ಬ್ರೇಕಿಂಗ್ ನ್ಯೂಸ್
29-11-24 06:22 pm HK News Desk ದೇಶ - ವಿದೇಶ
ನವದೆಹಲಿ, ನ.29: ಉತ್ತರ ಪ್ರದೇಶದ ವಿವಾದಿತ ಸಂಭಾಲ್ ಜುಮ್ಮಾ ಮಸೀದಿ ಕುರಿತು ಸರ್ವೆ ನಡೆಸುವಂತೆ ಸ್ಥಳೀಯ ಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ.26ರಂದು ಸ್ಥಳೀಯ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಂಭಾಲ್ ನಲ್ಲಿ ಗಲಭೆ ಉಂಟಾಗಿದ್ದು, ಐವರು ಮೃತಪಟ್ಟಿದ್ದರು. ಸ್ಥಳೀಯ ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ್ದ ಈದ್ಗಾ ಕಮಿಟಿಗೆ, ನೀವು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿ. ಗಲಭೆಗೆ ಆಸ್ಪದ ಕೊಡಬೇಡಿ, ಅಲ್ಲಿ ವರೆಗೆ ಸ್ಥಳೀಯ ಕೋರ್ಟಿನ ಆದೇಶಕ್ಕೆ ತಡೆ ನೀಡುವುದಾಗಿ ಹೇಳಿದೆ.
ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರಿದ್ದ ಪೀಠವು, ಸರ್ವೆ ನಡೆಸುವ ಕಮಿಷನರ್ ಗೆ ಮುಚ್ಚಿದ ಲಕೋಟೆಯಲ್ಲಿ ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ಯಾವುದೇ ಕಾರಣಕ್ಕೂ ಅದರ ಮಾಹಿತಿ ಲೀಕ್ ಆಗಬಾರದು ಎಂದು ಷರತ್ತು ವಿಧಿಸಿದೆ. ಮಸೀದಿ ಸರ್ವೆ ನಡೆಸುವುದಕ್ಕೆ ಸ್ಥಳೀಯ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಂಭಾಲ್ ಶಾಹಿ ಜುಮ್ಮಾ ಮಸ್ಜಿದ್ ಕಮಿಟಿ ಸುಪ್ರೀಂ ಮೆಟ್ಟಿಲೇರಿತ್ತು. 1526ರಲ್ಲಿ ಮೊಘಲ್ ದೊರೆ ಬಾಬರನು ಸಂಭಾಲ್ ನಲ್ಲಿದ್ದ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿದ್ದ ಎಂದು ಕೋರ್ಟಿನಲ್ಲಿ ಅಪೀಲು ಮಾಡಲಾಗಿತ್ತು.
ಹೈಕೋರ್ಟಿನಲ್ಲಿ ಮೂರು ದಿನದೊಳಗೆ ಮಸೀದಿ ಕಮಿಟಿಯ ಅರ್ಜಿ ಸ್ವೀಕರಿಸುವಂತೆ ಉಚ್ಛ ನ್ಯಾಯಾಲಯ ಸೂಚಿಸಿದೆ. ಈ ನಡುವೆ, ಮಸೀದಿ ಕಮಿಟಿಯ ಅರ್ಜಿ ವಿಚಾರಣೆಯನ್ನು ಜ.6ಕ್ಕೆ ಮುಂದೂಡಿದೆ. ಇದಲ್ಲದೆ, ಸಂಭಾಲ್ ಜಿಲ್ಲಾಡಳಿತವು ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದ್ದು, ನಾವು ಹಿಂಸೆ ಆಗುವುದನ್ನು ಬಯಸುವುದಿಲ್ಲ. ತಕ್ಷಣವೇ ಮಧ್ಯಸ್ಥಿಕೆ ಕಮಿಟಿಯನ್ನು ನೇಮಕ ಮಾಡಬೇಕು ಎಂದು ಹೇಳಿದೆ. ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಹರಿಹರ ದೇವಸ್ಥಾನ ಇತ್ತೆಂದು ಹೇಳಲಾಗಿದೆ.
ಈ ನಡುವೆ, ಸಂಭಾಲ್ ಗಲಭೆ ಬಗ್ಗೆ ತನಿಖೆ ನಡೆಸಲು ಅಲಹಾಬಾದ್ ಹೈಕೋರ್ಟಿನ ಮಾಜಿ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರ ನೇತೃತ್ವದಲ್ಲಿ ಮೂರು ಸದಸ್ಯರ ಕಮಿಟಿಯನ್ನು ಉತ್ತರ ಪ್ರದೇಶ ಸರಕಾರ ನೇಮಕ ಮಾಡಿದೆ. ತಂಡದಲ್ಲಿ ಮಾಜಿ ಐಪಿಎಸ್ ಅಧಿಕಾರಿಗಳಾದ ಅಮಿತ್ ಮೋಹನ್ ಪ್ರಸಾದ್, ಅರವಿಂದ ಕುಮಾರ್ ಜೈನ್ ಅವರು ಇದ್ದಾರೆ. ಎರಡು ತಿಂಗಳೊಳಗೆ ವರದಿ ನೀಡುವಂತೆ ಸರಕಾರ ಆದೇಶ ಮಾಡಿದೆ. ಸರ್ವೆ ನಡೆಸುವಂತೆ ಆದೇಶಿಸಿದ ಬೆನ್ನಲ್ಲೇ ಭಾರೀ ಕಲ್ಲು ತೂರಾಟ, ಹಿಂಸಾಚಾರ ನಡೆದಿತ್ತು.
The Supreme Court on Friday (November 29, 2024) gave a stern instruction to the Uttar Pradesh Police and Sambhal district administration to be “totally, absolutely neutral” and maintain peace after a civil court-ordered survey to verify claims of a mosque built over a destroyed temple in the 16th century, unleashed violence, loss of lives, arrests amidst communal tension.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm