ಬ್ರೇಕಿಂಗ್ ನ್ಯೂಸ್
29-06-24 02:56 pm HK News ದೇಶ - ವಿದೇಶ
ನವದೆಹಲಿ, ಜೂನ್ 29: ನೀಟ್ ಪೇಪರ್ ಸೋರಿಕೆ ಹಗರಣ ವಿವಾದ ಬಿಸಿ ಏರುತ್ತಿರುವಾಗಲೇ ಇತ್ತೀಚೆಗೆ ರದ್ದುಗೊಂಡಿದ್ದ UGC-NET ಪರೀಕ್ಷೆಗೆ ಹೊಸ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಮರು ಪರೀಕ್ಷೆಯನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4ರ ನಡುವೆ ಆಯೋಜಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದ ಎರಡೇ ದಿನದಲ್ಲಿ (ನೆಟ್) ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಪ್ರಕಾರ, UGC NET 2024ರ ಜೂನ್ ಪರೀಕ್ಷೆಯನ್ನು ಆಗಸ್ಟ್ 21 ರಿಂದ 2024ರ ಸೆಪ್ಟೆಂಬರ್ 4ರ ನಡುವೆ ನಡೆಸಲಾಗುವುದು. ಕಳೆದ ಬಾರಿ ಪೆನ್ ಮತ್ತು ಪೇಪರ್ ಮೂಲಕ ಪರೀಕ್ಷೆ ನಡೆದಿತ್ತು. ಈ ಬಾರಿ ಪರೀಕ್ಷೆಗಳು ಸಂಪೂರ್ಣ ಕಂಪ್ಯೂಟರ್ ಆಧರಿತ ಆಗಿರುತ್ತದೆ.
ಇದೇ ವೇಳೆ, NCET 2024 ಪರೀಕ್ಷೆ ಜುಲೈ 10 ರಂದು ನಡೆಯಲಿದೆ. ಜಂಟಿ CSIR UGC NET ಅನ್ನು ಜುಲೈ 25 ರಿಂದ 27ರ ವರೆಗೆ ನಡೆಸಲಾಗುವುದು. ಅದೇ ಸಮಯದಲ್ಲಿ, ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಈ ಹಿಂದೆ ಮುಂದೂಡಲಾಗಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಎನ್‌ಸಿಇಟಿ) ಈಗ ಜುಲೈ 10 ರಂದು ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.
ನೆಟ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಆದರೆ ಪೇಪರ್ ಲೀಕ್ ಹಿನ್ನಲೆ ಮಾರನೇ ದಿನ ರದ್ದುಗೊಳಿಸಲಾಗಿತ್ತು. ಎರಡು ಶಿಫ್ಟ್ ಗಳಲ್ಲಾಗಿ ಪರೀಕ್ಷೆ ದೇಶದ 317 ನಗರಗಳಲ್ಲಿ ನಡೆದಿದ್ದು 9 ಲಕ್ಷದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನೆಟ್ ಮತ್ತು ನೀಟ್ ಪರೀಕ್ಷೆಗಳ ಬಗ್ಗೆ ಸಿಬಿಐ ತನಿಖೆ ನಡೆದುತ್ತಿದೆ.
The National Testing Agency (NTA) has announced the new dates for the University Grants Commission-National Eligibility Test (UGC-NET) 2024 June session exam. The NCET 2024 exam will be held on July 10. While the Joint CSIR UGC NET will conducted during July 25-27, the UGC NET June 2024 Cycle will be held between August 21 and September 4.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm