ಬ್ರೇಕಿಂಗ್ ನ್ಯೂಸ್
25-06-24 08:25 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 25: 18ನೇ ಲೋಕಸಭೆಯಲ್ಲಿ ಸ್ಪೀಕರ್ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಒಂದು ದಿನ ಕಾಯಬೇಕು. ಜೂನ್ 26ರ ಬುಧವಾರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮಂಗಳವಾರವೇ ಪ್ರಕ್ರಿಯೆ ಆರಂಭಗೊಂಡಿದೆ. ಎನ್ ಡಿಎ ಮೈತ್ರಿ ಕೂಟದಿಂದ ಈ ಹಿಂದಿನ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ, ಸ್ಪೀಕರ್ ಸ್ಥಾನ ಅವಿರೋಧ ಆಯ್ಕೆ ಆಗುತ್ತೆ ಎಂಬ ಕುತೂಹಲದ ನಡುವೆಯೇ ಇಂಡಿಯಾ ಒಕ್ಕೂಟದಿಂದಲೂ ಅಭ್ಯರ್ಥಿ ಇಳಿಸಿದ್ದು, ಕೇರಳದ ಎಂಟು ಬಾರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಕೋಡಿಕುನ್ನಿಲ್ ಸುರೇಶ್ ಮಾವೇಲಿಕ್ಕರ ಕ್ಷೇತ್ರದ ಸಂಸದರಾಗಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಸಂಸದರಾಗಿದ್ದ ಸುರೇಶ್ ಆನಂತರ, 1991, 1996 ಮತ್ತು 1999ರಲ್ಲಿ ಅಡೂರು ಕ್ಷೇತ್ರದಿಂದ ಸಂಸದರಾಗಿದ್ದರು.
ಸಂಸತ್ತಿನಲ್ಲಿ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದಲ್ಲಿ 293 ಸದಸ್ಯರಿದ್ದು ಪೂರ್ಣ ಬಹುಮತ ಇದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು 234 ಸದಸ್ಯರನ್ನು ಹೊಂದಿದೆ. ಕೆಲವು ಪಕ್ಷೇತರ ಸದಸ್ಯರು ಕಾಂಗ್ರೆಸ್ ಪರ ಇದ್ದಾರೆ. ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ವಿರೋಧ ಪಕ್ಷಕ್ಕೆ ಬಿಟ್ಟುಕೊಟ್ಟಲ್ಲಿ ಸ್ಪೀಕರ್ ಸ್ಥಾನದ ಅವಿರೋಧ ಆಯ್ಕೆಗೆ ಸಹಕರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಆಡಳಿತದ ಬಿಜೆಪಿ ನಾಯಕರು ಉಪ ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸಿಗೆ ಬಿಟ್ಟು ಕೊಡಲು ತಯಾರಿಲ್ಲ. ಇದು ತಿಳಿಯುತ್ತಿದ್ದಂತೆ, ಕಾಂಗ್ರೆಸ್ ತನ್ನ ಹಿರಿಯ ಸಂಸದ 62 ವರ್ಷದ ಕೋಡಿಕುನ್ನಿಲ್ ಸುರೇಶ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕಣಕ್ಕಿಳಿಸಿದೆ. ಒಡಿಶಾದ ಬಿಜೆಡಿಯೂ ಕಾಂಗ್ರೆಸ್ ಬೆಂಬಲಕ್ಕಿದ್ದು, ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗುವಂತೆ ಮಾಜಿ ಸಿಎಂ ನವೀನ್ ಪಟ್ನಾಯಕ್ ಕರೆ ನೀಡಿದ್ದಾರೆ.
ಜೂನ್ 25ರ ಮಂಗಳವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಪ್ರತಿಪಕ್ಷಗಳ ನಾಯಕರ ಸಭೆಯಿದ್ದು, ಉಪ ಸ್ಪೀಕರ್ ಹುದ್ದೆಗೂ ಇಂಡಿಯಾ ಒಕ್ಕೂಟದಿಂದ ಅಭ್ಯರ್ಥಿ ಇಳಿಸಲು ತಯಾರಿ ನಡೆದಿದೆ. ಯಾರು ಅಭ್ಯರ್ಥಿ ಅನ್ನೋದು ರಾತ್ರಿಯೇ ನಿರ್ಧಾರವಾಗಲಿದೆ. ಸ್ಪೀಕರ್ ಹುದ್ದೆಯ ವಿಚಾರದಲ್ಲಿ ಪ್ರತಿಪಕ್ಷದ ನಾಯಕರು ಟಿಡಿಪಿ ಮತ್ತು ಜೆಡಿಯು ನಾಯಕರ ಜೊತೆಗೂ ಮಾತುಕತೆ ನಡೆಸುತ್ತಿದ್ದಾರೆ.
ಎನ್ ಡಿಎ ಕೂಟಕ್ಕೆ ಬಹುಮತ ಇರುವುದರಿಂದ ಓಂ ಬಿರ್ಲಾ ಬಹುತೇಕ 18ನೇ ಲೋಕಸಭೆಯ ಸ್ಪೀಕರ್ ಆಗುವುದು ಖಚಿತವಾಗಿದ್ದು, ಅದು ಖಚಿತವಾದಲ್ಲಿ 1998ರ ಬಳಿಕ ಸತತ ಎರಡನೇ ಅವಧಿಗೆ ಒಬ್ಬರೇ ವ್ಯಕ್ತಿ ಸ್ಪೀಕರ್ ಸ್ಥಾನಕ್ಕೆ ಏರಿದಂತಾಗುತ್ತದೆ. 1996-98ರ 11ನೇ ಲೋಕಸಭೆಯಲ್ಲಿ ಪಿ.ಎ. ಸಂಗ್ಮಾ ಸತತ ಎರಡನೇ ಅವಧಿಗೆ ಸ್ಪೀಕರ್ ಹುದ್ದೆಗೇರಿದ್ದರು. ಮೋದಿ ಅವರ 2014ರ ಮೊದಲ ಅವಧಿಯಲ್ಲಿ ಸುಮಿತ್ರಾ ಮಹಾಜನ್ ಸ್ಪೀಕರ್ ಹುದ್ದೆಯಲ್ಲಿದ್ದರು. 2019ರಲ್ಲಿ ರಾಜಸ್ಥಾನದ ಕೋಟದಲ್ಲಿ ಎರಡನೇ ಬಾರಿಗೆ ಸಂಸದರಾಗಿದ್ದ ಓಂ ಬಿರ್ಲಾ ಅವರನ್ನು ಕೂರಿಸಲಾಗಿತ್ತು. ಈ ಬಾರಿ 41 ಸಾವಿರ ಮತಗಳಿಂದ ಬಿರ್ಲಾ ಸಂಸದರಾಗಿ ಗೆದ್ದುಕೊಂಡಿದ್ದರು.
The Congress-led INDIA opposition bloc has put forward Kodikunnil Suresh, an eight-time Congress MP from Kerala, for the position of Lok Sabha Speaker. This nomination has prompted a ‘first-ever’ situation in the Parliament. This will be the first time since India’s independence that an election for the post of Lok Sabha Speaker’s role will be held.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm