ಬ್ರೇಕಿಂಗ್ ನ್ಯೂಸ್
07-08-24 06:01 pm HK News Desk ದೇಶ - ವಿದೇಶ
ಢಾಕಾ, ಆಗಸ್ಟ್.7: ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ದೇಶ ತೊರೆದರೂ, ಬಾಂಗ್ಲಾದಲ್ಲಿ ಹಿಂಸೆ ನಿಂತಿಲ್ಲ. ಹಿಂಸಾಕೋರರ ಕಿಚ್ಚಿಗೆ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಪ್ರಮುಖರು, ಬೆಂಬಲಿಗರು ಟಾರ್ಗೆಟ್ ಆಗಿದ್ದಾರೆ. ಅವಾಮಿ ಲೀಗ್ ಪಕ್ಷದ ನಾಯಕರ ಕಚೇರಿ, ಅವರಿಗೆ ಸೇರಿದ ಉದ್ಯಮ ಸಂಸ್ಥೆಗಳಿಗೆ ದಾಳಿ ಮಾಡಿದ್ದಾರೆ. ಢಾಕಾ ಸೇರಿದಂತೆ ವಿವಿಧ ಕಡೆಗಳಲ್ಲಿ ಅವಾಮಿ ಲೀಗ್ ಪಕ್ಷಕ್ಕೆ ಸೇರಿದ 29 ನಾಯಕರ ಶವಗಳು ಸಿಕ್ಕಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಕುಮಿಲಾ ಎಂಬಲ್ಲಿ ಮಾಜಿ ಕೌನ್ಸಿಲರ್ ಮಹಮ್ಮದ್ ಶಾ ಅಸ್ಲಾಂ ಎಂಬವರ ಮೂರು ಅಂತಸ್ತಿನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಕುಟುಂಬ ಸದಸ್ಯರು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಅವಾಮಿ ಪಕ್ಷದ ನಾಯಕರಾದ ಮಹಮ್ಮದ್ ಶಾ ಅವರೂ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ಕೆಲವು ಕಿಡಿಗೇಡಿಗಳು ಮನೆಯ ಮೇಲೆ ಕಲ್ಲುತೂರಾಟ ನಡೆಸಿ ಕೆಳಭಾಗದಿಂದ ಬೆಂಕಿ ಹಾಕಿದ್ದರು. ಈ ವೇಳೆ, ಮನೆಯಲ್ಲಿದ್ದವರು ಎರಡನೇ ಮಹಡಿಗೆ ಬಂದು ಅವಿತುಕೊಂಡಿದ್ದರು. ಬೆಂಕಿಯ ಜ್ವಾಲೆ ಮತ್ತು ಹೊಗೆಯಿಂದಾಗಿ ಮನೆಯ ಒಳಗಿದ್ದವರು ಉಸಿರುಕಟ್ಟಿ ದುರಂತ ಸಾವಿಗೀಡಾಗಿದ್ದಾರೆ. ಇದರಲ್ಲಿ ಐದು ಮಂದಿ ಅಪ್ರಾಪ್ತ ವಯಸ್ಕರು ಎಂದು ಢಾಕಾ ಟ್ರಿಬ್ಯುನ್ ಪತ್ರಿಕೆ ತಿಳಿಸಿದೆ.
ಅವಾಮಿ ಲೀಗ್ ಸಂಸದ ಶಫೀಕುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಬೆಂಕಿ ಹಾಕಿದ್ದರಿಂದ ನಾಲ್ಕು ಮಂದಿ ಕುಟುಂಬ ಸದಸ್ಯರು ಸಾವಿಗೀಡಾಗಿದ್ದಾರೆ. ಮನೆಯ ಬಾಲ್ಕನಿ, ಕೋಣೆಗಳಲ್ಲಿ ಮೃತದೇಹಗಳು ಬಿದ್ದುಕೊಂಡಿದ್ದವು. ಅವಾಮಿ ಲೀಗ್ ಪಕ್ಷದ ಯೂತ್ ವಿಂಗ್ ಆಗಿರುವ ಜುಬೋ ಲೀಗ್ ನಾಯಕರಾದ ಮುಷ್ಭಿಕುರ್ ರಹೀಂ ಅವರ ಶವ ಸೋನಗಾಜಿ ಎಂಬಲ್ಲಿನ ಸೇತುವೆಯೊಂದರ ಕೆಳಗೆ ಪತ್ತೆಯಾಗಿದೆ. ಬೋಗ್ರಾ ಎಂಬಲ್ಲಿ ಇಬ್ಬರು ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರನ್ನು ಇರಿದು ಕೊಲೆ ಮಾಡಲಾಗಿದೆ. ಲಾಲ್ ಮೋನಿರ್ಹಾತ್ ಎಂಬಲ್ಲಿ ಅವಾಮಿ ಪಕ್ಷದ ಜಿಲ್ಲಾ ಸೆಕ್ರೆಟರಿ ಆಗಿದ್ದ ಸುಮನ್ ಖಾನ್ ಎಂಬವರ ಮನೆಗೆ ಬೆಂಕಿ ಹಚ್ಚಿದ್ದು, ಆರು ಮಂದಿ ಕುಟುಂಬಸ್ಥರ ಶವಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಸೀನಾ ದೇಶ ತೊರೆದ ಬಳಿಕ ಎರಡು ದಿನಗಳಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅವಾಮಿ ಲೀಗ್ ಪಕ್ಷದ ಪ್ರಮುಖರ ಉದ್ಯಮಗಳನ್ನು ನಾಶಪಡಿಸಲಾಗಿದೆ. ಇದೇ ವೇಳೆ, ಹಿಂದುಗಳ ದೇವಸ್ಥಾನ, ಸಿಕ್ಖರ ಮಂದಿರಗಳೂ ಟಾರ್ಗೆಟ್ ಆಗಿದ್ದು ಶೇಖ್ ಹಸೀನಾ ಪರವಾಗಿದ್ದವರನ್ನು ಉದ್ರಿಕ್ತರು ಬೆಂಕಿ ಹಚ್ಚಿ ಜೀವಂತ ಕೊಲ್ಲುತ್ತಿದ್ದಾರೆ. ಸೋಮವಾರ ರಾತ್ರಿ ಅವಾಮಿ ಪಕ್ಷದ ನಾಯಕರೊಬ್ಬರಿಗೆ ಸೇರಿದ ಹೊಟೇಲಿಗೆ ಬೆಂಕಿ ಹಚ್ಚಿದ್ದರಿಂದ ಅದರಲ್ಲಿದ್ದ 24 ಮಂದಿ ಸಜೀವ ದಹನಗೊಂಡಿದ್ದಾರೆ. ಹಸೀನಾ ಪಕ್ಷದಲ್ಲಿ ಗುರುತಿಸಿದ್ದ ಹಿಂದು ನಾಯಕರನ್ನೂ ಕೊಲ್ಲಲಾಗಿದೆ.
ಸೇನೆ ಆಡಳಿತವನ್ನು ವಶಕ್ಕೆ ಪಡೆದಿದ್ದರೂ, ಬಾಂಗ್ಲಾದಲ್ಲಿ ಹಿಂಸೆ ನಿಂತಿಲ್ಲ. ಇಡೀ ದೇಶದಲ್ಲಿ ಅರಾಜಕತೆ ತಲೆದೋರಿದ್ದು, ಹಂಗಾಮಿ ಸರಕಾರ ರಚನೆಗೂ ಕಸರತ್ತು ನಡೆದಿದೆ. ಹೋರಾಟ ನಿರತ ವಿದ್ಯಾರ್ಥಿ ನಾಯಕರು ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ದೊರಕಿಸಿದ್ದ ಕಾರಣಕ್ಕೆ ನೊಬೇಲ್ ವಿಜೇತರಾಗಿದ್ದ 84 ವರ್ಷದ ಮೊಹಮ್ಮದ್ ಯೂನಿಸ್ ಅವರನ್ನು ಹಂಗಾಮಿ ಸರಕಾರದ ಮುಖ್ಯಸ್ಥನಾಗಿ ನೇಮಿಸಬೇಕೆಂದು ಆಗ್ರಹ ಮಾಡಿದ್ದಾರೆ. ಬಾಂಗ್ಲಾದಲ್ಲಿ ಹೊಸ ಸರಕಾರ ನಡೆಸುವುದಕ್ಕಾಗಿ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ. ಆ ಹುದ್ದೆಗೀಗ ಮೊಹಮ್ಮದ್ ಯೂನಿಸ್ ಅವರನ್ನು ಬಾಂಗ್ಲಾ ಅಧ್ಯಕ್ಷರು ನೇಮಕ ಮಾಡಿದ್ದಾರೆ.
At least 24 people, including an Indonesian national, were burnt alive by a mob in Bangladesh at a starred hotel owned by a leader of Awami League party after its leader Sheikh Hasina resigned as prime minister and fled the country, local journalists and hospital sources said on Tuesday. The victims, mostly boarders, were burnt alive late on Monday night as the mob set afire Zabir International Hotel owned by district Awami League general secretary Shahin Chakkladar in Joshor district.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm