ಬ್ರೇಕಿಂಗ್ ನ್ಯೂಸ್
21-09-24 08:05 pm HK News Desk ದೇಶ - ವಿದೇಶ
ಅಂಕೋಲಾ, ಸೆ.21: ಶಿರೂರು ಭೂಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಕೊನೆಗೂ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ.
ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.
ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ನದಿಯಾಳದಲ್ಲಿ ಸಿಕ್ಕಿ ಬಿದ್ದಿದೆ. ಟ್ರಕ್ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣು ಬಿದ್ದಿದೆ. ಹೀಗಾಗಿ ಅವುಗಳನ್ನು ತೆಗೆದು ಟ್ರಕ್ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.
ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಕೇರಳ ಮೂಲದ ಅರ್ಜುನ್ ಜೋಯಿಡಾದಿಂದ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್ ಕಡೆಗೆ ತೆರಳುತ್ತಿದ್ದರು. ಶಿರೂರು ಗುಡ್ಡದ ಬಳಿ ನಿಲ್ಲಿಸಿದ್ದಾಗಲೇ ಲಾರಿ ಸಮೇತ ಗುಡ್ಡದ ಜೊತೆಗೆ ಕುಸಿದು ಬಿದ್ದಿತ್ತು. ಆನಂತರ ಕೇರಳದ ಶಾಸಕರು, ಎನ್ ಡಿಆರ್ ಎಫ್, ನೌಕಾಪಡೆ ಸಿಬಂದಿ ಬಂದು ಕಾರ್ಯಾಚರಣೆ ನಡೆಸಿದರೂ, ಚಾಲಕ ಅರ್ಜುನ್ ಮತ್ತು ಆತನ ಲಾರಿ ಪತ್ತೆಯಾಗಿರಲಿಲ್ಲ. ಭಾರೀ ಮಳೆ ಮತ್ತು ನದಿಯಲ್ಲಿ ಹೆಚ್ಚಿದ್ದ ನೀರಿನಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರದಿಂದ ಗೋವಾದಿಂದ ದೊಡ್ಡ ಬಾರ್ಜ್ ತರಿಸಿ ಮಣ್ಣು ತೆರವು ಕಾರ್ಯ ಆರಂಭಿಸಲಾಗಿತ್ತು.
The truck of Kerala lorry driver Arjun who went missing following a landslide at Shirur village in Uttara Kannada district was discovered on Saturday, September 21 afternoon.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
13-01-26 03:37 pm
HK News Desk
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm