ಬ್ರೇಕಿಂಗ್ ನ್ಯೂಸ್
22-08-24 09:58 pm HK News Desk ದೇಶ - ವಿದೇಶ
ನವದಹೆಲಿ, ಆಗಸ್ಟ್ 22: ಬಾಂಗ್ಲಾ ಕುರಿತು ಅಣಕಿಸಿ ಸುದ್ದಿ ಮಾಡಿದ್ದಕ್ಕಾಗಿ ಜೀ ನ್ಯೂಸ್ ಮೀಡಿಯಾ ವೆಬ್ ಸೈಟನ್ನು ಹ್ಯಾಕ್ ಮಾಡಲಾಗಿದೆ. ಬಾಂಗ್ಲಾದೇಶ ಪರವಾದ ಹ್ಯಾಕರ್ ಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಗೂಗಲ್ ನಲ್ಲಿ ಜೀ ಮೀಡಿಯಾ ನ್ಯೂಸ್ ವೆಬ್ ಸರ್ಚ್ ಮಾಡಿದರೆ, ‘’Hacked by SYSTEMADMINBD’’ ಎಂಬುದಾಗಿ ಪೇಜ್ ತೆರೆದುಕೊಳ್ಳುತ್ತದೆ. ಬಾಂಗ್ಲಾದೇಶದ ಬಗ್ಗೆ ಅಣಕಿಸಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಜೀ ಮೀಡಿಯಾ ಸೈಟ್ ಅನ್ನು ಹ್ಯಾಕ್ ಮಾಡಿದ್ದೇವೆ. ಇವರು ಇದೇ ರೀತಿಯ ಕುಹಕತನ ಮುಂದುವರಿಸಿದರೆ, ಅವರ ಸುದ್ದಿ ಚಾನೆಲನ್ನೇ ಮುಗಿಸುತ್ತೇವೆ ಎಂದು ಅದೇ ಪುಟದಲ್ಲಿ ಬೆದರಿಕೆ ಒಡ್ಡಲಾಗಿದೆ.
2024ರ ಆಗಸ್ಟ್ 21ರಂದು ವೆಬ್ ಹ್ಯಾಕ್ ಆಗಿರುವುದನ್ನು ತೋರಿಸುತ್ತಿದ್ದು, ಅದರಲ್ಲಿ ಜೀ ಟಿವಿ ಬಾಂಗ್ಲಾ ನ್ಯೂಸ್ ನಲ್ಲಿ ನೀಡಲಾಗಿರುವ ಹೆಡ್ ಲೈನಿನ ಸ್ಕ್ರೀನ್ ಶಾಟ್ ಕೊಡಲಾಗಿದೆ. India left the water, Bangladesh is floating ಎಂದು ಕೊಡಲಾಗಿದ್ದ ಸುದ್ದಿ ಹೆಡಿಂಗನ್ನು ಇವರು ಆಕ್ಷೇಪಿಸಿದ್ದಾರೆ. ಆ ಸುದ್ದಿಯಲ್ಲಿ ಭಾರತದ ಕಡೆಯಿಂದ ನೀರು ಬಿಡಲಾಗಿದ್ದು, ಡಾಂಬೂರ್ ಅಣೆಕಟ್ಟು ಪ್ರಾಜೆಕ್ಟ್ ನಲ್ಲಿ ನೀರನ್ನು ಭಾರೀ ಪ್ರಮಾಣದಲ್ಲಿ ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾನ್ನರು ನೀರಿನಲ್ಲಿ ಮುಳುಗಲಿದ್ದಾರೆ ಎಂದು ಬರೆಯಲಾಗಿತ್ತು.
SYSTEMADMINBD ಎನ್ನುವ ಹ್ಯಾಕರ್ಸ್ ತಂಡ 2023ರಲ್ಲಿ ಕಾರ್ಯಾಚರಣೆಯಲ್ಲಿದ್ದು, ಇಸ್ರೇಲ್, ಭಾರತ, ಬಾಂಗ್ಲಾಕ್ಕೆ ಸಂಬಂಧಪಟ್ಟ ಉದ್ಯಮಗಳು, ಸರಕಾರಿ ಒಡೆತನದ ಕಂಪನಿಗಳ ವೆಬ್ ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಯುರೋಪ್ ದೇಶಗಳಲ್ಲಿಯೂ ಇವರ ಹಾವಳಿ ಇದೆ. ಇದೇ ಮೊದಲ ಬಾರಿಗೆ ಭಾರತದ ಬಹುದೊಡ್ಡ ಮಾಧ್ಯಮ ಸಂಸ್ಥೆಯ ವೆಬ್ ಸೈಟನ್ನೇ ಹ್ಯಾಕ್ ಮಾಡಿದೆ.
The official website of Zee Media Corporation has been hacked and defaced allegedly by a Bangladeshi hackers group, as claimed in a message displayed on the homepage of the website.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm