ಬ್ರೇಕಿಂಗ್ ನ್ಯೂಸ್
23-11-24 05:34 pm HK News Desk ದೇಶ - ವಿದೇಶ
ನವದೆಹಲಿ, ನ.23: ಭಾರೀ ನಿರೀಕ್ಷೆ ಮೂಡಿಸಿದ್ದ ಜಾರ್ಖಂಡ್ ನಲ್ಲಿ ಬಿಜೆಪಿ ಕೂಟಕ್ಕೆ ಮುಖಭಂಗ ಉಂಟಾಗಿದೆ. ಭರವಸೆಗಳ ಮಹಾಪೂರ ಹರಿಸಿದರೂ ಬುಡಕಟ್ಟು ಜನಾಂಗದ ಜನರು ಬಿಜೆಪಿ ಕೈಹಿಡಿದಿಲ್ಲ. ಹೇಮಂತ್ ಸೊರೇನ್ ಅವರ ಜೆಎಂಎಂ – ಕಾಂಗ್ರೆಸ್ ನೇತೃತ್ವದ ಸರಕಾರ ಮತ್ತೆ ಅಧಿಕಾರ ಹಿಡಿಯಲಿದೆ.
ಜೆಎಂಎಂ ಪಕ್ಷವು 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮೈತ್ರಿ ಪಕ್ಷ ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಇತ್ತ ಬಿಜೆಪಿಯು ಕೇವಲ 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 88 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಕೇವಲ 26 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಮತ್ತೊಮ್ಮೆ ಜೆಎಂಎಂ- ಕಾಂಗ್ರೆಸ್ ಮೈತ್ರಿಕೂಟ ಜಾರ್ಖಂಡಿನಲ್ಲಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.
ರಾಜ್ಯದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಾದ ಜೆಎಂಎಂ 41, ಕಾಂಗ್ರೆಸ್ 30, ಆರ್ ಜೆಡಿ ಪಕ್ಷವು 6, ಕಮ್ಯುನಿಸ್ಟ್ ಪಾರ್ಟಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 68, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 10, ಜನತಾ ದಳ 2, ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್) ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಜೆಎಂಎಂ 35, ಬಿಜೆಪಿ 20, ಕಾಂಗ್ರೆಸ್ 16, ಆರ್ ಜೆಡಿ 4 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆಯಲ್ಲಿದ್ದು ಬಹುತೇಕ ಗೆಲುವು ಸಾಧಿಸಲಿದೆ.
ಸೋದರನನ್ನೂ ಮೀರಿಸಿದ ಪ್ರಿಯಾಂಕಾ
ಉಳಿದಂತೆ, ಇದೇ ವೇಳೆ 14 ರಾಜ್ಯಗಳಲ್ಲಿ 48 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು, ಮಹಾರಾಷ್ಟ್ರದ ನಾಂದೇಡ್ ಮತ್ತು ಕೇರಳದ ವಯನಾಡಿನಲ್ಲಿ ಸಂಸತ್ ಕ್ಷೇತ್ರಗಳಿಗೆ ಮರು ಚುನಾವಣೆ ನಡೆದಿದೆ. ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ 4,81,689 ಮತಗಳ ಅಂತರ ಕಾಯ್ದುಕೊಂಡಿದ್ದು, ಸೋದರ ರಾಹುಲ್ ಗಾಂಧಿಗಿಂತಲೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವ ಸುಳಿವು ನೀಡಿದ್ದಾರೆ. ಪ್ರತಿಸ್ಪರ್ಧಿ ಸಿಪಿಐ ಪಕ್ಷದ ಸತ್ಯನ್ ಮೊಕೇರಿ 1,62,490 ಮತಗಳನ್ನು ಗಳಿಸಿದ್ದಾರೆ. ಇದೇ ವೇಳೆ, ಚೇಲಕ್ಕರ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಲ್ ಡಿಎಫ್ ಅಭ್ಯರ್ಥಿ ಯು.ಆರ್. ಪ್ರದೀಪ್, ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ರಮ್ಯಾ ಹರಿದಾಸ್ ಅವರನ್ನು 12,201 ಮತಗಳಿಂದ ಸೋಲಿಸಿದ್ದಾರೆ. ಪಾಲಕ್ಕಾಡ್ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಮಮ್ಕೂಕತ್ತಿಲ್ ಪ್ರತಿಸ್ಪರ್ಧಿ ಬಿಜೆಪಿಯ ಕೃಷ್ಣ ಕುಮಾರ್ ಅವರನ್ನು 18,840 ಮತಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.
After facing the heat following his arrest by the Enforcement Directorate (ED) in a money laundering case, Jharkhand CM and senior Jharkhand Mukti Morcha (JMM) leader Hemant Soren bounced back to bag a landslide victory in the assembly elections on Saturday. JMM-led Mahagathbandhan crossed the halfway mark as the alliance was leading on 56 seats in the Assembly election. The Bharatiya Janata Party (BJP)-led alliance is ahead on 24 seats.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am