ಬ್ರೇಕಿಂಗ್ ನ್ಯೂಸ್
18-09-24 02:46 pm HK News Desk ದೇಶ - ವಿದೇಶ
ನವದೆಹಲಿ, ಸೆ.18: ರಸ್ತೆ ನಿರ್ಮಾಣಕ್ಕಾದ ವೆಚ್ಚಕ್ಕಿಂತ ಹೆಚ್ಚಿನ ಮೊತ್ತವನ್ನು ಟೋಲ್ ನೆಪದಲ್ಲಿ ಸಂಗ್ರಹಿಸುವ ವಿಚಾರದಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ರಸ್ತೆ ನಿರ್ಮಿಸಲು 1,900 ಕೋಟಿ ರೂ. ಖರ್ಚು ಮಾಡಿದ್ದರೆ, 8,000 ಕೋಟಿ ರೂಪಾಯಿ ಟೋಲ್ ಏಕೆ ಸಂಗ್ರಹಿಸಲಾಯಿತು? ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ್ದಾರೆ.
ಟೋಲ್ ಸಂಗ್ರಹ ಎನ್ನುವುದು ಒಂದು ದಿನದಲ್ಲಿ ನಡೆಯುವುದಿಲ್ಲ. ಲೋನ್ ಮಾಡಿ ಕಂಪನಿಗಳು ರಸ್ತೆ ಮಾಡುತ್ತವೆ. ಆನಂತರ, ಟೋಲ್ ಮೂಲಕ ಮರು ಪಾವತಿ ಮಾಡುತ್ತವೆ. ಇದು ಸಾಲ ಮಾಡಿ ಕಾರು ಅಥವಾ ಮನೆ ಖರೀದಿ ಮಾಡಿದಂತೆ. ಪೂರ್ಣ ಮೊತ್ತ ನೀಡಿ ಕಾರು ಖರೀದಿಸಲು 2.5 ಲಕ್ಷ ರೂ. ಆಗಿದ್ದರೆ, ನೀವು ಸಾಲ ಪಡೆದು 10 ವರ್ಷಗಳ ವರೆಗೆ ತೀರಿಸುತ್ತ ಬಂದರೆ ಅದರ ಮೌಲ್ಯ 5ರಿಂದ 6 ಲಕ್ಷ ರೂ. ಆಗುತ್ತದೆ. ಪ್ರತಿ ತಿಂಗಳು ಬಡ್ಡಿ ಕಟ್ಟುವುದರಿಂದ ಇದರ ಒಟ್ಟು ಮೊತ್ತ ಹೆಚ್ಚಳವಾಗುತ್ತದೆ ಎಂದು ಹೇಳಿದರು.
ದೆಹಲಿ -ಜೈಪುರ ಹೆದ್ದಾರಿ NH-8 ರಲ್ಲಿ ಎಂಟು ಸಾವಿರ ಕೋಟಿ ಟೋಲ್ ವಸೂಲಿ ಮಾಡಲಾಗಿದೆ ಎಂಬ ಆರ್ಟಿಐ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ, ಈ ರಸ್ತೆಯನ್ನು 2009ರಲ್ಲಿ ಯುಪಿಎ ಸರ್ಕಾರ ಮಂಜೂರು ಮಾಡಿತ್ತು. 9 ಬ್ಯಾಂಕ್‌ಗಳಿಂದ ಸಾಲದ ಮೂಲಕ ಹೂಡಿಕೆ ಆಗಿತ್ತು. ರಸ್ತೆ ನಿರ್ಮಾಣಕ್ಕೆ ಹಲವು ಸಮಸ್ಯೆಗಳಿದ್ದವು. ಬ್ಯಾಂಕ್‌ಗಳು ಹಣ ಪಾವತಿಗಾಗಿ ನ್ಯಾಯಾಲಯದಲ್ಲಿ ಕೇಸು ಹಾಕಿದ್ದವು. ಇದರಿಂದ ತೊಡಕಾಗಿತ್ತು ಎಂದು ವಿವರಿಸಿದರು.
ಆರ್‌ಟಿಐಗೆ ಪ್ರತಿಕ್ರಿಯೆಯಾಗಿ, ರಾಜಸ್ಥಾನದಲ್ಲಿ ಟೋಲ್ ಸಂಗ್ರಹದ ಮೂಲಕ ಸುಮಾರು 8 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಹೆದ್ದಾರಿಯ ನಿರ್ಮಾಣಕ್ಕೆ ಸುಮಾರು 1,900 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ಇದು ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಮನೋಹರಪುರ ಟೋಲ್ ಪ್ಲಾಜಾಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.
Union Road and Transport Minister Nitin Gadkari responded to complaints of excessive toll collection on Monday at News18 Chaupal with an interesting example. Asked why Rs 8,000 crore is being collected as toll tax when the cost of road construction was only Rs 1,900 crore, the Union Minister said that toll taxes are not collected in a day and there are several expenses that need to be borne by the government both before toll collection and after it.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm