ಬ್ರೇಕಿಂಗ್ ನ್ಯೂಸ್
04-09-24 05:44 pm HK News Desk ದೇಶ - ವಿದೇಶ
ಟೆಕ್ಸಾಸ್, ಸೆ 04: ಅಮೆರಿಕದ ಅನ್ನಾದಲ್ಲಿ ಆ. 30ರಂದು ವಾಹನಗಳ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ತೆಲಂಗಾಣದ ಮೂವರು ಸೇರಿದಂತೆ ನಾಲ್ವರು ಭಾರತೀಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳು ಹೈದರಾಬಾದ್‌ನ ಕುಕಟ್‌ಪಲ್ಲಿ ಉಪನಗರದ ಆರ್ಯನ್ ರಘುನಾಥ್ ಒರಂಪಟ್ಟಿ, ಅವರ ಸ್ನೇಹಿತ ಫಾರೂಕ್ ಶೇಖ್, ಲೋಕೇಶ್ ಪಾಲಾಚಾರ್ಲಾ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವ್ ಎಂದು ಗುರುತಿಸಲಾಗಿದೆ.
ಬೆಂಟೊನ್‌ವಿಲ್ಲೆಗೆ ಪ್ರಯಾಣಿಸಲು ನಾಲ್ವರು ಕಾರ್‌ಪೂಲಿಂಗ್ ಅಪ್ಲಿಕೇಶನ್ ಮೂಲಕ ಸಂಪರ್ಕ ಹೊಂದಿದ್ದರು. ಐದು ವಾಹನಗಳ ಘರ್ಷಣೆಯ ವೇಳೆ ವೇಗವಾಗಿ ಬಂದ ಟ್ರಕ್ ಅಪ್ಪಳಿಸಿ ಭೀಕರ ಅವಘಡ ಸಂಭವಿಸಿದೆ. ಭಾರತೀಯರು ಪ್ರಯಾಣಿಸುತ್ತಿದ್ದ ಎಸ್ ಯುವಿ ಗೆ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ನಾಲ್ವರು ಸುಟ್ಟು ಕರಕಲಾಗಿದ್ದಾರೆ.
ಓರಂಪಟ್ಟಿ ಮತ್ತು ಶೇಖ್ ಅವರು ಡಲ್ಲಾಸ್‌ನಲ್ಲಿರುವ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ದರ್ಶಿನಿ ವಾಸುದೇವ್ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅರ್ಕಾನ್ಸಾಸ್‌ನಲ್ಲಿರುವ ಚಿಕ್ಕಪ್ಪನನ್ನು ಭೇಟಿ ಮಾಡಲು ಹೊರಟಿದ್ದರು.
ಓರಂಪತಿ ತಂದೆ ಸುಭಾಷ್ ಚಂದ್ರ ರೆಡ್ಡಿ ಅವರು ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಆರ್ಯನ್ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವಕ್ಕಾಗಿ ಅವರ ಪೋಷಕರು ಮೇ ತಿಂಗಳಲ್ಲಿ ಯುಎಸ್‌ನಲ್ಲಿದ್ದರು. ಘಟಿಕೋತ್ಸವದ ನಂತರ ಅವರು ಭಾರತಕ್ಕೆ ಮರಳುವುದಿತ್ತು ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.
A multi-vehicle collision in Anna, Texas, has claimed the lives of four Indian nationals, including three from Telangana. The four had connected through a carpooling app for their journey to Bentonville, US. The collision, which involved five vehicles, occurred when a speeding truck reportedly failed to slow down and rear-ended the SUV they were travelling in, causing it to burst into flames.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm