ಬ್ರೇಕಿಂಗ್ ನ್ಯೂಸ್
26-11-24 09:43 pm HK News Desk ದೇಶ - ವಿದೇಶ
ನವದೆಹಲಿ, ನ.26: ದೇಶಾದ್ಯಂತ ತೆರಿಗೆದಾರರ ನೋಂದಣಿ ವ್ಯವಸ್ಥೆಯನ್ನು ಡಿಜಿಟಲೈಸ್ ಮಾಡುವ ಸಲುವಾಗಿ ಪ್ಯಾನ್ 2.0 ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈಗಿರುವ ಪ್ಯಾನ್ ಕಾರ್ಡ್‌ನಲ್ಲೇ ಕ್ಯೂಆರ್ ಕೋಡ್ ಸಹಿತ ಡಿಜಿಟಲ್ ಕಾರ್ಡ್ ಇದಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ತೆರಿಗೆ ಸೇವೆಗಳನ್ನು ಸುಧಾರಣೆ ಮತ್ತು ಸುಲಲಿತ ವ್ಯಾಪಾರ ವಹಿವಾಟಿನ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಗೆ ಸರ್ಕಾರ ₹1,435 ಕೋಟಿ ವ್ಯಯಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎ ಅಡಿಯಲ್ಲಿ 1972 ರಿಂದ ಪ್ಯಾನ್ ಕಾರ್ಡ್ ಬಳಕೆಯಲ್ಲಿದೆ. ದೇಶದಲ್ಲಿ ಅಂದಾಜು 78 ಕೋಟಿ ಪ್ಯಾನ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಇದು ಶೇಕಡಾ 98ರಷ್ಟು ವ್ಯಕ್ತಿಗಳನ್ನು ಒಳಗೊಳ್ಳುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.
ಹಣಕಾಸಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಅತಿ ಅಗತ್ಯವಾಗಿರುವುದರಿಂದ ಭದ್ರತೆ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಪ್ಯಾನ್ 2.0 ವ್ಯವಸ್ಥೆಯಲ್ಲಿ ಕ್ಯೂಆರ್ ಕೋಡ್ ಸಹಿತ ಕಾರ್ಡ್‌ಗಳು ಲಭ್ಯವಾಗಲಿದೆ. ಡಿಜಿಟಲ್ ವ್ಯವಸ್ಥೆ ಅಗತ್ಯವಿರುವಲ್ಲಿ ಈ ಕಾರ್ಡ್ ಬಳಕೆಯಾಗಲಿದೆ. ಜತೆಗೆ ಸಾರ್ವತ್ರಿಕ ಗುರುತು ಕಾರ್ಡ್ ಆಗಿಯೂ ಬಳಕೆಯಾಗಲಿದೆ.
ಈ ಹೊಸ ಆವೃತ್ತಿಯು PAN/TAN ಸೇವೆಗಳಿಗೆ ಒಂದೇ ವೇದಿಕೆಯಾಗಲಿದೆ. ಪರಿಸರ ಸ್ನೇಹಿ, ಭದ್ರತೆ ಮತ್ತು ವೇಗವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯಾಗಲಿದೆ.
ಪ್ಯಾನ್ 2.0 ಉಪಯೋಗಗಳು
ತೆರಿಗೆದಾರರಿಗೆ ನೋಂದಣಿ ಪ್ರಕ್ರಿಯೆ ವೇಗವಾಗಿ ಮತ್ತು ಬಳಕೆದಾರರ ಸ್ನೇಹಿಯಾಗಿರಲಿದೆ. ಈಗಾಗಲೇ ಇರುವ ಪ್ಯಾನ್ ಕಾರ್ಡ್ ಅನ್ನು 2.0ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ತೆರಿಗೆದಾರರು, ಉದ್ಯಮಗಳಿಗೆ ಹಣಕಾಸಿನ ವ್ಯವಹಾರವನ್ನು ಸುಧಾರಿಸುತ್ತದೆ. ಜತೆಗೆ ನಿಖರ ಮಾಹಿತಿಯನ್ನು ನೀಡುತ್ತದೆ.
ಎಲ್ಲಾ ಪ್ಯಾನ್ ಸಂಬಂಧಿತ ಸೇವೆಗಳಿಗೆ ಒನ್-ಸ್ಟಾಪ್ ಪ್ಲಾಟ್ಫಾರ್ಮ್ ಸಿಗಲಿದೆ. ಬಳಕೆದಾರರ ಡೇಟಾವನ್ನು ರಕ್ಷಿಸಲು ದೃಢವಾದ ಸುರಕ್ಷಾ ಕ್ರಮಗಳ ಅನುಷ್ಠಾನ ಆಗಲಿದೆ.
The Cabinet Committee on Economic Affairs (CCEA), chaired by Prime Minister Narendra Modi announced its approval of the PAN 2.0 Project of the Income Tax Department on Monday, November 25, 2024.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm