ಬ್ರೇಕಿಂಗ್ ನ್ಯೂಸ್
09-12-24 10:12 pm HK News Desk ದೇಶ - ವಿದೇಶ
ಮುಂಬೈ, ಡಿ.9: ಬೆಂಗಳೂರಿನ ಪ್ರಖ್ಯಾತ ‘ಇಡ್ಲಿ ಗುರು’ ಬ್ರಾಂಡಿನ ಸ್ಥಾಪಕ ಕಾರ್ತಿಕ್ ಶೆಟ್ಟಿ ವಿರುದ್ಧ ಮುಂಬೈನಲ್ಲಿ ಚಿತ್ರ ನಿರ್ಮಾಪಕರೊಬ್ಬರಿಗೆ ಇಡ್ಲಿ ಫ್ರಾಂಚೈಸಿ ಮಾಡಿಕೊಡುತ್ತೇನೆಂದು ಹೇಳಿ 28 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
2024ರ ಜನವರಿ ತಿಂಗಳಲ್ಲಿ ಅಂಧೇರಿಯ ಚಿತ್ರ ನಿರ್ಮಾಪಕ ಆದಿತ್ಯ ಕಪೂರ್ ಅವರನ್ನು ಕಾರ್ತಿಕ್ ಶೆಟ್ಟಿ ಭೇಟಿಯಾಗಿದ್ದರು. ಇಡ್ಲಿ ಗುರು ಹೊಟೇಲಿಗೆ ತೆರಳಿದ್ದಾಗ ಫ್ರಾಂಚೈಸಿ ಮಾಡಿಕೊಡುವ ಬಗ್ಗೆ ಆಫರ್ ಮಾಡಿದ್ದರು. ಆದಿತ್ಯ ಕಪೂರ್ ತನ್ನ ತಂದೆ ಕೊಲ್ಕತ್ತಾದಲ್ಲಿದ್ದು, ಅವರನ್ನು ಸಂಪರ್ಕಿಸಿ ಇಡ್ಲಿ ಗುರು ಬಗ್ಗೆ ತಿಳಿಸಿದ್ದರು. ತಂದೆಯೇ ಸ್ವತಃ ಕೊಲ್ಕತ್ತಾದಲ್ಲಿ ಹೊಟೇಲ್ ಸ್ಥಾಪನೆ ಬಗ್ಗೆ ಕೇಳಿದಾಗ, ನಿರಾಕರಿಸಿದ್ದ ಕಾರ್ತಿಕ್ ಶೆಟ್ಟಿ ಮುಂಬೈನಲ್ಲಿ ಫ್ರಾಂಚೈಸಿ ಮಾಡಿಕೊಡುತ್ತೇನೆಂದು ಒಪ್ಪಿಗೆ ನೀಡಿದ್ದರು.
ಆದಿತ್ಯ ಕಪೂರ್ ಮತ್ತು ಅವರ ತಂದೆ ಸೇರಿ ಕಾರ್ತಿಕ್ ಶೆಟ್ಟಿ ಮತ್ತು ಅವರ ಪತ್ನಿ ಮಂಜುಳಾ ಶೆಟ್ಟಿ ಅವರನ್ನು ಭೇಟಿಯಾಗಿ ಮುಂಬೈನಲ್ಲಿ ಹೊಟೇಲ್ ಆರಂಭಿಸುವುದಕ್ಕೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಫ್ರಾಂಚೈಸಿ ಹಾಕಲು 28-30 ಲಕ್ಷ ಬೇಕಾಗಬಹುದು ಎಂದು ಕಾರ್ತಿಕ್ ಶೆಟ್ಟಿ ಹೇಳಿದ್ದರು. ಅದರಂತೆ, ಕಪೂರ್ ಫ್ಯಾಮಿಲಿ ಮೊದಲಿಗೆ 20 ಲಕ್ಷ ರೂ. ಕೊಟ್ಟು 3.6 ಲಕ್ಷ ರೂ.ವನ್ನು ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ರೂಪದಲ್ಲಿ ನೀಡಿದ್ದರು.
ಆದಿತ್ಯ ಕಪೂರ್ ಬಳಿಕ ಮುಂಬೈನ ಜೋಗೇಶ್ವರಿಯ ಓಶಿವಾರಾದ ನ್ಯೂಲಿಂಕ್ ರೋಡ್ ನಲ್ಲಿ ಬಾಡಿಗೆ ಕೊಠಡಿ ಪಡೆದು ಶಾಪ್ ಹಾಕಲು ರೆಡಿ ಮಾಡಿಕೊಂಡಿದ್ದರು. ಫ್ರಾಂಚೈಸಿ ಪಡೆಯುವುದಕ್ಕೆ ಅಗ್ರೀಮೆಂಟನ್ನೂ ಮಾಡಿಕೊಂಡಿದ್ದರು. ಆನಂತರ ಶಾಪ್ ನಲ್ಲಿ ಫರ್ನಿಚರ್ ಇನ್ನಿತರ ಕೆಲಸಕ್ಕೆಂದು ಒಟ್ಟು 28.6 ಲಕ್ಷ ರೂಪಾಯಿ ಮೊತ್ತ ನೀಡಿದ್ದರು. ಆದರೆ, ಕಾರ್ತಿಕ್ ಶೆಟ್ಟಿ ಆನಂತರ ಆದಿತ್ಯ ಕಪೂರ್ ಅವರ ಫೋನ್ ಕರೆಯನ್ನೇ ಸ್ವೀಕರಿಸದೆ ನಿರ್ಲಕ್ಷ್ಯ ಮಾಡಿದ್ದರು. ಫೋನ್, ಮೆಸೇಜಿಗೆ ಉತ್ತರಿಸದೆ ಮೋಸ ಮಾಡಿರುವುದು ಅರಿವಾಗುತ್ತಲೇ ಆದಿತ್ಯ ಕಪೂರ್ ಆನ್ಲೈನಲ್ಲಿ ಕಾರ್ತಿಕ್ ಶೆಟ್ಟಿ ಬಗ್ಗೆ ಸರ್ಚ್ ಮಾಡಿದಾಗ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮೋಸ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿತ್ತು.
ಆನಂತರ, ಮಾರ್ಚ್ ತಿಂಗಳಲ್ಲಿ ಕಾರ್ತಿಕ್ ಶೆಟ್ಟಿ ಸ್ವತಃ ಆದಿತ್ಯ ಕಪೂರ್ ಅವರನ್ನು ಸಂಪರ್ಕಿಸಿ, 5 ಲಕ್ಷದ ಚೆಕ್ ಕೊಟ್ಟು ನನ್ನ ಮೇಲೆ ದಾಖಲಾಗಿರುವ ಕೇಸುಗಳು ಸುಳ್ಳು. ಅವೆಲ್ಲ ಈಗ ಇಲ್ಲ ಎಂದು ಹೇಳಿ ನಂಬಿಸಿದ್ದಾರೆ. ಆದರೆ ಕಪೂರ್ ಆ ಚೆಕ್ಕನ್ನು ಬ್ಯಾಂಕಿಗೆ ಹಾಕಿದಾಗ, ಬೌನ್ಸ್ ಆಗಿತ್ತು. ಆದಿತ್ಯ ಕಪೂರ್ ತನಗೆ ಮೋಸ ಆಗಿರುವ ಬಗ್ಗೆ ಕಾರ್ತಿಕ್ ಶೆಟ್ಟಿ ವಿರುದ್ಧ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಇದೇ ಮಾದರಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಮೋಸ ಎಸಗಿರುವ ಬಗ್ಗೆ ಕಾರ್ತಿಕ್ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
Bangalore Idli guru Franchise fraud to movie director in Mumbai, case filed against Karthik Shetty over cheating. Karthik B Shetty, the founder of ‘Idly Guru,’ has been booked by the Oshiwara Police for allegedly defrauding a filmmaker of Rs. 28 lakhs under the pretext of providing a franchise of Idly Guru.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
17-01-25 11:10 pm
Mangalore Correspondent
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
Mangalore Koteker Bank Robbery, MP Brijesh Ch...
17-01-25 10:36 pm
CM Siddaramaiah, RGUHS Mangalore; ರಾಜೀವ ಗಾಂಧಿ...
17-01-25 07:42 pm
17-01-25 07:58 pm
Mangaluru Correspondent
Kotekar Bank Robbery, Mangalore Crime; ಬೀದರ್...
17-01-25 03:02 pm
Bidar SBI Bank Robbery Update, Hyderabad Firi...
17-01-25 02:48 pm
Bidar SBI Bank Robbery; ಬೀದರ್; ATM ಹಣಹಾಕಲು ಬಂ...
16-01-25 03:10 pm
Fake Stock Market scam, Mangalore, Police: ನಕ...
15-01-25 11:06 pm