ಬ್ರೇಕಿಂಗ್ ನ್ಯೂಸ್
02-12-24 10:44 pm HK News Desk ದೇಶ - ವಿದೇಶ
ಚೆನ್ನೈ, ಡಿ.2: ತಮಿಳುನಾಡು ರಾಜ್ಯದಾದ್ಯಂತ ಫೆಂಗಾಲ್ ಚಂಡಮಾರುತ ಹಾವಳಿ ಎಬ್ಬಿಸಿದೆ. ಪುದುಚೇರಿ ಸೇರಿದಂತೆ ಉತ್ತರ ತಮಿಳುನಾಡಿನ ತಿರುವಣ್ಣಾಮಲೈ, ಕೃಷ್ಣಗಿರಿ, ಧರ್ಮಾಪುರಿ, ವಿಲ್ಲುಪುರಂ ಜಿಲ್ಲೆಗಳಲ್ಲಿ ಹೆಚ್ಚು ಪೀಡನೆ ಮಾಡಿದೆ. 14 ಜಿಲ್ಲೆಗಳಲ್ಲಿ ಒಂದೂವರೆ ಕೋಟಿ ಜನರು ಚಂಡಮಾರುತದಿಂದ ಬೆಳೆ, ಆಸ್ತಿ ನಷ್ಟ ಅನುಭವಿಸಿದ್ದಾರೆ. 2.11 ಲಕ್ಷ ಹೆಕ್ಟೇರ್ ಕೃಷಿ ಹಾನಿಯಾಗಿದೆ ಎಂದು ಸಿಎಂ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.
ಅಣ್ಣಾಮಲೈಯಾರ್ ಬೆಟ್ಟ ಪ್ರದೇಶದಲ್ಲಿ ಮಗು ಸೇರಿದಂತೆ ಐದು ಜನರು ಸಾವು ಕಂಡಿದ್ದಾರೆ. ಡಿ.1ರಂದು ಕೃಷ್ಣಗಿರಿಯಲ್ಲಿ 50 ಸೆಂಟಿ ಮೀಟರ್, ವಿಲ್ಲುಪುರಂನಲ್ಲಿ 42 ಸೆ.ಮೀ. ಮಳೆಯಾಗಿದೆ. ಇದೇ ವೇಳೆ. ಡಿ.2ರಂದು ಉತ್ತರ ಕೇರಳದ ಕಾಸರಗೋಡು, ಕಣ್ಣೂರು, ವಯನಾಡ್, ಕೋಜಿಕ್ಕೋಡ್, ಮಲ್ಲಪ್ಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿ.2ರಂದು ಉತ್ತರ ಕೇರಳ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಹಲವೆಡೆ ನಾಶ- ನಷ್ಟ ಉಂಟಾಗಿದೆ.
ಪುದುಚೇರಿಯಲ್ಲಿ ಕಳೆದ 30 ವರ್ಷಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಪ್ರವಾಹದ ಸ್ಥಿತಿ ತಲೆದೋರಿದ್ದು, ಸಂಕಷ್ಟಕ್ಕೀಡಾದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಡಿ.1ರ ಸಂಜೆಯ ಬಳಿಕ ಪುದುಚೇರಿ ಏರ್ಪೋರ್ಟ್ ಬಂದ್ ಮಾಡಲಾಗಿತ್ತು. ಹವಾಮಾನ ತಜ್ಞರ ಪ್ರಕಾರ, ಈ ಬಾರಿಯ ಚಂಡಮಾರುತ ಅತಿ ನಿಧಾನಗತಿಯಿಂದ ಕೂಡಿದೆಯಂತೆ. ನವೆಂಬರ್, ಡಿಸೆಂಬರ್ ನಲ್ಲಿ ಬರುತ್ತಿದ್ದ ಸೈಕ್ಲೋನ್ ಇಷ್ಟು ನಿಧಾನಗತಿಯಲ್ಲಿ ಬಂದಿದ್ದು ಈ ಹಿಂದೆ ಕಂಡಿಲ್ಲ. 24 ಗಂಟೆಯಲ್ಲಿ ಕೇವಲ 500 ಕಿಮೀ ಅಷ್ಟೇ ಸಂಚರಿಸಿದ್ದರಿಂದ ಇದರ ಹಾವಳಿ ಹೆಚ್ಚಿದೆ. ಗಂಟೆಗೆ ಕೇವಲ 15 ಕಿಮೀ ಅಷ್ಟೇ ಸೈಕ್ಲೋನ್ ಸಂಚರಿಸುತ್ತಿರುವುದರಿಂದ ಮಳೆಯೂ ಹೆಚ್ಚು ಬೀಳುತ್ತಿದೆ ಎಂದು ತಿಳಿಸಿದ್ದಾರೆ.
ಡಿ.2ರಂದು ಚಂಡಮಾರುತ ಕರ್ನಾಟಕ ಪ್ರವೇಶ ಮಾಡಿದ್ದು, ಉತ್ತರ ಕೇರಳದ ಮೂಲಕ ಕರ್ನಾಟಕ ಕರಾವಳಿಯಿಂದಾಗಿ ಗೋವಾಕ್ಕೆ ತಲುಪುವ ಸಾಧ್ಯತೆಯಿದೆ. ಹೀಗಾಗಿ ಡಿ.2 ಮತ್ತು 3ರಂದು ಭಾರೀ ಮಳೆಯಾಗುವ ಬಗ್ಗೆ ಸೂಚನೆ ನೀಡಲಾಗಿದೆ.
Cyclone Fengal has progressed towards Tamil Nadu and made landfall on the Puducherry coasts at 7pm on Saturday. It is now likely to remain in Tamil Nadu, and weaken into a deep depression. Budget carrier IndiGo announced that it is resuming operations. The cylcone triggered heavy rainfall, shutting down airport operations till 4am on December 1.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am