ಬ್ರೇಕಿಂಗ್ ನ್ಯೂಸ್
17-10-24 11:16 am HK News Desk ದೇಶ - ವಿದೇಶ
ಗಾಜಿಯಾಬಾದ್, ಅ.17: ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕನ ಮೇಲಿನ ಕೋಪದಲ್ಲಿ ತನ್ನ ಮೂತ್ರವನ್ನೇ ಬಳಸಿ ಚಪಾತಿ ಹಿಟ್ಟು ತಯಾರಿಸಿ ರೊಟ್ಟಿ ಮಾಡಿಕೊಡುತ್ತಿದ್ದ ಕೃತ್ಯ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ನಿತಿನ್ ಗೌತಮ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರೀನಾ (32) ಪಾಪ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾಳೆ.
ಮನೆಯವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉದ್ಯಮಿ ನಿತಿನ್ ಗೌತಮ್ ಅವರ ಪತ್ನಿ ರೂಪಂ ಮನೆಯಲ್ಲಿ ಏನೋ ದುಷ್ಕೃತ್ಯ ನಡೆಯುತ್ತಿದೆಯಾ ಎಂದು ನೋಡಲು ಮನೆ ಕೆಲಸದಾಕೆಯ ಬಗ್ಗೆ ಶಂಕಿಸಿ ಮೊಬೈಲ್ ಕ್ಯಾಮರಾ ಇಟ್ಟಿದ್ದರು. ಮಹಿಳೆಯ ಚಲನವಲನದ ಬಗ್ಗೆ ತಪಾಸಣೆ ನಡೆಸುವ ಸಲುವಾಗಿ ಪರಿಶೀಲಿಸಿದಾ್, ಚಪಾತಿ ಹಿಟ್ಟಿಗೆ ಮಹಿಳೆ ಮೂತ್ರ ಬೆರೆಸುತ್ತಿರುವ ದೃಶ್ಯ ಪತ್ತೆಯಾಗಿದೆ. ಮಾಲೀಕರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ರೀನಾಳನ್ನು ಬಂಧಿಸಿದ್ದಾರೆ.
ಅಡುಗೆ ತಯಾರಿಸುವ ಪಾತ್ರೆಗೆ ಅದೇ ಕೊಠಡಿಯಲ್ಲಿ ಮೂತ್ರ ಮಾಡಿ, ಅದನ್ನು ಚಪಾತಿ ಹಿಟ್ಟು ತಯಾರಿಸಲು ಬಳಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೊದಲು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ ಮಹಿಳೆ ಬಳಿಕ ವಿಡಿಯೋ ತೋರಿಸಿದ ನಂತರ ಒಪ್ಪಿಕೊಂಡಿದ್ದಾಳೆ. ಮನೆ ಮಾಲೀಕರು ನನ್ನ ಮೇಲೆ ವಿನಾಕಾರಣ ಬೈಯುತ್ತಿದ್ದರು, ಆ ಕಾರಣಕ್ಕಾಗಿ ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಒಂದು ತಿಂಗಳ ಹಿಂದೆ ಜ್ಯೂಸ್ ತಯಾರಿಸಲು ತನ್ನ ಮೂತ್ರ ಬಳಸುತ್ತಿದ್ದ ಪ್ರಕರಣ ಗಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಜ್ಯೂಸ್ ಸೆಂಟರ್ ಮಾಲೀಕ ಅಮೀರ್ ಖಾನ್ ನನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶ ಸರ್ಕಾರ, ಮಾನವ ಮೂತ್ರ ಸೇರಿದಂತೆ ತ್ಯಾಜ್ಯ ಬಳಸುವುದನ್ನು, ಉಗುಳಿ ಆಹಾರ ತಯಾರಿಸುವುದನ್ನು ತಡೆಯಲು ಕಠಿಣ ಮಸೂದೆ ತರಲು ಮುಂದಾಗಿದೆ. ಮಸೂದೆಯಲ್ಲಿ ಆರೋಪಿಗಳಿಗೆ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಲು ಅವಕಾಶ ಇರಲಿದೆ.
A shocking incident has come to light from #Ghaziabad, #UttarPradesh, where a maid has been arrested for preparing food with her urine. The house help identified as #Reena was caught red handed in the kitchen urinating in a vessel.
— Hate Detector 🔍 (@HateDetectors) October 16, 2024
The incident occurred on Monday and was… pic.twitter.com/5Hi1YiKIZz
A 32-year-old domestic help was arrested by police in Uttar Pradesh's Ghaziabad on Wednesday for allegedly mixing urine in the flour dough to make chapatis (flatbread) for her employers. The woman, identified as Reena, was arrested following a complaint by one of her employers.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 02:35 pm
HK News Staffer
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm