ಬ್ರೇಕಿಂಗ್ ನ್ಯೂಸ್
22-07-24 01:24 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಜುಲೈ 22: 7ನೇ ತರಗತಿ ವಿದ್ಯಾರ್ಥಿಯೊಬ್ಬ ರೀಲ್ಸ್ ಮಾಡಲು ತನ್ನ ಕುತ್ತಿಗೆಗೆ ದಾರ ಕಟ್ಟಿಕೊಂಡಿದ್ದ. ಆದರೆ ಅದು ಬಿಗಿದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೃತನನ್ನ 11 ವರ್ಷದ ಕರಣ್ ಪರ್ಮಾರ್ ಎಂದು ಗುರುತಿಸಲಾಗಿದೆ. ಕರಣ್ ಲೇನೆ ರಸ್ತೆಯ ಖಾಲಿ ಜಾಗದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಅದೇ ಸಮಯದಲ್ಲಿರೀಲ್ಸ್ ಮಾಡಲು ದಾರವನ್ನು ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ. ದುರದೃಷ್ಟವಶಾತ್, ಆ ವೇಳೆ ದಾರ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಅವನ ಪ್ರಾಣಪಕ್ಷಿ ಹಾರಿಹೋಗಿದೆ.
ಅವನೊಂದಿಗೆ ಆಟವಾಡುತ್ತಿದ್ದ ಸ್ನೇಹಿತರು ಅವನು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ನಟನೆ ಎಂದು ತಪ್ಪಾಗಿ ಭಾವಿಸಿದರು. ಹಾಗಾಗಿ ಅವರಿಗೆ ಅದು ನಿಜ ಎಂದು ತಿಳಿಯುವ ಹೊತ್ತಿಗೆ ಕರಣ್ ಸಾವನಪ್ಪಿದ್ದ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮರಕ್ಕೆ ನೇತಾಡುತ್ತಿರುವ ನೂಲನ್ನು ಮೊದಲು ಕಾಣಬಹುದು. ಅದಕ್ಕೆ ಕರಣ್ ತನ್ನ ಕುತ್ತಿಗೆಗೆ ಹಾಕಿ, ನಂತರ ಒದ್ದಾಡುತ್ತಿರುವಂತೆ ನಟಿಸುತ್ತಿದ್ದರೆ, ಈ ಅಪಾಯದ ಬಗ್ಗೆ ಅರಿವಿಲ್ಲದ ಆತನ ಸ್ನೇಹಿತರು ಅವನು ಕೇವಲ ನಟಿಸುತ್ತಿದ್ದಾರೆ ಎಂದು ನಂಬಿದ್ದರು. ನಂತರ ನಿಜ ಅರಿತುಕೊಂಡ ಸ್ನೇಹಿತರು ಅವನ ಬಳಿಗೆ ಬರುವುದರೊಳಗೆ ಆತ ಸಾವನಪ್ಪಿರುವುದು ತಿಳಿದಿದೆ. ಗಾಬರಿಗೊಂಡ ಅವರು ಫೋನ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ವರದಿ ಪ್ರಕಾರ, ಕರಣ್ ಪರ್ಮಾರ್ 7 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಯಿಂದ ಹಿಂದಿರುಗಿದ ನಂತರ, ಲೇನ್ ರಸ್ತೆಯಲ್ಲಿರುವ ತನ್ನ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ಆಟವಾಡಲು ಹೋಗಿದ್ದ. ಎತ್ತರದ ಗೋಡೆಯ ಮೇಲೆ ನಿಂತು, ಕುತ್ತಿಗೆಗೆ ನೂಲನ್ನು ಹಾಕಿಕೊಂಡು ವಿಡಿಯೊ ಮಾಡುತ್ತಿದ್ದ, ಆಗ ಜಾರಿ ಬಿದ್ದ ಪರಿಣಾಮ ಹಗ್ಗ ಬಿಗಿಯಾಗಿ ಉಸಿರುಗಟ್ಟಿ ಸಾವನಪ್ಪಿದ. ವಿಚಾರ ತಿಳಿದ ನಂತರ, ಕರಣ್ ಮನೆಯವರು ಸ್ಥಳಕ್ಕೆ ಬಂದು, ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯದರು. ಅಲ್ಲಿ ವೈದ್ಯರು ಅವನು ಸತ್ತಿದ್ದಾನೆ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಅಂಬಾ ಪೊಲೀಸರು ಸಿವಿಲ್ ಆಸ್ಪತ್ರೆಗೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
11-Year-Old Dies While Making a Reel with Noose In Morena; Friends Mistake Suffocation for Acting#MPNews #MadhyaPradesh #Reel #reelsinstagram #reels #instagram #INSTA #Meta pic.twitter.com/YPtiWvK0d7
— Siraj Noorani (@sirajnoorani) July 21, 2024
A minor boy died in Madhya Pradesh's Monera district while attempting a 'suicide' stunt for a social media reel. Reportedly, on June 21, 11-year-old Karan Parmar was playing with his friends on an empty plot near his house after returning from school.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 08:39 pm
Mangalore Correspondent
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm