ಬ್ರೇಕಿಂಗ್ ನ್ಯೂಸ್
20-12-24 05:01 pm HK News Desk ದೇಶ - ವಿದೇಶ
ನವದೆಹಲಿ, ಡಿ.20: ಇತ್ತೀಚಿಗೆ ದೇಶಾದ್ಯಂತ ಮಂದಿರ-ಮಸೀದಿ ವಿವಾದ ಹೊಸ ಚರ್ಚೆ, ಅಪಸ್ವರಕ್ಕೆ ಕಾರಣವಾಗಿರುವ ಹೊತ್ತಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ರಾಮ ಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ದೇಶದ ಸೌಹಾರ್ದ ನೆಲೆಯಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್ ಅಂತರ್ಗತ ಸಮಾಜವನ್ನು ಪ್ರತಿಪಾದಿಸುತ್ತ ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದರು. ರಾಮಕೃಷ್ಣ ಮಿಷನ್ ನಲ್ಲಿ ಕ್ರಿಸ್ ಮಸ್ ಆಚರಿಸಲಾಗುತ್ತದೆ. ಹಿಂದು ಮಠಗಳಲ್ಲಿ ಇಫ್ತಾರ್ ಮಾಡಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನು ಮಾಡಲು ಸಾಧ್ಯ ಎಂದರು.
ದೇಶದಲ್ಲಿ ಇತ್ತೀಚೆಗೆ ಮಂದಿರ- ಮಸೀದಿ ವಿವಾದ ಏಳುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ರಾಮ ಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಜಾಗಗಳಲ್ಲಿ ಇದೇ ವಿಚಾರಗಳನ್ನು ಮುಂದಿಟ್ಟು ಹಿಂದೂಗಳ ನಾಯಕರಾಗಲು ಬಯಸುತ್ತಾರೆ. ಆದರೆ ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನ ಶಾಹಿ ಜಾಮಿಯಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್ ಷರೀಫ್‌ನಂತಹ ಧಾರ್ಮಿಕ ಸ್ಥಳಗಳ ಮೂಲದ ಬಗ್ಗೆ ವಿವಾದಗಳೆದ್ದಿರುವ ಹಿನ್ನೆಲೆಯಲ್ಲಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ನಾವು ಬಹಳ ಹಿಂದಿನಿಂದಲೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಈ ಸದ್ಭಾವನೆಯನ್ನು ನಾವು ಜಗತ್ತಿಗೆ ಒದಗಿಸಬೇಕಾದರೆ, ನಾವು ಅದನ್ನು ಮಾದರಿಯಾಗಿಟ್ಟುಕೊಳ್ಳಬೇಕು. ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಏಕೆಂದರೆ ಅದು ಎಲ್ಲಾ ಹಿಂದೂಗಳ ನಂಬಿಕೆಯ ವಿಷಯವಾಗಿತ್ತು ಎಂದು ಹೇಳಿದ ಭಾಗವತ್, ಯಾವುದೇ ನಿರ್ದಿಷ್ಟ ವಿವಾದವನ್ನು ಉಲ್ಲೇಖಿಸದೆ, ಪ್ರತಿದಿನ ಹೊಸ ಪ್ರಕರಣ, ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಅದನ್ನು ಬಿಟ್ಟು ನಾವು ಒಟ್ಟಿಗೆ ಬಾಳಬಹುದು ಎಂಬುದನ್ನು ಭಾರತ ತೋರಿಸಬೇಕಾಗಿದೆ ಎಂದರು.
RSS chief Mohan Bhagwat on Thursday took a jibe at aspiring Hindu leaders for stirring up "Ram-temple-like" disputes at various places across India.He said that India should be set as an example of inclusivity and harmony. Calling attention to India's pluralistic society, the RSS chief said that Christmas is observed in Swami Ramakrishnan Mission, emphasising that "only we can do this because we are Hindus”.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm