರಿಚಯವಿದ್ದುದರಿಂದ ಆತನ ಜೊತೆಗೆ ಪಾಲುದಾರಿಕೆಯಲ್ಲಿ ಕ್ಲಿನಿಕ್ ಆರಂಭಿಸಿದ್ದರು. ಅದೇ ವರ್ಷ ರಜೆಯಲ್ಲಿ ನಿಮಿಷಾಳೊಂದಿಗೆ ಮಹದಿ ಕೇರಳಕ್ಕೆ ಬಂದು ಸುತ್ತಾಟವನ್ನೂ ನಡೆಸಿದ್ದ. ಆತನ ಪತ್ನಿ ಮತ್ತು ಮಕ್ಕಳನ್ನೂ ಕರೆದುಕೊಂಡು ಬಂದಿದ್ದ. ಕೇರಳದಲ್ಲಿ ಟೋಮಿ ಥಾಮಸ್ ಮನೆಯಲ್ಲೇ ಮಹದಿ ಕುಟುಂಬವೂ ಉಳಿದುಕೊಂಡಿತ್ತು. ಇಲ್ಲಿಂದ ಹಿಂತಿರುಗಿ ಹೋದ ಬಳಿಕ ಮಹದಿ ಬದಲಾಗಿದ್ದು, ನಿಮಿಷಾಗೆ ಕಿರುಕುಳ ನೀಡಲಾರಂಭಿಸಿದ್ದ. ಹಣಕ್ಕಾಗಿ ಹಿಂಸೆ ನೀಡುತ್ತ ಈಕೆಯ ಪಾಸ್ಪೋರ್ಟನ್ನು ಹಿಡಿದಿಟ್ಟು ಕೇರಳಕ್ಕೆ ಮರಳದಂತೆ ಮಾಡಿದ್ದ. ಡ್ರಗ್ಸ್ ನಶೆಯಲ್ಲಿ ಗನ್ ಪಾಯಿಂಟ್ ಇಟ್ಟು ಹಿಂಸೆ ನೀಡಿದ್ದ ಎಂದೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಾರೆ.


ಕಿರುಕುಳಕ್ಕೆ ಬೇಸತ್ತು ಇಂಜೆಕ್ಷನ್ ಚುಚ್ಚಿದ್ದಳು
ಹಿಂಸೆ, ಕಿರುಕುಳದ ಬಗ್ಗೆ ಯೆಮನ್ ಪೊಲೀಸರಿಗೆ ದೂರು ನೀಡಿದ್ದರಿಂದ ಅಲ್ಲಿನ ಮಾಧ್ಯಮಗಳಲ್ಲಿ ಸುದ್ದಿಯೂ ಆಗಿತ್ತು. ಕೆಲವು ಮಾಧ್ಯಮಗಳು ನಿಮಿಷಾಳನ್ನು ಮಹದಿ ಮದುವೆಯಾಗಿದ್ದಾನೆ, ಆತನೇ ಗಂಡ ಎಂದೂ ಬರೆದುಕೊಂಡಿದ್ದವು. 2017ರಲ್ಲಿ ತನ್ನ ಪಾಸ್ ಪೋರ್ಟನ್ನು ಮರಳಿ ಪಡೆದು ನಿಮಿಷಾ ಗುಪ್ತವಾಗಿಯೇ ತಾಯ್ನಾಡಿಗೆ ಬರಲು ಯತ್ನಿಸಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ. ಒಂದು ದಿನ ಕೋಪದಲ್ಲಿ ಮಹದಿ ಮಲಗಿದ್ದಾಗ ಡ್ರಗ್ ಡೋಸನ್ನು ಇಂಜೆಕ್ಷನ್ ಮೂಲಕ ಚುಚ್ಚಿದ್ದಳು. ಆದರೆ ಡ್ರಗ್ ಓವರ್ ಡೋಸ್ ಆಗಿದ್ದರಿಂದ ಮಹದಿ ಕೆಲವೇ ಹೊತ್ತಲ್ಲಿ ಸತ್ತು ಹೋಗಿದ್ದ. ಘಟನೆ ಹೊರಬರುತ್ತಲೇ ಯೆಮನ್ ಪೊಲೀಸರು ನಿಮಿಷಾಳನ್ನು ಅರೆಸ್ಟ್ ಮಾಡಿ, ಕೊಲೆ ಪ್ರಕರಣ ದಾಖಲಿಸಿದ್ದರು. ಕಿರುಕುಳ ತಾಳಲಾರದೆ ಒಂದು ಕ್ಷಣದ ಸಿಟ್ಟಿನಿಂದಾದ ಎಡವಟ್ಟು ನಿಮಿಷಾಳನ್ನು ಜೈಲುಪಾಲು ಮಾಡಿತ್ತು.
2018ರಲ್ಲಿ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಯೆಮನ್ ಪ್ರಜೆಯ ಕೊಲೆಗೆ ಪ್ರತೀಕಾರವಾಗಿ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2023ರಲ್ಲಿ ಯೆಮನ್ ದೇಶದ ಸುಪ್ರೀಂ ಜುಡೀಶಿಯಲ್ ಕೌನ್ಸಿಲ್ ಕೂಡ ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿಹಿಡಿದಿತ್ತು. ಇದರ ಜೊತೆಗೆ, ಕೊಲೆಗೀಡಾದ ಯೆಮನ್ ಪ್ರಜೆಯ ಕುಟುಂಬಸ್ಥರಿಗೆ ಪ್ರತಿಯಾಗಿ ಕೇಳಿದಷ್ಟು ಹಣವನ್ನು ನೀಡಿದರೆ ಶಿಕ್ಷೆಯಿಂದ ಮಾಫಿ ಮಾಡಬಹುದೆಂದೂ ಹೇಳಿತ್ತು. ಇದನ್ನು ಯೆಮನ್ ದೇಶದಲ್ಲಿ ಬ್ಲಡ್ ಮನಿ ಎಂದು ಕರೆಯಲಾಗುತ್ತಿದ್ದು, ಇದೇ ಈಗ ನಿಮಿಷಾ ಪಾಲಿಗೆ ಏಕೈಕ ಆಶಾಕಿರಣವಾಗಿದೆ.

ಸೇವ್ ನಿಮಿಷಾ ಅಭಿಯಾನ
ನಿಮಿಷಾ ಪರವಾಗಿ ಸಾಮಾಜಿಕ ಕಳಕಳಿಯುಳ್ಳ ಅನಿವಾಸಿ ಭಾರತೀಯರು ಸೇರಿ ಸೇವ್ ನಿಮಿಷಾ ಇಂಟರ್ನ್ಯಾಶನಲ್ ಏಕ್ಷನ್ ಕೌನ್ಸಿಲ್ ಹೆಸರಲ್ಲಿ ಫಂಡ್ ಕಲೆಕ್ಷನ್ ಮಾಡುತ್ತಿದ್ದಾರೆ. ನಿಮಿಷಾಳನ್ನು ಉಳಿಸಿಕೊಳ್ಳಲು ನೆರವಿನ ಯಾಚನೆ ಮಾಡಿದ್ದಾರೆ. ಈ ಸಂಘಟನೆಯ ಸದಸ್ಯರು ಮತ್ತು ಭಾರತೀಯ ಹೈಕಮಿಷನ್ ಅಧಿಕಾರಿಗಳು, ಮಹದಿ ಕುಟುಂಬ ಸದಸ್ಯರು ಮತ್ತು ಅಲ್ಲಿನ ಬುಡಕಟ್ಟು ಜನಾಂಗದ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ. ನಿಮಿಷಾ ತಾಯಿ ಪ್ರೇಮ ಕುಮಾರಿ ಯೆಮನ್ ರಾಜಧಾನಿಯಲ್ಲೇ ನೆಲೆ ನಿಂತಿದ್ದು ಸಿಕ್ಕ ಸಿಕ್ಕವರಲ್ಲಿ ಮಗಳ ಬಿಡುಗಡೆಗಾಗಿ ಸಹಾಯ ಯಾಚಿಸುತ್ತಿದ್ದಾರೆ. ದೊಡ್ಡ ಮೊತ್ತದ ‘ಬ್ಲಡ್ ಮನಿ’ ಬೇಡಿಕೆಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದ್ದು ಮಾತುಕತೆಗೆ ತೊಡಕಾಗಿದೆ ಎನ್ನಲಾಗುತ್ತಿದೆ.
ಮನೆ, ಒಡವೆ ಮಾರಿ ಬೀದಿಗೆ ಬಿದ್ದ ಕುಟುಂಬ
ಇತ್ತ ನಿಮಿಷಾ ಗಂಡ ಟೋಮಿ ಥಾಮಸ್ ಪಾಲಕ್ಕಾಡ್ ನಲ್ಲಿ ಆಟೋ ಚಾಲಕನಾಗಿ ಮತ್ತು ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. 2015ರಲ್ಲಿ ಸ್ವಂತ ಕ್ಲಿನಿಕ್ ನಡೆಸುವುದಕ್ಕೆಂದು ಮಾಡಿದ್ದ ಸಾಲ ತೀರಿಸಲು ಮತ್ತು ಪತ್ನಿಯನ್ನು ಜೈಲಿನಿಂದ ಬಿಡಿಸುವುದಕ್ಕಾಗಿ ಹಣ ಸಂಗ್ರಹದಲ್ಲಿ ತೊಡಗಿದ್ದೇನೆ. 60 ಲಕ್ಷ ಸಾಲ ಇರುವುದರಿಂದ ಇದ್ದ ಮನೆಯನ್ನೂ ಮಾರಿದ್ದೇನೆ. ಆಕೆಯ ತಾಯಿ ತನ್ನ ಬಳಿಯಿದ್ದ ಒಡವೆಗಳನ್ನೆಲ್ಲ ಮಾರಾಟ ಮಾಡಿದ್ದಾರೆ. ಸಣ್ಣ ಮಗುವಾಗಿದ್ದರೂ, ಮಗಳನ್ನು ಮನೆಯಲ್ಲಿ ಉಳಿಸಿಕೊಳ್ಳಲಾಗದೆ ಹಾಸ್ಟೆಲ್ ಗೆ ಹಾಕಿದ್ದೇನೆ. ಜೈಲಿನಲ್ಲಿರುವ ಪತ್ನಿ ಫೋನ್ ಮಾಡಿದಾಗೆಲ್ಲ ಮಗಳ ಬಗ್ಗೆ ಕೇಳುತ್ತಿದ್ದಾಳೆ. ಆಕೆಗೆ ಹೊರಗೆ ಏನಾಗುತ್ತಿದೆ ಎನ್ನುವ ಬಗ್ಗೆ ಅಂದಾಜಿಲ್ಲ. ಈಗ ತಲೆಗೊಂದು ಸೂರೂ ಇಲ್ಲದೆ ಒದ್ದಾಡುತ್ತಿದ್ದೇನೆ ಎಂದು ಟೋಮಿ ಥಾಮಸ್ ಮಾಧ್ಯಮದ ಮುಂದೆ ಅಲವತ್ತುಕೊಂಡಿದ್ದಾರೆ.
The ministry of external affairs (MEA) on Tuesday said it would extend “all possible help” to secure the release of Nimisha Priya, a nurse from Kerala who has been awarded the death sentence in Yemen.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm