ಬ್ರೇಕಿಂಗ್ ನ್ಯೂಸ್
22-06-24 10:38 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 22: ಭಾರತ ಮೂಲದ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಆರೋಪದಲ್ಲಿ ಬ್ರಿಟನ್ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಹಿಂದೂಜಾ ಕುಟುಂಬದ ನಾಲ್ವರನ್ನು ಸ್ವಿಸ್ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿದ್ದು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜಿನೀವಾದಲ್ಲಿರುವ ಹಿಂದೂಜಾ ಕುಟುಂಬದ ಬಂಗಲೆಯಲ್ಲಿ ಈ ಘಟನೆ ನಡೆದಿತ್ತು. ಸ್ವಿಸ್ ಕೋರ್ಟ್ ಪ್ರಕಾಶ್ ಹಿಂದೂಜಾ ಮತ್ತು ಅವರ ಪತ್ನಿ ಕಮಲ್ ಹಿಂದುಜಾಗೆ 4.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಪುತ್ರ ಅಜಯ್ ಹಿಂದುಜಾ ಮತ್ತು ಅವರ ಪತ್ನಿ ನಮ್ರತಾ ಹಿಂದುಜಾ ಅವರಿಗೆ ತಲಾ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿದೆ.
ಕೋರ್ಟ್ ಆದೇಶದ ವಿರುದ್ಧ ನಾಲ್ವರು ಆರೋಪಿಗಳು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಹಿಂದೂಜಾ ಕುಟುಂಬದ ಸದಸ್ಯರು ತಮ್ಮ ಮನೆ ಕೆಲಸಕ್ಕಿದ್ದವರನ್ನು ಶೋಷಣೆಗೆ ಒಳಪಡಿಸಿದ್ದಲ್ಲದೆ, ಅನಾರೋಗ್ಯ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಹಿಂದೂಜಾ ಕುಟುಂಬವು ತನ್ನ ಉದ್ಯೋಗಿಗಳಿಗೆ ಅವರ ಕೆಲಸಕ್ಕಾಗಿ ನೀಡುತ್ತಿರುವ ಸಂಬಳವು ಸ್ವಿಟ್ಜರ್ಲೆಂಡ್‌ನಲ್ಲಿ ಅಂತಹ ಉದ್ಯೋಗಗಳಿಗೆ ನೀಡುವ ಸಂಬಳದ ಹತ್ತನೇ ಒಂದು ಭಾಗಕ್ಕಿಂತ ಕಡಿಮೆಯಾಗಿತ್ತು ಎಂದೂ ನ್ಯಾಯಾಲಯ ಹೇಳಿದೆ.
ಹಿಂದೂಜಾ ಗ್ರೂಪ್ ಭಾರತ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯಮ ಹೊಂದಿದ್ದು 37 ಬಿಲಿಯನ್ ಪೌಂಡ್ ಆಸ್ತಿ ಮೌಲ್ಯ ಹೊಂದಿದೆ. ಇವರ ಕುಟುಂಬವು ಸ್ವಿಜರ್ಲ್ಯಾಂಡ್ ದೇಶದ ಜಿನೇವಾದಲ್ಲಿದ್ದಾಗ ಮನೆ ಕೆಲಸದವರನ್ನು ಕೂಡಿಹಾಕಿ ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಮನೆ ಕೆಲಸದ ನೌಕರನ ಸಂಬಳಕ್ಕಿಂತ ಕುಟುಂಬ ಸದಸ್ಯರು ತಮ್ಮ ನಾಯಿಗೆ ಹೆಚ್ಚು ಖರ್ಚು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದಲ್ಲದೆ, ಉದ್ಯೋಗಿಗಳಿಗೆ ಸ್ವಿಸ್ ಫ್ರಾಂಕ್‌ಗಳ ಬದಲಿಗೆ ರೂಪಾಯಿಗಳಲ್ಲಿ ಪಾವತಿಸಲಾಗುತ್ತಿತ್ತು. ನೌಕರರು ದಿನಕ್ಕೆ 18 ಗಂಟೆಗೂ ಹೆಚ್ಚು ಮತ್ತು ಕೆಲವೊಮ್ಮೆ ರಜೆಯಿಲ್ಲದೆ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.
Four members of the UK's richest family have received prison sentences for exploiting staff brought over from India to work at their Geneva villa.Prakash and Kamal Hinduja, as well as their son Ajay and his wife Namrata, were found guilty of exploitation and illegal employment by a Swiss court and handed sentences ranging from four to four-and-a-half years.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm