ಬ್ರೇಕಿಂಗ್ ನ್ಯೂಸ್
12-12-24 08:56 pm HK News Desk ದೇಶ - ವಿದೇಶ
ನವದೆಹಲಿ, ಡಿ.12: ಪ್ಲಾಸ್ಟಿಕ್ ಈಗ ಮನುಷ್ಯನ ಪಾಲಿಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಆದರೆ, ಇದೇ ಪ್ಲಾಸ್ಟಿಕ್ ಮನುಷ್ಯನ ಆರೋಗ್ಯಕ್ಕೂ ಮುಳುವಾಗುತ್ತಿದೆ ಎನ್ನುವ ಅಧ್ಯಯನ ವರದಿ ಬಂದಿದೆ. ಪರಿಸರದಲ್ಲಿ ಕರಗುವ ಮೈಕ್ರೋ ಪ್ಲಾಸ್ಟಿಕ್ ಅಂಶಗಳು ಮನುಷ್ಯನ ರಕ್ತ ಸೇರುತ್ತಿದ್ದು, ಇದರಿಂದ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ದಕ್ಷಿಣ ಕೊರಿಯಾದಲ್ಲಿ ನಡೆಸಿದ ಸಂಶೋಧನಾ ವರದಿ ಹೇಳಿದೆ.
ಅಲ್ಲಿ 36 ಮಂದಿ ಆರೋಗ್ಯವಂತರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರ ರಕ್ತದಲ್ಲಿ ಎಷ್ಟು ಮೈಕ್ರೋ ಪ್ಲಾಸ್ಟಿಕ್ ಅಂಶ ಇದೆ ಮತ್ತು ರಕ್ತ ಹೆಪ್ಪುಗಟ್ಟುವ ಅಂಶ ಎಷ್ಟಿದೆ ಎಂದು ತಪಾಸಣೆ ನಡೆಸಿದಾಗ, ಅಚ್ಚರಿ ವರದಿ ಬಂದಿದೆ. ಇವರಲ್ಲಿ 89 ಶೇಕಡಾದಷ್ಟು ಮಂದಿಗೆ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದ್ದು, ಪ್ರತಿ ಮೈಕ್ರೋ ಮಿಲಿ ಲೀಟರ್ ರಕ್ತದಲ್ಲಿ 4.2ರಷ್ಟು ಸರಾಸರಿಯಷ್ಟು ಪ್ಲಾಸ್ಟಿಕ್ ಸಿಕ್ಕಿದೆ.
ಹೆಚ್ಚಿನವರಲ್ಲಿ ಪಾಲಿ ಸ್ಟಿರೈನ್ ಎನ್ನುವ ರೀತಿಯ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ. ಬಳಸಿ ಎಸೆಯುವ ಕಪ್, ಇನ್ನಿತರ ವಸ್ತುಗಳಲ್ಲಿ ಈ ಮಾದರಿಯ ಪ್ಲಾಸ್ಟಿಕ್ ಅಂಶ ಇರುತ್ತದೆ. ಇದಲ್ಲದೆ, ಫುಡ್ ಪ್ಯಾಕೇಜಿಂಗ್ ಪ್ಲಾಸ್ಟಿಕ್ ನಲ್ಲಿ ಬಳಸುವ ಪಾಲಿ ಪ್ರೊಪೈಲಿನ್ ಅಂಶವೂ ರಕ್ತದಲ್ಲಿ ಪತ್ತೆಯಾಗಿದೆ. ಆಧುನಿಕ ಜೀವನ ಕ್ರಮ, ಪ್ಲಾಸ್ಟಿಕ್ ನಲ್ಲಿ ಕಟ್ಟಿರುವ ಆಹಾರ ಪದಾರ್ಥಗಳ ಬಳಕೆಯಿಂದ ದೇಹಕ್ಕೆ ಪ್ಲಾಸ್ಟಿಕ್ ಸೇರುತ್ತಿದೆ ಎನ್ನಲಾಗುತ್ತಿದೆ. ರಕ್ತದಲ್ಲಿ ಮೈಕ್ರೋ ಪ್ಲಾಸ್ಟಿಕ್ ಅಂಶ ಇರುವ ಮಂದಿಗೆ ಬ್ಲಡ್ ಕ್ಲಾಟಿಂಗ್ (ರಕ್ತ ಹೆಪ್ಪುಗಟ್ಟುವ) ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವುದು ಅಧ್ಯಯನದಲ್ಲಿ ಕಂಡುಬಂದ ಅಂಶ.
ಆಧುನಿಕ ಜೀವನ ಕ್ರಮದಿಂದಾಗಿ ಜಗತ್ತಿನಾದ್ಯಂತ ಹಾರ್ಟ್ ಅಟ್ಯಾಕ್, ಬ್ರೇನ್ ಹೇಮರೇಜ್ ಆಗುವುದು ಹೆಚ್ಚುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಕೇವಲ ಪರಿಸರಕ್ಕೆ ಮಾತ್ರ ಹಾನಿ ಮಾಡುವುದಲ್ಲ. ಮನುಷ್ಯನ ಆರೋಗ್ಯ, ಹೃದಯಕ್ಕೂ ಹಾನಿ ಮಾಡುತ್ತಿದೆ. ಇದರಿಂದಾಗಿ ಪ್ಲಾಸ್ಟಿಕ್ ನಲ್ಲಿ ಪ್ಯಾಕೇಟ್ ಮಾಡುವ ಆಹಾರ ವಸ್ತುಗಳನ್ನು ಆದಷ್ಟು ಕಡಿಮೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಸಲಹೆ ಮಾಡಿದ್ದಾರೆ.
A recent study has highlighted an unsettling connection between tiny plastic particles or microplastics in human blood and the potential health risks.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm