ಬ್ರೇಕಿಂಗ್ ನ್ಯೂಸ್
06-09-24 07:41 pm HK News Desk ದೇಶ - ವಿದೇಶ
ಪುಣೆ, ಸೆ.6: ನಾವು ದೇವರಾಗುತ್ತೇವೋ ಇಲ್ಲವೋ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ನಾವಾಗಿಯೇ ದೇವರಾಗುತ್ತೇವೆ ಎನ್ನುವುದನ್ನು ಹೇಳಿಕೊಳ್ಳಬಾರದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ನಡೆಗಳ ಬಗ್ಗೆ ಮತ್ತೆ ಕುಟುಕಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತರಾಗಿ ಮಣಿಪುರದಲ್ಲಿ ಸುದೀರ್ಘ ಕಾಲ ಸೇವೆಗೈದು ಹುತಾತ್ಮರಾಗಿದ್ದ ಶಂಕರ್ ದಿನ್ಕರ್ ಕಾಣೆ ಅವರ ಸ್ಮರಣಾರ್ಥ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿದ್ದಾರೆ. ಶಂಕರ್ ದಿನ್ಕರ್ ಕಾಣೆ ಆರೆಸ್ಸೆಸ್ ವಲಯದಲ್ಲಿ ಭಯ್ಯಾಜಿ ಎಂದೇ ಹೆಸರಾಗಿದ್ದರು.
ಕೆಲವು ಜನರು ಮೌನದಲ್ಲಿರುವುದಕ್ಕಿಂತ ಹೆಚ್ಚಾಗಿ ತಾವು ಮಿಂಚಿನಂತೆ ಹೊಳೆಯುತ್ತಿರಬೇಕು ಎಂದು ಆಲೋಚಿಸುತ್ತಾರೆ. ಆದರೆ ನಿಜಕ್ಕಾದರೆ ಮಿಂಚು ಹರಿದ ಬಳಿಕ ಮೊದಲಿಗಿಂತ ಹೆಚ್ಚು ಕತ್ತಲು ಆವರಿಸುತ್ತದೆ. ನಮ್ಮ ಕಾರ್ಯಕರ್ತರು ಸಂದರ್ಭ ಬಂದಾಗ ತಮ್ಮನ್ನು ಸುಟ್ಟುಕೊಳ್ಳುವುದಕ್ಕೆ ತಯಾರಾಗಬೇಕು ಎಂದು ಭಾಗವತ್ ಹೇಳಿದ್ದಾರೆ. ಮಣಿಪುರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 1971ರ ವರೆಗೆ ಶಂಕರ್ ದಿನ್ಕರ್ ಅಪಾರ ಕೆಲಸ ಮಾಡಿದ್ದರು. ಹಲವಾರು ಮಕ್ಕಳನ್ನು ಮಹಾರಾಷ್ಟ್ರಕ್ಕೂ ಕರೆತಂದು ಶಿಕ್ಷಣದ ವ್ಯವಸ್ಥೆ ಮಾಡಿದ್ದರು.
ಈಗಿನ ಮಣಿಪುರದ ಸ್ಥಿತಿಯನ್ನು ಉಲ್ಲೇಖಿಸಿದ ಭಾಗವತ್, ಅತ್ಯಂತ ಕಷ್ಟದ ದಿನಗಳನ್ನು ಮಣಿಪುರದ ಜನರು ಎದುರಿಸುತ್ತಿದ್ದಾರೆ. ಭದ್ರತೆಯ ಬಗ್ಗೆ ಜನರಿಗೆ ಖಾತರಿಯಿಲ್ಲ. ಸ್ಥಳೀಯರೇ ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಉದ್ಯೋಗ, ಇನ್ನಿತರ ಉದ್ದೇಶಕ್ಕೆ ಹೊರಗಿನಿಂದ ಹೋದವರು ಇನ್ನಷ್ಟು ಸವಾಲಿನ ದಿನಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲೂ ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಎನ್ ಜಿಓ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿನ ಜನರ ನಂಬಿಕೆ ಉಳಿಸಿಕೊಂಡಿದೆ. ಸಂಘರ್ಷಕ್ಕಿಳಿದ ಎರಡೂ ಕಡೆಯ ಜನರಲ್ಲಿ ಮಾತುಕತೆ ನಡೆಸುತ್ತಿದ್ದು, ಶಾಂತಿಯತ್ತ ತರುತ್ತಿದೆ. ಹಿಂಸೆಯನ್ನು ಬಿಟ್ಟು ಅರ್ಧಕ್ಕೆ ಹಿಂತಿರುಗಿ ಬರಲು ಆಗುವುದಿಲ್ಲ. ಅಲ್ಲಿ ಶಾಂತಿ ಸ್ಥಾಪನೆಯೇ ಸಂಘದ ಧ್ಯೇಯ ಎಂದು ಭಾಗವತ್ ಹೇಳಿದ್ದಾರೆ.
Rashtriya Swayamsevak Sangh (RSS) chief Mohan Bhagwat, speaking at an event in Pune, said, "Whether we will become God or not, people will decide. We should not proclaim that we have become God." The RSS chief made the remarks at an event commemorating the work of Shankar Dinkar Kane, popularly known as Bhaiyyaji, in Manipur in 1971.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am