ಬ್ರೇಕಿಂಗ್ ನ್ಯೂಸ್
10-11-24 11:33 am HK News Desk ದೇಶ - ವಿದೇಶ
ನವದೆಹಲಿ, ನ.10: ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಇರುವ ವರೆಗೂ ಧರ್ಮಾಧರಿತ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಾರ್ನ್ ಮಾಡಿದ್ದಾರೆ.
ಜಾರ್ಖಂಡ್ ರಾಜ್ಯದ ಪಲಮು ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅಮಿತ್ ಷಾ, ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿರುವುದನ್ನು ಪ್ರಸ್ತಾಪಿಸಿ ಮಾತನಾಡಿದರು. ಸಂವಿಧಾನದಲ್ಲಿ ಧರ್ಮಾಧರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲ. ನಾವು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಉಲೇಮಾಗಳ ಒಂದು ಗುಂಪು ಅಲ್ಲಿನ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ನೀಡಿ, ಹತ್ತು ಶೇಕಡಾ ಮೀಸಲಾತಿ ನೀಡಲು ಬೇಡಿಕೆ ಇಟ್ಟಿದೆ. ಅದಕ್ಕೆ ಕಾಂಗ್ರೆಸ್ ನಾಯಕರು, ಬೇಡಿಕೆಯನ್ನು ಜಾರಿಗೆ ತರಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.
ಮುಸ್ಲಿಮರಿಗೆ ಹತ್ತು ಶೇಕಡಾ ಮೀಸಲಾತಿ ನೀಡಿದರೆ, ಯಾರ ಮೀಸಲಾತಿಯನ್ನು ಕಡಿತ ಮಾಡಬೇಕಾಗುತ್ತದೆ ಎಂದು ದೇಶದ ಜನರಲ್ಲಿ ಕೇಳಬಯಸುತ್ತೇನೆ. ಹಿಂದುಳಿದ ವರ್ಗ, ದಲಿತರು ಮತ್ತು ಬುಡಕಟ್ಟು ಜನರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಕಡಿತ ಮಾಡಬೇಕಾಗುತ್ತದೆ. ರಾಹುಲ್ ಬಾಬಾನಿಗೆ ನಾನು ಇಲ್ಲಿಂದಲೇ ಎಚ್ಚರಿಕೆ ನೀಡುತ್ತೇನೆ, ನಿಮ್ಮ ತಲೆಯಲ್ಲಿ ಅದ್ಯಾವುದೇ ಹುನ್ನಾರ ಇದ್ದರೂ ಇರಬಹುದು. ಆದರೆ ಬಿಜೆಪಿ ಈ ದೇಶದಲ್ಲಿ ಇರೋ ವರೆಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಒಂದು ಏಂಟಿ ಓಬಿಸಿ ಪಾರ್ಟಿಯಾಗಿದೆ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಕಾಂಗ್ರೆಸ್ ಓಬಿಸಿ ಜನರಿಗೆ ಅನ್ಯಾಯ ಮಾಡಿದೆ. 1950ರಲ್ಲಿ ಓಬಿಸಿ ಜನರ ಕಲ್ಯಾಣಕ್ಕಾಗಿ ಕಾಕಾ ಕಲೇಳ್ಕರ್ ಸಮಿತಿಯನ್ನು ಮಾಡಲಾಗಿತ್ತು. ಆದರೆ, ಅವರು ನೀಡಿದ್ದ ವರದಿಯನ್ನೇ ಮಾಯ ಮಾಡಲಾಗಿತ್ತು. ಆಬಳಿಕ ಮಂಡಲ್ ಕಮಿಶನ್ ಓಬಿಸಿಗಳಿಗೆ ಮೀಸಲಾತಿ ನೀಡಬೇಕೆಂದು ವರದಿ ನೀಡಿದರೂ, ಇಂದಿರಾ ಮತ್ತು ರಾಜೀವ ಗಾಂಧಿ ಅದರ ಜಾರಿಗೆ ವಿರೋಧಿಸಿದ್ದರು. ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಓಬಿಸಿಗೆ 27 ಪರ್ಸೆಂಟ್ ಮೀಸಲಾತಿ ನೀಡಲು ಕಾಂಗ್ರೆಸ್ ಮುಂದಾಗಿರಲಿಲ್ಲ. 2014ರಲ್ಲಿ ಮೋದಿ ಸರಕಾರ ಬಂದ ಬಳಿಕ ಸುದೀರ್ಘ ಕಾಲದ ಬೇಡಿಕೆಯನ್ನು ಒಪ್ಪಿ ಓಬಿಸಿಗೆ 27 ಶೇಕಡಾ ಮೀಸಲಾತಿ ನೀಡಿತ್ತು. ಅಲ್ಲದೆ, ನ್ಯಾಶನಲ್ ಕಮಿಷನ್ ಫಾರ್ ಬ್ಯಾಕ್ ವರ್ಡ್ ಕ್ಲಾಸಸ್ (ಹಿಂದುಳಿದ ವರ್ಗದ ಆಯೋಗ) ಜಾರಿಗೆ ತಂದು ಸಾಂವಿಧಾನಿಕ ಮಾನ್ಯತೆ ಕೊಟ್ಟಿದ್ದು ಮೋದಿ ಸರಕಾರ ಎಂದು ಅಮಿತ್ ಷಾ ಹೇಳಿದರು.
Shah said that Congress wants to give reservation to Muslims by decreasing the reservation limit of OBCs, Dalits and tribal. Addressing a public rally in PaIamu, Jharkhand, Amit Shah said, "Congress talks about reservation, but in our constitution, there is no such provision to give reservation on the basis of religion.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm